ಬೆಂಗಳೂರು:ದೇಶದ ರಕ್ಷಣೆಗಾಗಿ ಸ್ವದೇಶಿ ತಂತ್ರಜ್ಞಾನದಲ್ಲಿ ಫೈಟರ್ ಜೆಟ್, ಹೆಲಿಕಾಪ್ಟರ್​ಗಳನ್ನು ಅಭಿವೃದ್ಧಿಪಡಿಸುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್​ಎಎಲ್) ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಬಳಸುವ ಧ್ರುವ್ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ (ಎಎಲ್​ಎಚ್) 300ನೇ ಹೆಲಿಕಾಪ್ಟರ್ ಅಭಿವೃದ್ಧಿಪಡಿಸಿದೆ.
ದೇಶದ ಹೆಮ್ಮೆಯ ಸಂಸ್ಥೆಯಾದ ಎಚ್​ಎಎಲ್​ನ ಸಾಧನೆಗೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ರಕ್ಷಣಾ ವಲಯದಲ್ಲಿ ಬಳಕೆಯಾಗುವ ಭಾರತೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಧ್ರುವ್ ಎಎಲ್​ಎಚ್ 300ನೇ ಹೆಲಿಕಾಪ್ಟರ್ ಸಿದ್ಧಪಡಿಸಲಾಗಿದೆ. ಆ ಹೆಲಿಕಾಪ್ಟರ್ ಅನ್ನು ಎಚ್​ಎಎಲ್ ಹೆಲಿಕಾಪ್ಟರ್ ಕಾಂಪ್ಲೆಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ಎಸ್. ಭಾಸ್ಕರ್ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಧ್ರುವ್ ಹಲವು ವೈಶಿಷ್ಟ್ಯತೆಯನ್ನು ಹೊಂದಿದ್ದು, ಹಾರಾಟ ನಡೆಸುವಾಗಲೇ ಮಿಸೈಲ್​ಗಳನ್ನು ಹೊಡೆದುರುಳಿಸುವ ಇನ್ಪ್ರಾರೆಡ್ ಜಾಮರ್ ಅಳವಡಿಸಲಾಗಿದೆ.
ರಕ್ಷಣಾ ಇಲಾಖೆಯಲ್ಲಿ ಹೆಚ್ಚು ಬಳಕೆ: ಈವರೆಗೆ ಉತ್ಪಾದಿಸಲಾದ ಧ್ರುವ್ ಎಎಲ್​ಎಚ್ ಹೆಲಿಕಾಪ್ಟರ್​ಗಳನ್ನು ಅತಿಹೆಚ್ಚಾಗಿ ಭಾರತೀಯ ಭೂಸೇನೆ, ವಾಯು ಸೇನೆ ಮತ್ತು ಕರಾವಳಿ ಕಾವಲು ಪಡೆಯಲ್ಲಿ ಬಳಕೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚಿನ ಹೆಲಿಕಾಪ್ಟರ್​ಗಳು ದೇಶದ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.
ವಿದೇಶಗಳಲ್ಲೂ ಧ್ರುವ್:ದೇಶವಷ್ಟೇ ಅಲ್ಲದೆ ವಿದೇಶಗಳಲ್ಲೂ ಧ್ರುವ್ ಎಎಲ್​ಎಚ್ ಅನ್ನು ಬಳಸಲಾಗುತ್ತಿದೆ. ಅದರಂತೆ ಮಾಲ್ಡೀವ್ಸ್, ಮಾರಿಷಸ್ ಮತ್ತು ನೇಪಾಳದ ಪೊಲೀಸರು ಧ್ರುವ್ ಹೆಲಿಕಾಪ್ಟರ್ ಅನ್ನು ಎಚ್​ಎಎಲ್ ಮೂಲಕ ಪಡೆದುಕೊಂಡಿದ್ದಾರೆ.
73 ಹೆಲಿಕಾಪ್ಟರ್ ನಿರ್ಮಾಣ
ರಕ್ಷಣಾ ಇಲಾಖೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ 41 ಧ್ರುವ್ ಹೆಲಿಕಾಪ್ಟರ್ ಅನ್ನು ಭೂಸೇನೆಗೆ ಪಡೆಯಲಾಗುತ್ತಿದೆ. ಅದರ ಜತೆಗೆ ವಾಯುಸೇನೆಗೆ 16 ಮತ್ತು ಕರಾವಳಿ ಕಾವಲು ಪಡೆಗೆ 16 ಹೆಲಿಕಾಪ್ಟರ್​ಗಳ ಬೇಡಿಕೆ ಸಲ್ಲಿಸಲಾಗಿದೆ. ಒಟ್ಟು 73 ಹೆಲಿಕಾಪ್ಟರ್​ಗಳಲ್ಲಿ ಈಗಾಗಲೆ 38 ಹೆಲಿಕಾಪ್ಟರ್​ಗಳು ಸಿದ್ಧವಾಗಿದ್ದು, ಉಳಿದವು 2022ರ ವೇಳೆಗೆ ಪೂರ್ಣಗೊಳ್ಳಲಿವೆ.
ವಿಶೇಷತೆಯೇನು?
ಮೊದಲ ಹೆಲಿಕಾಪ್ಟರ್ ಉತ್ಪಾದನೆ:1992
ಭಾರ:5.5 ಟನ್ ವೆಚ್ಚ: ಅಂದಾಜು 45 ಕೋಟಿ ರೂ.
ಮಾದರಿ:ಎಎಲ್​ಎಚ್ ಎಂಕೆ 1ನಿಂದ ಎಂಕೆ 4
ಸಾಮರ್ಥ್ಯ:ಏರ್ ಟು ಏರ್ ಮಿಸೈಲ್, ಏರ್ ಟು ಗ್ರೌಂಡ್ ಮಿಸೈಲ್, ಡಿಜಿಟಲ್ ವೀಡಿಯೋ ರೆಕಾರ್ಡಿಂಗ್, ಟುರ್ರೆಟ್ ಗನ್, ಪ್ರತಿ ಗಂಟೆಗೆ 245 ಕಿ.ಮೀ.ನಿಂದ 292 ಕಿ.ಮೀ. ವೇಗದಲ್ಲಿ ಪ್ರಯಾಣ, 2.8 ಲಕ್ಷ ಹಾರಾಟ ಗಂಟೆಗಳು.
ಏರೋಬ್ಯಾಟಿಕ್ ತಂಡದ ಆಕರ್ಷಣೆ
ದೇಶದ ಪ್ರಮುಖ ಏರೋಬ್ಯಾಟಿಕ್ ತಂಡವಾದ ಸಾರಂಗ್, ಧ್ರುವ್ ಮೂಲಕ ವೈಮಾನಿಕ ಪ್ರದರ್ಶನ ನೀಡುತ್ತವೆ. ಏರೋ ಇಂಡಿಯಾ, ಬರ್ಲಿನ್, ಫ್ರಾನ್ಸ್ ದೇಶಗಳು ಸೇರಿ ಇನ್ನಿತರ ಕಡೆಗಳಲ್ಲಿ ನಡೆಯುವ ಏರೋ ಶೋಗಳಲ್ಲಿ ಸಾರಂಗ್ ತಂಡ ಪ್ರದರ್ಶನ ನೀಡುತ್ತದೆ. 2003ರಿಂದ ಸಾರಂಗ್ ತಂಡ ಧ್ರುವ್ ಮೂಲಕ ಆಗಸದಲ್ಲಿ ಚಿತ್ತಾರ ಮೂಡಿಸುವ ಕೆಲಸ ಮಾಡುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
