ಲಖನೌ:ಪೊಲೀಸರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡು ಗುರುವಾರ ಮಧ್ಯಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುಖ್ಯಾತ ರೌಡಿ ವಿಕಾಸ್​ ದುಬೆ, ಅಂದು ರಾತ್ರಿ ಪೊಲೀಸರ ಶವಗಳನ್ನು ಪಾಳುಬಾವಿಗೆ ಎಸೆದು, ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಬೇಕು ಎಂದುಕೊಂಡೆ. ಆದರೆ, ಅದು ಸಾಧ್ಯವಾಗದೆ ಅನಿವಾರ್ಯವಾಗಿ ಪರಾರಿಯಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.
ಪೊಲೀಸರು ದಾಳಿ ಮಾಡುವ ಮಾಹಿತಿ ಆಪ್ತ ಪೊಲೀಸ್​ ಸಿಬ್ಬಂದಿಯ ಮೂಲಕ ಸಿಕ್ಕಿತ್ತು. ಹಾಗಾಗಿ, ಶಸ್ತ್ರಸಜ್ಜಿತರಾಗಿ ಬರುವಂತೆ ನನ್ನ ಹಿಂಬಾಲಕರಿಗೆ ಸೂಚನೆ ರವಾನಿಸಿದೆ. ಆಯಕಟ್ಟಿನ ಜಾಗದಲ್ಲಿ ಕುಳಿತ ಅವರೆಲ್ಲರೂ ನನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ತಿಳಿಸಿದ್ದಾನೆ.
ಇದನ್ನೂ ಓದಿ:‘ಗ್ಯಾಂಗ್​​ಸ್ಟರ್​ ವಿಕಾಸ್​ ದುಬೆ ಬಂಧನದ ಬಗ್ಗೆಯೇ ಅನುಮಾನ…’
ಪೊಲೀಸರ ತಂಡ ತನ್ನನ್ನು ಎನ್​ಕೌಂಟರ್​ ಮಾಡಿ ಸಾಯಿಸಲು ಬರುತ್ತಿದೆ ಎಂಬ ಆತಂಕದಲ್ಲಿ ತಾನು ಪೊಲೀಸ್​ ತಂಡದ ಮೇಲೆ ದಾಳಿ ಮಾಡಿದ್ದಾಗಿ ಆತ ಹೇಳಿದ್ದಾನೆ.
ದಾಳಿಯಲ್ಲಿ ಹತರಾದ ಪೊಲೀಸ್​ ಸಿಬ್ಬಂದಿಯ ಶವಗಳನ್ನು ತಾನು ಅದಾಗಲೆ ಪಾಳುಬಾವಿಗೆ ಹಾಕಿದ್ದಾಗಿತ್ತು. ಪೆಟ್ರೋಲ್​ ಸುರಿದು ಬೆಂಕಿ ಹೆಚ್ಚಬೇಕೆನ್ನುವಷ್ಟರಲ್ಲಿ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗಾಗಿ ತಾನು ಪರಾರಿಯಾಗಿದ್ದಾಗಿ ಪುನರುಚ್ಚರಿಸಿದ್ದಾನೆ.
ನನಗೆ ಬಂದ ಮಾಹಿತಿಯ ಪ್ರಕಾರ ಪೊಲೀಸರು ಬೆಳಗ್ಗೆ ದಾಳಿ ಮಾಡಬೇಕಿತ್ತು. ದುರದೃಷ್ಟವಶಾತ್​ ಅವರು ರಾತ್ರಿಯೇ ದಾಳಿ ಮಾಡಿಬಿಟ್ಟರು. ನಮಗೆ ಊಟ ಕೂಡ ಮಾಡಲೂ ಸಾಧ್ಯವಾಗಲಿಲ್ಲ ಎಂದು ಅಲವತ್ತುಕೊಂಡಿದ್ದಾನೆ.
10ನೇ ತರಗತಿಯಲ್ಲಿ ಪ್ರಥಮ ದರ್ಜೆಯ ತೇರ್ಗೆಡೆಯಾದ ಬಡವಿದ್ಯಾರ್ಥಿನಿಗೆ ಸಿಕ್ಕ ಉಡುಗೊರೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
