ನವದೆಹಲಿ:ದೇಶದ ಉತ್ತರ ರಾಜ್ಯಗಳಲ್ಲಿ ಈ ಬಾರಿ ಬಿಸಿಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ದೆಹಲಿ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದರಿಂದ ಆ ಭಾಗದ ಜನರು ಹೊರಗೆ ಬರಲು ಭಯಪಡುತ್ತಿದ್ದಾರೆ. ಆದರೆ ಎಷ್ಟೇ ಮಳೆ, ಗಾಳಿ, ರಣಬಿಸಿಲಿದ್ದರೂ ಟ್ರಾಫಿಕ್​ ಪೊಲೀಸರು ಮಾತ್ರ ರಸ್ತೆಗಳಲ್ಲಿ ನಿಂತೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಅವರ ಕಷ್ಟ ಅರಿತು ವಿಶೇಷವಾದ ಎಸಿ ಜಾಕೆಟ್‌ಗಳನ್ನು ಒದಗಿಸಲಾಗಿದೆ. ಇವುಗಳನ್ನು ಧರಿಸುವುದರಿಂದ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ:ತಿರುಪತ್ತೂರಿನ ಶಾಲೆಗೆ ಬಂದ ಚಿರತೆ..! ಬಳಿಕ ನಡೆದಿದ್ದೇನು?
ದೆಹಲಿ ಬಳಿಯ ಗುರುಗಾಂವ್​ನಲ್ಲಿ ಸಂಚಾರಿ ಪೊಲೀಸರಿಗೆ ಈ ಕೂಲಿಂಗ್ ಜಾಕೆಟ್‌ಗಳನ್ನು ವಿತರಿಸಲಾಗಿದೆ. ಹೀಗಾಗಿ ಈಗ ಪೊಲೀಸ್ ಸಿಬ್ಬಂದಿ ಈ ಜಾಕೆಟ್ ಧರಿಸಿ ಕೂಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಜಾಕೆಟ್ ಈ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಈ ಜಾಕೆಟ್ ನ ವಿಶೇಷತೆ ಎಂದರೆ 8 ಗಂಟೆಗಳ ಕಾಲ ಆರಾಮದಾಯಕ ತಾಪಮಾನವನ್ನು ಕಾಯ್ದುಕೊಳ್ಳಬಹುದು ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಜಾಕೆಟ್ ಒಳಗೆ ಅಂಗಿಯೊಂದಿಗೆ ಧರಿಸಬೇಕು ಎಂದು ಹೇಳಲಾಗಿದೆ.
#WATCH| Gurugram: Gurugram Police wear cooling jackets to beat the heat as the heat wave continues across the nation.pic.twitter.com/xKLiElzyOm
— ANI (@ANI)June 15, 2024

ಈ ಜಾಕೆಟ್ ಎರಡು ಸಣ್ಣ ಫ್ಯಾನ್​ಗಳನ್ನು ಹೊಂದಿದೆ. ಈ ಜಾಕೆಟ್ ಕಿಟ್‌ನ ಒಟ್ಟು ತೂಕ 500 ಗ್ರಾಂ. ಇದು ಲಿ-ಐಯಾನ್ ಬ್ಯಾಟರಿಯನ್ನು ಸಹ ಹೊಂದಿದೆ. ಈ ಜಾಕೆಟ್ ಪಿಸಿಎಂ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನದೊಂದಿಗೆ 15 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನವನ್ನು ಒದಗಿಸುತ್ತದೆ.
ಜಾಕೆಟ್‌ಗಳಿಗಾಗಿ ತಯಾರಿಸಲಾದ ಪಿಸಿಎಂ ಪೌಚ್‌ಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು. ಆದರೆ, ಈ ಜಾಕೆಟ್ ಗಳ ಬಗ್ಗೆ ತಿಳಿದ ಹಲವರು ಈ ಐಡಿಯಾ ಕೆಟ್ಟದ್ದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ನಮಗೂ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಹೇಗೆ ತೆಗೆದುಕೊಳ್ಳುವುದು ಎಂದು ಅವರು ಕೇಳುತ್ತಿದ್ದಾರೆ.
ಶಾರ್ವರಿ ದೃಢಹೆಜ್ಜೆ..ಮಹಿಳಾ ಪ್ರಧಾನ ಚಿತ್ರದಲ್ಲಿ ಆಲಿಯಾ ಭಟ್​ಗೆ ಸಾಥ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
