ನವದೆಹಲಿ:ಮಧ್ಯ ಪ್ರದೇಶದ ವೇಗದ ಬೌಲರ್ ಈಶ್ವರ್ ಪಾಂಡೆ ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಇನ್ಸ್​​ಟಾಗ್ರಾಂ ಖಾತೆಯ ಮೂಲಕ ನಿವೃತ್ತಿ ಘೋಷಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಮಧ್ಯಪ್ರದೇಶ ಹಾಗೂ ಕೇಂದ್ರ ವಲಯವನ್ನು ಪ್ರತಿನಿಧಿಸಿರುವ 33 ವರ್ಷದ ಈಶ್ವರ್ ಪಾಂಡೆ 75 ಪಂದ್ಯಗಳನ್ನು ಆಡಿ 263 ವಿಕೆಟ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜಾಯಿಂಟ್ಸ್ ಹಾಗೂ ಪುಣೆ ವಾರಿಯರ್ಸ್ ಪರ 25 ಐಪಿಎಲ್ ಪಂದ್ಯ ಆಡಿ 18 ವಿಕೆಟ್ ಪಡೆದಿದ್ದಾರೆ.
“ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ. 2007 ರಿಂದ ಇಲ್ಲಿವರೆಗೆ ಮೈದಾನದ ಒಳಗೂ, ಹೊರಗೂ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆದಿದ್ದೇನೆ. ಮತ್ತೆ ನನ್ನ ಆರಂಭಿಕ ಬದುಕಿನತ್ತ ಸಾಗುತ್ತಿದ್ದೇನೆ. ಈ ಬಗ್ಗೆ ತೃಪ್ತಿಯಿದೆ. ನನ್ನ ಸಾಧನೆ ಹಾಗೂ ಬದುಕಿನ ಬಗ್ಗೆ ಹೆಮ್ಮೆಯಿದೆ. ಸಣ್ಣ ಹಳ್ಳಿಯಿಂದ ಬಂದು ಕ್ರಿಕಟ್ ಅಡುವ ಕನಸನ್ನು ನನಸಾಗಿಸಿದ್ದೇನೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 20 ಕಿ.ಮೀ ಸೈಕಲ್ ತುಳಿದುಕೊಂಡು ಕ್ರಿಕೆಟ್ ಅಭ್ಯಾಸ ಮಾಡಲು ತೆರಳುತ್ತಿದ್ದೆ. ದಿನದ 24 ಗಂಟೆಯೂ ನನ್ನ ಗಮನ ಮತ್ತು ಆಲೋಚನೆ ಕ್ರಿಕೆಟ್ ಕಡೆಗೆ ಇತ್ತು. ಅಂತೆಯೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆಯಾದೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ನಾನು ಇನ್ನು ಮುಂದೆ ಅನ್​ಕ್ಯಾಪ್ಡ್ ಭಾರತೀಯ ಕ್ರಿಕೆಟ್ ಆಟಗಾರ ಎಂದು ಗುರುತಿಸಿಕೊಳ್ಳುತ್ತೇನೆ. ಈ ಬಗ್ಗೆ ನನಗೆ ದುಃಖವಿದೆ.
ಕ್ರಿಕೆಟ್​​ ಸ್ಟಾರ್​​ಗಳಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ, ಭುವನೇಶ್ವರ್​ ಕುಮಾರ್ ಅವರ ಜತೆಗೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಮಯ ಕಳೆದಿದ್ದೇನೆ. ಬಾಲ್ಯದಲ್ಲಿ ನಾನು ಕ್ರಿಕೆಟ್​ ನೋಡಲು ಆರಂಭಿಸಿದ್ದು ಸಚಿನ್ ಕಾಲದಿಂದ. ಐಪಿಎಲ್​​ನಲ್ಲಿ ಅವರ ವಿರುದ್ಧ ಆಡಿದ್ದು ಸ್ಮರಣೀಯ ನೆನಪು” ಎಂದು ನಿವೃತ್ತಿಯ ಬಗ್ಗೆ ಈಶ್ವರ್ ಪಾಂಡೆ ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿಸಿಸಿಐ, ಐಪಿಎಲ್ ಫ್ರಾಂಚೈಸಿ, ಹಾಗೂ ಕೋಚ್ ಸ್ಟೀಫನ್ ಫ್ಲೇಮಿಂಗ್​ ಹಾಗೂ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್​​ಗೆ ಧನ್ಯವಾದ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
