ಬೆಂಗಳೂರು:ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್​ಗಳು (ಎಲ್​ಯುುಎಚ್) ಹಿಮಾಲಯದ ಅತಿ ಎತ್ತರದ ಮತ್ತು ಅತ್ಯಂತ ಶಾಖ ಪ್ರದೇಶದಲ್ಲಿನ ಹಾರಾಟವನ್ನು ಯಶಸ್ವಿಯಾಗಿ ನಡೆಸಿವೆ. ಲಡಾಖ್​ನ ಲೇಹ್ ಮತ್ತು ದೌಲತ್ ಬೇಗ್ ಓಲ್ಡಿ ಭಾಗದ ಹಿಮಾಲಯದ ಶ್ರೇಣಿಯಲ್ಲಿ ಕಳೆದ ಹತ್ತು ದಿನಗಳಿಂದ ಎಲ್​ಯುುಎಚ್​ಗಳ ಸಮಗ್ರ ಪ್ರಾತ್ಯಕ್ಷಿಕೆ ನಡೆದಿದ್ದು, ಸಮುದ್ರಮಟ್ಟದಿಂದ 3300 ಮೀಟರ್ ಎತ್ತರದ ಪ್ರದೇಶದಲ್ಲಿ ವಿವಿಧ ಹವಾಗುಣದಲ್ಲಿ ಹೆಲಿಕಾಪ್ಟರ್​ಗಳು ಹಾರಾಟ ನಡೆಸಿವೆ.
ಎಲ್​ಯುುಎಚ್​ಗಳು ನೀಡಿದ ಪ್ರಾತ್ಯಕ್ಷಿಕೆ ತೃಪ್ತಿಕರವಾಗಿದ್ದು, ಇದರಿಂದ ಈ ಹೆಲಿಕಾಪ್ಟರ್ ಮತ್ತು ಅದರ ವ್ಯವಸ್ಥೆಗಳು ಬಳಕೆದಾರರ ಅವಶ್ಯಕತೆಯನ್ನು ಪೂರೈಸುತ್ತವೆ ಎಂಬುದು ಸಾಬೀತಾಗಿದೆ ಎಂದು ಎಚ್​ಎಎಲ್​ನ ಇಂಜಿನಿಯರಿಂಗ್, ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಅರುಪ್ ಚಟರ್ಜಿ ಹೇಳಿದ್ದಾರೆ.
* ಜಗತ್ತಿನ ಅತಿ ಎತ್ತರದ ಸಮರ ಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಸಾಮಗ್ರಿ ಸಾಗಿಸುವ ಸಾಮರ್ಥ್ಯ* ಲೇಹ್​ನಲ್ಲಿ ಸಮುದ್ರಮಟ್ಟದಿಂದ 3300 ಮೀಟರ್ ಎತ್ತರದಲ್ಲಿ ಹಾರಾಟ* ದೌಲತ್ ಬೇಗ್ ಓಲ್ಡಿಯಲ್ಲಿ ಸಮುದ್ರ ಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿರುವ ಅತ್ಯಾಧುನಿಕ ವೈಮಾನಿಕ ನಿಲ್ದಾಣದಲ್ಲಿ ಲ್ಯಾಂಡ್* ಹಿಮಾಲಯದ ಅತಿ ಎತ್ತರದ ಹೆಲಿಪ್ಯಾಡ್​ಗಳಾದ ಅಮರ್ ಮತ್ತು ಸೋನಂಗಳಲ್ಲಿ ಸುರಕ್ಷಿತ ಲ್ಯಾಂಡ್
ನಿಮ್ಮ ನಾಯಿ ನಿಮ್ಗೆ ಈಕ್ವಲಾ?- ದೂರುದಾರನಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
