ಗ್ವಾಲಿಯರ್:ಪಾರ್ಕ್​ನಲ್ಲಿ ಹಿಂಬಾಲಿಸಿಕೊಂಡು ಬಂದು ತೊಂದರೆ ಮಾಡುತ್ತಿದ್ದ ಯುವಕನಿಗೆ ಸಾರ್ವಜನಿಕವಾಗಿ ಯುವತಿಯೊಬ್ಬಳು ಚಪ್ಪಲಿಯೇಟು ನೀಡಿದ್ದಾಳೆ. ಸದ್ಯ ಯುವತಿಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ.
ಇದನ್ನೂ ಓದಿ:ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಐಪಿಎಲ್ ನಡೆದರೆ ಕಳ್ಳರಿಗೆ ಖುಷಿಯಂತೆ! ಇದಕ್ಕೆ ಕಾರಣ ಇಲ್ಲಿದೆ…
#Watch| A girl grabs the stalker by collar, beats him with her shoe in#Gwaliorpark. The accused would repeatedly call her and her sister and#harassthem.#harassment#women#stalkingpic.twitter.com/rF53RmJRtN— Free Press Madhya Pradesh (@FreePressMP)April 25, 2023
#Watch| A girl grabs the stalker by collar, beats him with her shoe in#Gwaliorpark. The accused would repeatedly call her and her sister and#harassthem.#harassment#women#stalkingpic.twitter.com/rF53RmJRtN
ವರದಿಯ ಪ್ರಕಾರ ಆರೋಪಿ ಯುವಕ ಯುವತಿಯನ್ನು ಪದೇ ಪದೇ ಹಿಂಬಾಲಿಸಿಕೊಂಡು ಬರುತ್ತಿದ್ದ. ಅಲ್ಲದೆ ಆಕೆಯ ಸಹೋದರಿಗೆ ಫೋನ್ ಕರೆ ಮಾಡಿ ನಿತ್ಯ ಕಿರುಕುಳ ನೀಡುತ್ತಿದ್ದ. ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ, ಯುವಕನನ್ನು ಝಲ್ಕರಿ ಬಾಯಿ ಪಾರ್ಕ್‌ಗೆ ಕರೆಸಿದ್ದಾಳೆ. ಬಳಿಕ ಕಾಲರ್ ಪಟ್ಟಿ ಹಿಡಿದು ಚಪ್ಪಲಿಯೇಟು ನೀಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡ್ತಾರೆ… ಬರೀ ಮೊಸರನ್ನ ತಿಂತಾರೆ; ಅನಿತಾ ಕುಮಾರಸ್ವಾಮಿ
ಯುವತಿ ಚಪ್ಪಲಿಯೇಟು ನೀಡುತ್ತಿರುವದನ್ನು ಸ್ಥಳೀಯರು ಗಮನಿಸಿದ್ದಾರೆ. ಆಕೆ ತನ್ನ ಸಮಸ್ಯೆಯನ್ನು ವಿವರಿಸುತ್ತಿದ್ದಂತೆ ಸಾರ್ವಜನಿಕರು ಯುಕನನ್ನು ಥಳಿಸಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
