ಗುರುಗ್ರಾಮ:ಇನ್​​ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆಗೆ 1.80 ಕೋಟಿ ರೂ ವಂಚಿಸಿ ನೈಜೀರಿಯನ್​ ಪ್ರಜೆಗಳಿಬ್ಬರು ಪೊಲೀಸರ ಅತಿಥಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಬಂಧಿತರನ್ನು ಎಬುಕಾ ಫೆಲಿಕ್ಸಿ ಮತ್ತು ಚುಕ್ವಾಕಾ ಟೇಕನ್​ ಎಂದು ತಿಳಿದು ಬಂದಿದ್ದು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ರೈಂ ಬ್ರ್ಯಾಂಚ್​ ಎಸಿಪಿ ವರುಣ್​​ ದಹಿಯಾ ಕಳೆದ ವರ್ಷ(2022ರಲ್ಲಿ) ಇನ್​​ಸ್ಟಾಗ್ರಾಂ ಮೂಲಕ ಪರಿಚಯಾವದ ನೈಜೀರಿಯಾ ಮೂಲದ ವ್ಯಕ್ತಿ ಒಬ್ಬ ತನ್ನನ್ನು ಬ್ರಿಟಷ್​ ಏರ್​​ಲೈನ್ಸ್​ನಲ್ಲಿ ಪೈಲಟ್​ ಎಂದು ಮಹಿಳೆ ಬಳಿ ಪರಿಚಯಿಸಿಕೊಂಡಿದ್ದಾರೆ.
ಆರೋಪಿ ಮಹಿಳೆ ಜೊತೆ ನಿರಂತರವಾಗಿ ಚಾಟಿಂಗ್​ ಮಾಡುವ ಮೂಲಕ ಆಕೆಯ ನಂಬಿಕೆ ಗಳಿಸಿದ್ದ. ಆ ಬಳಿಕ ಒಂದು ದಿನ ಐಫೋನ್, ಆಭರಣ ಸೇರಿದಂತೆ ವಸ್ತುಗಳನ್ನು ತನ್ನ ಹೆಸರಿಗೆ ಕೊರಿಯರ್​ ಮೂಲಕ ಉಡುಗೊರೆ ಮೂಲಕ ಕಳುಹಿಸುತ್ತಿರುವುದಾಗಿ ಹೇಳಿದ್ದಾನೆ.
ಬಳಿಕ ಮಹಿಳೆಗೆ ವ್ಯಕ್ತಿ ಒಬ್ಬ ಕರೆ ಮಾಡಿದ್ದು ತನ್ನ ಹೆಸರಿಗೆ ಕೊರಿಯರ್​ ಮೂಲಕ ಕೆಲವು ವಸ್ತುಗಳು ಬಂದಿದ್ದು ಅದನ್ನು ಪಡೆಯಲು 35,000 ಸಾವಿರ ರೂಪಾಯಿ ತೆರಿಗೆ ಪಾವತಿಸುವಂತೆ ಸೂಚಿಸಿ ಬ್ಯಾಂಕ್​ ಖಾತೆಯ ವಿವರವನ್ನು ಕಳುಹಿಸಿದ್ದಾನೆ. ವಂಚಕನ ಮಾತಿನ ಪ್ರಕಾರ ಮಹಿಳೆ ಹಣವನ್ನು ಆತ ಹೇಳಿದ ಬ್ಯಾಂಕ್​ ಖಾತೆಗೆ ಜಮೆ ಮಾಡಿದ್ದಾರೆ.
ಇದನ್ನೂ ಓದಿ:ನನ್ನ ಮೇಲಿನ ಆರೋಪಗಳು ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಬ್ರಿಜ್​ ಭೂಷಣ್​ ಸಿಂಗ್​
ಮೊದಲಿಗೆ ಮಹಿಳೆ ಹಣ ಜಮೆ ಮಾಡಿದ ಬಳಿಕ ಎಚ್ಚೆತ್ತ ಆರೋಪಿಗಳು ಬಳಿಕ ಆಕೆಯಿಂದ ವಿವಿಧ ರೀತಿಯ ಶುಲ್ಕ ಹಾಗೂ ತೆರಿಗೆ ಕಟ್ಟುವಂತೆ ಸೂಚಿಸಿದ್ಧಾರೆ. ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯುಷ್ಟರಲ್ಲೇ ಮಹಿಳೆ ಆರೋಪಿಗಳಿಗೆ 1.80 ಕೋಟಿ ರೂಪಾಯಿ ಹಣ ಪಾವತಿಸಿದ್ದಳು.
ಈ ಬಗ್ಗೆ ಸೈಬರ್​ ಕ್ರೈಂ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು ಇದರ ಆಧಾರದ ಮೇಲೆ ಆರೋಪಿಗಳನ್ನು ದೆಹಲಿಯ ನಿಹಾಲ್​ ವಿಹಾರ್​ ಪೇಸ್​-2ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ 16 ಬ್ಯಾಂಕ್​ ಪಾಸ್​ಬುಕ್​, 25 ಎಟಿಎಂ ಕಾರ್ಡ್​, ವಿವಿಧ ಕಂಪನಿಯ ಸಿಮ್​ ಕಾರ್ಡುಗಳು, 10,000 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗಹ ಬಂಧನಕ್ಕೆ ಒಪ್ಪಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕ್ರೈಂ ಬ್ರ್ಯಾಂಚ್​ ಎಸಿಪಿ ವರುಣ್​​ ದಹಿಯಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
