ಗುವಾಹಟಿ:ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಮಾರಕ ವೈರಸ್​ ಕೊರೊನಾ ಗುಣವಾಗುತ್ತದೆ ಎಂದು ಅಸ್ಸಾಂನ ಅಧಿವೇಶನದಲ್ಲಿ ಬಿಜೆಪಿ ಶಾಸಕಿ ಸುಮನ್​ ಹರಿಪ್ರಿಯಾ ಹೇಳಿದ್ದಾರೆ.
ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್​ ಬಗ್ಗೆ ಮಾತನಾಡಿದ ಶಾಸಕಿ ಸುಮನ್​, ಗೋಮೂತ್ರ ಮತ್ತು ಗೋವಿನ ಸಗಣಿಗೆ ಕ್ಯಾನ್ಸರ್​ ಗುಣಪಡಿಸುವ ಶಕ್ತಿ ಇದೆ ಎಂದರು.
ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಣೆ ಮಾಡುತ್ತಿರುವ ವಿಷಯದ ಬಗ್ಗೆ ಅಧಿವೇಶನದಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನಮಗೆ ಗೊತ್ತಿರುವಂತೆ ಗೋಮೂತ್ರ ಸಿಂಪಡಿಸುವ ಮೂಲಕ ಸ್ಥಳವನ್ನು ಪರಿಶುದ್ಧಗೊಳಿಸುತ್ತೇವೆ. ಅದೇ ರೀತಿ ಗೋಮೂತ್ರದಿಂದ ಕೊರೊನಾ ವೈರಸ್​ನ್ನು ಗುಣ ಪಡಿಸಬಹುದು ಎಂದರು.
ಭಾರತದಲ್ಲಿ ಆಕಳನ್ನು ಪೂಜಿಸುತ್ತೇವೆ. ಅಲ್ಲದೆ ಗೋಮೂತ್ರವನ್ನು ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದಕ್ಕೆ ಭಾರತ ಸಂಸ್ಕೃತಿಯಲ್ಲಿ ಸುದೀರ್ಘವಾದ ಇತಿಹಾಸವಿದೆ.
ಸಗಣಿಯನ್ನು ಕೂಡ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳಿಗಾಗಿ, ಔಷಧಕ್ಕಾಗಿ, ಗೋಬರ್​ ಗ್ಯಾಸ್​ನ ಮೂಲಕ ಇಂಧನಕ್ಕಾಗಿ ಬಳಸಲಾಗುತ್ತದೆ ಎಂದರು.
ಬಾಂಗ್ಲಾದೇಶದ ಆರ್ಥಿಕತೆ ಬಲಗೊಂಡಿದ್ದಕ್ಕೆ ಭಾರತದಿಂದ ಜಾನುವಾರುಗಳ ಕಳ್ಳ ಸಾಗಣೆ ಮಾಡಿಕೊಂಡದ್ದೇ ಕಾರಣ. ಈಗ ಬಾಂಗ್ಲಾ ದೇಶವು ವಿಶ್ವದಲ್ಲಿ ದನದ ಮಾಂಸ ಮಾರಾಟಕ್ಕೆ ಎರಡನೇ ಸ್ಥಾನ ಪಡೆದಿದೆ. ಈ ಎಲ್ಲ ಜಾನುವಾರುಗಳು ಭಾರತ ದೇಶದವು. ಈ ಮೊದಲು ಇದ್ದ ಕಾಂಗ್ರೆಸ್​ ಸರ್ಕಾರ ಜಾನುವಾರುಗಳ ಕಳ್ಳ ಸಾಗಣೆ ನಿಯಂತ್ರಣಕ್ಕೆ ಯಾವ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಬೇಸರಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
