ವಾಷಿಂಗ್ಟನ್:ಎಚ್-1ಬಿ ವೀಸಾ ಮೇಲೆ ಅಮೆರಿಕದಲ್ಲಿರುವ ವಿದೇಶಿ ನಾಗರಿಕರು ಮತ್ತು ಗ್ರೀನ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರ ದಾಖಲಾತಿ ಪರಿಶೀಲನೆಯ ಗಡುವನ್ನು 60 ದಿನ ವಿಸ್ತರಿಸಲಾಗಿದೆ. ಕರೊನಾ ಕಾರಣ ಹೆಚ್ಚುವರಿ ಕಾಲಾವಕಾಶ ನೀಡುವ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಕೈಗೊಂಡಿದೆ. ಇದರಿಂದ ಭಾರತೀಯರು ಸೇರಿ ವಿವಿಧ ದೇಶಗಳಿಂದ ಬಂದಿರುವ ಸಾವಿರಾರು ಉದ್ಯೋಗಿಗಳ ಆತಂಕ ಎರಡು ತಿಂಗಳ ಮಟ್ಟಿಗೆ ದೂರವಾಗಿದೆ.
ಟ್ರಂಪ್ ಅಧ್ಯಕ್ಷರಾದ ನಂತರ ‘ಅಮೆರಿಕ ಮೊದಲು’ ನೀತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರ ಅನ್ವಯ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ಸಿಗುವಂತೆ ಮಾಡಲು ವಿದೇಶಗಳಿಂದ ನೌಕರರನ್ನು ಕರೆಯಿಸಿಕೊಳ್ಳುವುದಕ್ಕೆ ನಿರ್ಬಂಧ ಮಾಡಲಾಯಿತು. ಈ ನಿಮಿತ್ತ ಎಚ್-1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಲಾಯಿತು. ವೀಸಾ ಅವಧಿ ಮುಗಿದ ಮೇಲೂ ಅಮೆರಿಕದಲ್ಲಿದ್ದವರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕ್ರಮಗಳು ಜಾರಿಯಾಗಿ, ಸ್ವದೇಶಕ್ಕೆ ಗಡಿಪಾರು ಮಾಡಲಾಯಿತು.
2019ರಲ್ಲಿ ಭಾರತೀಯರಿಗೆ ಇಬಿ1 ವಿಭಾಗದಲ್ಲಿ 9,008, ಇಬಿ2 ವಿಭಾಗದಲ್ಲಿ 2,908 ಮತ್ತು ಇಬಿ3 ವಿಭಾಗದಲ್ಲಿ 5,083 ಗ್ರೀನ್​ಕಾರ್ಡ್ ವಿತರಣೆಯಾಗಿದೆ.
ಇದನ್ನೂ ಓದಿ:ಹಾಲಿವುಡ್ ಸಿನಿಮಾ ಬಿಟ್ಟು, ಲಾಕ್​​ಡೌನ್​ ಹೊತ್ತಲ್ಲಿ ಅಮೆರಿಕ ಮಂದಿಗೆ ಇಷ್ಟವಾಯ್ತು ಇಂಡಿಯನ್​ ಸಿನಿಮಾ
ಗ್ರೀನ್ ಕಾರ್ಡ್ ಎಂಬುದು ಅನೇಕ ವರ್ಷ ಗಳಿಂದ ಅಮೆರಿಕದಲ್ಲಿರುವ ವಲಸಿಗರಿಗೆ ಕಾಯಂ ಪೌರತ್ವ ಕಲ್ಪಿಸುವ ರಹದಾರಿ. ಇದನ್ನು ಪೌರತ್ವ ಮತ್ತು ವಲಸೆ ಸೇವಾ ಇಲಾಖೆ (ಯುಎಸ್​ಸಿಐಎಸ್) ವಿತರಣೆ ಮಾಡುತ್ತದೆ. ಗ್ರೀನ್​ಕಾರ್ಡ್ ಪಡೆಯಲು ಲಕ್ಷಾಂತರ ಅರ್ಜಿ ಸಲ್ಲಿಕೆಯಾಗಿದ್ದು, ಸರದಿ, ವಲಸೆಯ ಜ್ಯೇಷ್ಠತೆಗೆ ಅನುಗುಣವಾಗಿ ಅನುಮತಿ ನೀಡಲಾಗುತ್ತದೆ. ವರ್ಷಕ್ಕೆ ಗರಿಷ್ಠ 1.40 ಲಕ್ಷ ಗ್ರೀನ್​ಕಾರ್ಡ್ ವಿತರಣೆಗೆ ಅವಕಾಶವಿದ್ದು, ದೇಶವಾರು ಹಂಚಿಕೆ ಪ್ರಮಾಣ ಶೇಕಡಾ 7.
ಎಚ್- 1ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ನಿಗದಿತ ಅವಧಿಗಷ್ಟೆ ಇದನ್ನು ನೀಡಲಾಗುತ್ತದೆ. ಈ ವೀಸಾದ ಆಧಾರದ ಮೇಲೆ ಅಮೆರಿಕದ ಕಂಪನಿಗಳು ತಾಂತ್ರಿಕವಾಗಿ ಹೆಚ್ಚು ನಿಪುಣರಾದ ವಿದೇಶಿ ನೌಕರರನ್ನು ತಮ್ಮಲ್ಲಿಗೆ ಕರೆಸಿಕೊಳ್ಳುತ್ತವೆ. ಈ ರೀತಿ ವೀಸಾ ಮೇಲೆ ಭಾರತ ಮತ್ತು ಚೀನಾದಿಂದ ಸಹಸ್ರಾರು ಉದ್ಯೋಗಿಗಳು ಪ್ರತಿ ವರ್ಷ ಅಮೆರಿಕಕ್ಕೆ ಆಗಮಿಸುತ್ತಾರೆ. ಅವಧಿ ಮುಗಿದ ನಂತರ ಅದನ್ನು ನವೀಕರಿಸಿಕೊಳ್ಳಬೇಕು ಇಲ್ಲವೆ, ಸ್ವದೇಶಕ್ಕೆ ತೆರಳಬೇಕು. ಪ್ರತಿ ವರ್ಷ ಗರಿಷ್ಠ 65 ಸಾವಿರ ಎಚ್- 1ಬಿ ವೀಸಾಗಳನ್ನು ಅಮೆರಿಕ ವಿತರಣೆ ಮಾಡುತ್ತದೆ. ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಿಂದ ಸ್ನಾತಕೋತ್ತರ ಅಥವಾ ಹೆಚ್ಚಿನ ಪದವಿ ಪಡೆದ ವಿದೇಶಿಗರಿಗೆ ಹೆಚ್ಚುವರಿಯಾಗಿ 20 ಸಾವಿರ ಎಚ್-1 ಬಿ ವೀಸಾ ಮಂಜೂರು ಮಾಡಲಾಗುತ್ತದೆ.
ಇದನ್ನೂ ಓದಿ:ಭಾರತೀಯರಿಗೆ ಮತ್ತೆ ಎಚ್-1ಬಿ ಸಂಕಷ್ಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
