ವಾಷಿಂಗ್ಟನ್​:ಡಿಸೆಂಬರ್​ನಲ್ಲಿ ಕೆಲವು ವರ್ಗಗಳ ಎಚ್​-1ಬಿ ವೀಸಾ ನವೀಕರಣಕ್ಕಾಗಿ ಪ್ರಾಯೋಗಿಕ ಕಾರ್ಯಕ್ರಮ ಪ್ರಾರಂಭಿಸಲು ಅಮೆರಿಕ ಸಿದ್ಧವಾಗಿದೆ. ಇದರಿಂದ ಭಾರತೀಯ ವೃತ್ತಿಪರರಿಗೆ ಹೆಚ್ಚು ಪ್ರಯೋಜನ ಆಗಲಿದೆ.
ಡಿಸೆಂಬರ್​ನಿಂದ 3 ತಿಂಗಳ ಕಾಲ ಅಮೆರಿಕದಲ್ಲಿರುವ ಎಚ್​-1ಬಿ ವೀಸಾದಾರರು ತಮ್ಮ ದೇಶಕ್ಕೆ ಹೋಗದೆ ವೀಸಾ ನವೀಕರಿಸಬಹುದು. ಪ್ರಸ್ತುತ ದೇಶದಲ್ಲಿರುವ ವಿದೇಶಿ ಪ್ರಜೆಗಳಿಗೆ 20,000 ವೀಸಾಗಳನ್ನು ನೀಡಲು ನಿರ್ಧರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಭಾರತೀಯರು. ಅವರು ವೀಸಾ ನೇಮಕಾತಿಗಾಗಿ ಭಾರತಕ್ಕೆ ಹೋಗಬೇಕಾಗಿಲ್ಲ. ಬದಲಿಗೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಗಳ ಹೊಸ ಅಪ್ಲಿಕೇಶನ್​ಗಳತ್ತ ಗಮನ ಹರಿಸಬಹುದು ಎಂದು ವೀಸಾ ಸೇವೆಗಳ ರಾಜ್ಯ ಉಪಸಹಾಯಕ ಕಾರ್ಯದರ್ಶಿ ಜೂಲಿ ಸ್ಟಫಟ್​ ಹೇಳಿದ್ದಾರೆ.
ಅಮೆರಿಕದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಎಚ್​&1ಬಿ ವೀಸಾ ಕಡ್ಡಾಯವಾಗಿದೆ. ಈ ವರ್ಷದ ಜೂನ್​ನಲ್ಲಿ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಶ್ವೇತಭವನ ಈ ಯೋಜನೆಯ ಅಧಿಕೃತ ೂಷಣೆ ಮಾಡಿತ್ತು. ಅಮೆರಿಕದ ವೀಸಾಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ.
ಭಾರತೀಯರಿಗೆ ವೀಸಾ ನೀಡುವಲ್ಲಿ ಅಮೆರಿಕ ದಾಖಲೆ ಸೃಷ್ಟಿಸಿದೆ. ಕಳೆದ ವರ್ಷ ಭಾರತೀಯ ವಿದ್ಯಾರ್ಥಿಗಳಿಗೆ 1,40,000 ವೀಸಾಗಳನ್ನು ನೀಡಲಾಗಿದೆ. ಅಮೆರಿಕ 2022ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ವೀಸಾಗಳನ್ನು ನೀಡಿದ ದೇಶವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twenty =
Remember me
