ಅಹಮದಾಬಾದ್​:ಆನ್​ಲೈನ್​ ತರಗತಿಗಳು ಆರಂಭವಾದಾಗಿನಿಂದ ಸೈಬರ್​ ಕ್ರೈಂಗಳ ಸಂಖ್ಯೆಯೂ ಹೆಚ್ಚಾಗಿದೆ. ಅದೇ ರೀತಿ ಪರೀಕ್ಷೆಯನ್ನು ಮುಂದೂಡಲು ಬೆದರಿಕೆ ಹಾಕಿದ ಹ್ಯಾಕರ್​ ಒಬ್ಬ, ಅದಕ್ಕೆ ಕಾಲೇಜಿನವರು ಒಪ್ಪದಿದ್ದಾಗ ಆನ್​ಲೈನ್​ ತರಗತಿಯಲ್ಲಿ ಬೆತ್ತಲೆ ಫೋಟೋಗಳನ್ನು ಬಿಟ್ಟಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.
ಬುಧವಾರದಂದು 12ನೇ ತರಗತಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿ ನಡೆಸಲಾಗುತ್ತಿತ್ತು. ಈ ವೇಳೆ ಯಾವುದೋ ಅಪರಿಚಿತ ವ್ಯಕ್ತಿಯೊಬ್ಬ ಜೂಮ್​ ತರಗತಿಗೆ ಜಾಯ್ನ್​​ ಆಗಿದ್ದಾನೆ. ವಿಡಿಯೋ ಆನ್ ಮಾಡಿಕೊಳ್ಳದೆಯೇ, ಬೆತ್ತಲೆ ಫೋಟೋಗಳಿದ್ದ ವೆಬ್​ಸೈಟ್​ ಲಿಂಕ್​ಗಳನ್ನು ಚಾಟ್​ನಲ್ಲಿ ಕಳುಹಿಸಲಾರಂಭಿಸಿದ್ದಾನೆ. ಅದನ್ನು ಕಂಡೊಡನೆ ಶಿಕ್ಷಕರು ತರಗತಿಯನ್ನು ಮುಗಿಸಿದ್ದಾರೆ. ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಈ ಹಿಂದೆ ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಹ್ಯಾಕರ್​ ಒಬ್ಬನಿಂದ ಬೆದರಿಕೆ ಬಂದಿತ್ತಂತೆ. ಈ ವಿಚಾರವಾಗಿ ಕಾಲೇಜು ಆಡಳಿತ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು. ಆದರೆ ಸೈಬರ್​ ಕ್ರೈಂ ಪೊಲೀಸರು ಹ್ಯಾಕರ್​ನನ್ನು ಹುಡುಕುವಲ್ಲಿ ವಿಫಲವಾಗಿದ್ದರು. ಇದೀಗ ಅದೇ ಹ್ಯಾಕರ್​ನಿಂದ ಈ ಕೃತ್ಯವಾಗಿರುವ ಅನುಮಾನವನ್ನು ಕಾಲೇಜು ಆಡಳಿತ ವ್ಯಕ್ತಪಡಿಸಿದೆ. (ಏಜೆನ್ಸೀಸ್​)
ಮೂರು ಜನನಾಂಗದೊಂದಿಗೆ ಜನಿಸಿದ ಮಗು! ವಿಶ್ವದಲ್ಲೇ ಮೊದಲೆಂದ ವೈದ್ಯರು

ಮದುವೆ ಉಡುಗೆಯಲ್ಲೇ ಗಿನ್ನೆಸ್​ ರೆಕಾರ್ಡ್​! ಆಕೆ ಧರಿಸಿದ್ದು 7 ಕಿಮೀ ಉದ್ದದ ಗೌನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 15 =
Remember me
