ಗುರಗಾಂವ್​:ಹರಿಯಾಣ ರಾಜ್ಯದ ಗುರಗಾಂವ್ ನಗರದಲ್ಲಿ ಕನ್ನಡ ಸಂಘದ ವತಿಯಿಂದ 20 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಗುರಗಾಂವ್ ನಗರದ ವೈಶ್ ಸಮಾಜ ಧರ್ಮಶಾಲಾ ಸೆಕ್ಟರ್ 04 ನಲ್ಲಿ ಇದೇ ಸೋಮವಾರ 19-08-2024 ರಂದು ಆಯೋಜಿಸಲಾಗಿತ್ತು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಗುರಗಾಂವ್ ಕನ್ನಡ ಸಂಘವು ಗುರು ಹಿರಿಯರ ಮಾರ್ಗದರ್ಶನದಲ್ಲಿ ಕಳೆದ 20 ವರ್ಷಗಳಿಂದ ಭಕ್ತಿ, ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತದೆ.
ಈ ಸತ್ಯನಾರಾಯಣ ಪೂಜೆಯು 2004 ರಲ್ಲಿ ಯಾವ ರೀತಿ ಶುರುವಾಗಿ ಭಕ್ತಿ ಪ್ರೀತಿಯಿಂದ ಎಲ್ಲಾ ಕನ್ನಡಿಗರನ್ನು ಒಂದುಗೂಡಿಸಿ ಆಚರಿಸಲಾಗುತ್ತಿತ್ತೊ ಅದೇ ರೀತಿ ಅದೇ ಪ್ರೀತಿ ಶ್ರದ್ಧೆ ಭಕ್ತಿಮಯ ವಾತವರಣದಲ್ಲಿ ಇಂದಿಗೂ ಕೂಡ ಅದೇ ತರಹ ಆಚರಣೆ ಮಾಡಲಾಗುತ್ತದೆ. ಅಂದೂ 100 ಜನರ ಮಧ್ಯದಲ್ಲಿ ಶುರುವಾದ ಪೂಜೆ ಇಂದು 400 ರಿಂದ 500 ಕನ್ನಡಿಗರ ಮಧ್ಯದಲ್ಲಿ ಆಚರಣೆ ಮಾಡಲಾಗುತ್ತದೆ.
ಆಗಸ್ಟ್​ 19ರಂದು​ ನಡೆದ ಪೂಜೆಯಲ್ಲಿ ದೆಹಲಿ , ಭಿವಾಡಿ , ಫರಿದಾಬಾದ್‌ ಮತ್ತು ನೋಯಿಡಾ ನಗರಗಳಿಂದ ಕನ್ನಡ ಭಕ್ತಾದಿಗಳು ಅಗಮಿಸಿದ್ದರು. ಪೂಜೆ ಬೆಳಗ್ಗೆ 10:30 ಕ್ಕೆ ವಿನಯ್ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಶ್ರೀಮತಿ ಮತ್ತು ಶ್ರೀ ವಿಠ್ಠಲ್ ಬೀಳಗಿ ದಂಪತಿಗಳು ಪೂಜಾ ಕೈಂಕರ್ಯ ಭಾಗಿಗಳು ಆಗುವುದರ ಮೂಲಕ ಪೂಜೆ ಶುರುವಾಯಿತು.
ಇದನ್ನೂ ಓದಿ:VIDEO| ಜನನಿಬಿಡ ರಸ್ತೆಯಲ್ಲಿ ಕಂತೆ ಕಂತೆ ನೋಟು ಬಿಸಾಡಿದ ವ್ಯಕ್ತಿ! ದುಡ್ಡಿಗಾಗಿ ಮುಗಿಬಿದ್ದ ಸ್ಥಳೀಯರು
ವಿನಯ್ ಭಟ್ ಅವರು ಸಂಸ್ಕೃತದಲ್ಲಿ ಮಂತ್ರಗಳನ್ನು ಮತ್ತು ಕನ್ನಡದಲ್ಲಿ ಶ್ರೀ ಸತ್ಯನಾರಾಯಣ ವೃತ ಕಲ್ಪಿತ ಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿಯ ವೃತ ಕಥೆ, ನೈವೇದ್ಯ, ಮಹಾ ಮಂಗಳಾರತಿ ಪೂಜೆಗಳನ್ನು ನೆರವೇರಿಸಿದರು. ಪೂಜೆಯು ಅಪರಾಹ್ನ 01 ಗಂಟೆಗೆ ಮುಗಿಯಿತು. ಈ ಮಧ್ಯೆ ಗುರಗಾಂವ್ ಕನ್ನಡ ಸಂಘದ ಅಧ್ಯಕ್ಷರು ಕೃಷ್ಣಪ್ಪ ಎಂ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಹಾಗು ಸಾಬು ದರ್ಗಾ ಅವರು ಮುಖ್ಯ ಅತಿಥಿಗಳಾಗಿ ಬಂದ ಸಮಾಜ ಸೇವಕರು , ಪರಿಸರ ಪ್ರೇಮಿ ಹಾಗು ಬರುವ ಹರಿಯಾಣ ಶಾಸನಸಭೆಗೆ ಭಾಜಪ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ನವಿನ್ ಗೋಯಲ್ ಅವರಿಗೆ ಹೂ ಗೂಚ್ಛ ಶಾಲು ಹಾಗು ಮೊಮೆಂಟ್ ಕೊಡುವ ಮೂಲಕ ಸನ್ಮಾನಿಸಿ ಪರಿಚಯ ಮಾಡಿಸಿದರು.
ಮುಖ್ಯ ಅತಿಥಿ ನವೀನ್​ ಗೋಯೆಲ್​ ಮಾತನಾಡಿ, ಭಾರತ ದೇಶ ಬಹು ಸಂಸ್ಕ್ರತಿಯ ದೇಶ ಇಲ್ಲಿ ಸಂಸ್ಕ್ರತಿ ವಿನಿಮಯ ಆಗುವುದರಿಂದ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಹೀರೋ, ಹೊಂಡ , ಮಾರುತಿ ಸುಜುಕಿ ಕಂಪನಿಗಳಿಂದ ಸಾವಿರಾರು ಇತರ ರಾಜ್ಯಗಳ ಜನರು ಇಲ್ಲಿಗೆ ಸಂಸ್ಕೃತಿಯ ಜೊತೆಗೆ ಆರ್ಥಿಕವಾಗಿ ಹರಿಯಾಣ ರಾಜ್ಯವನ್ನು ಸದೃಢವಾಗಿ ಮಾಡಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 + 13 =
Remember me
