ಮುಂಬೈ:ಬೀದಿ ನಾಯಿಗಳ ಗುಂಪೊಂದು ಪುಟ್ಟ ನಾಯಿ ಮರಿಯನ್ನು ಚಿರತೆಯಿಂದ ರಕ್ಷಿಸಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಅರೆ ಕಾಲನಿಯ ಸಮೀಪ ಚಿರತೆಯೊಂದು ಪುಟ್ಟ ನಾಯಿ ಮರಿಯನ್ನು ಹಿಡಿದುಕೊಂಡಿತ್ತು. ಆದರೆ ಒಂದಷ್ಟು ಬೀದಿ ನಾಯಿಗಳು ಗುಂಪಾಗಿ, ಆ ಚಿರತೆಯನ್ನು ಹಿಮ್ಮಟ್ಟಿಸಿ ನಾಯಿ ಮರಿಯನ್ನು ರಕ್ಷಿಸಿವೆ.
ಚಿರತೆಯ ಹಿಡಿತಕ್ಕೆ ಸಿಲುಕಿದ್ದ ನಾಯಿ ಮರಿಯ ಕುತ್ತಿಗೆ ಮತ್ತಿತರ ಕಡೆಗೆ ಗಾಯಗಳಾಗಿವೆ. ಅದರ ಜೀವವನ್ನು ಬೀದಿ ನಾಯಿಗಳು ಕಾಪಾಡಿದ ಬಳಿಕ, ಸ್ಥಳೀಯ ನಿವಾಸಿಯೋರ್ವರು ಅದನ್ನು ತೆಗೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ. ಅದರ ಗಾಯಗಳಿಗೆ ಚಿಕಿತ್ಸೆ ನೀಡಿಸಿದ್ದಾರೆ.
ಅರೆ ಕಾಲನಿಯ ಬಹುದೊಡ್ಡ ಕಾಡುಗಳಿಗೆ ಹೊಂದಿಕೊಂಡೇ ಒಂದಷ್ಟು ಮನೆಗಳಿವೆ. ಇಲ್ಲಿ ಕಾಡು ಪ್ರಾಣಿಗಳು ಮನೆಗಳ ಸಮೀಪ ಬರುತ್ತಿರುತ್ತವೆ. ಹಾಗೇ ಮಂಗಳವಾರ ರಾತ್ರಿ ಕಾಡಿನಿಂದ ಬಂದ ಚಿರತೆಗೆ, ಅಲ್ಲಿಯೇ ಮಲಗಿದ್ದ ಪುಟ್ಟ ನಾಯಿಮರಿಯೊಂದು ಕಣ್ಣಿಗೆ ಬಿತ್ತು. ಚಿರತೆ ಹಿಡಿಯುತ್ತಿದ್ದಂತೆ ನಾಯಿಮರಿಯೂ ಜೋರಾಗಿ ಕೂಗಿಕೊಂಡಿದೆ. ಆದರೆ ಚಿರತೆಯನ್ನು ನೋಡಿದ ಸ್ಥಳೀಯರು ಕೆಲವರು ಭಯದಿಂದ ಒಳಗೇ ಇದ್ದರು. ಚಿರತೆ ಆ ನಾಯಿಮರಿಯನ್ನು ಹಿಡಿದು ಎಳೆಯುತ್ತ ಕಾಡಿನೊಳಕ್ಕೆ ಹೋಗುತ್ತಿತ್ತು. ಅಷ್ಟರಲ್ಲೇ ಆ ನಾಯಿ ಮರಿಯ ತಾಯಿ ಸೇರಿ ಉಳಿದ ಬೀದಿ ನಾಯಿಗಳು ಚಿರತೆ ಮೇಲೆ ದಾಳಿ ಮಾಡಿವೆ ಎಂದು ಸ್ಥಳೀಯ ಮಹಿಳೆಯೊಬ್ಬರು ತಿಳಿಸಿದ್ದಾರೆ. ಕಳೆದ 10 ದಿನಗಳಿಂದ ಸುಮಾರು 6 ಬೀದಿ ನಾಯಿಗಳನ್ನು ಚಿರತೆ ಕೊಂದಿದೆ ಎಂದು ಮಹಿಳೆ ಹೇಳಿದ್ದಾರೆ.ಇದನ್ನೂ ಓದಿ:ಕನ್ನಡವನ್ನು ತಪ್ಪಾಗಿ ಬರೆದ ನಿರ್ದೇಶಕ ಯೋಗರಾಜ್​ ಭಟ್​; ಅದಕ್ಕೂ ಇಲ್ಲೊಂದು ಕಾರಣವಿದೆ..
ಆದರೆ, ಪದೇಪದೆ ಚಿರತೆ ದಾಳಿ ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಸ್ಥಳೀಯ ಅರಣ್ಯ ಅಧಿಕಾರಿ ಸಂತೋಷ್​ ಕಂಕ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − four =
Remember me
