ನವದೆಹಲಿ:ಹಲ್ದ್ವಾನಿ ಹಿಂಸಾಚಾರದ ಪ್ರಮುಖ ಶಂಕಿತ ಅಬ್ದುಲ್ ಮಲಿಕ್ ನನ್ನು ಪೊಲೀಸರು ಹಲ್ದ್ವಾನಿಯ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಮಾರ್ಚ್ 6 ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ:‘ಸ್ಕೂಲ್​ ಮಕ್ಕಳಿಗೆ ಲೈಂಗಿಕ ಸಂಭೋಗ ನಿಷೇಧಿಸಿ’: ಪರೀಕ್ಷೆ ಬದಲು ಡೇಟಿಂಗ್ ವಿರೋಧಿ ಮಸೂದೆಗೆ ಪ್ರತಿಕ್ರಿಯಿಸಿ ಕಂಗನಾ ಮಾಡಿದ್ದೇನು?
ದೆಹಲಿಯಲ್ಲಿ ಮಲಿಕ್ ನನ್ನು ವಶಕ್ಕೆ ಪಡೆದ ನೈನಿತಾಲ್ ಪೊಲೀಸರು ಆರೋಪಿಯನ್ನು ಶನಿವಾರ ರಾತ್ರಿ ಹಲ್ದ್ವಾನಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ 10 ದಿನಗಳ ವಿಚಾರಣೆ ಅಗತ್ಯವಿದೆ ಎಂದು ಮನವಿ ಮಾಡಿದರು. ಪೊಲೀಸರ ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು ಮಾರ್ಚ್ 6 ರವರೆಗೆ ಅಬ್ದುಲ್ ಮಲಿಕ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿದೆ. ಈ ಅವಧಿಯ ನಂತರ ಪ್ರಕರಣವನ್ನು ಮುಂದಿನ ವಿಚಾರಣೆಗೆ ನಿಗದಿಪಡಿಸಲಾಗಿದೆ.ದೆಹಲಿಯಿಂದ ಅಬ್ದುಲ್ ಮಲಿಕ್ ನನ್ನು ಬಂಧಿಸಿದ ಉತ್ತರಾಖಂಡ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ತಲಾ 50ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ವಕ್ತಾರ ಐಜಿ ನೀಲೇಶ್ ಭರ್ನೆ ತಿಳಿಸಿದ್ದಾರೆ.
ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಗಾಗಿ ನೈನಿತಾಲ್ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದರು. ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಉತ್ತರಾಖಂಡ ಪೊಲೀಸ್ ಪ್ರಧಾನ ಕಚೇರಿ (ಪಿಎಚ್ ಕ್ಯೂ) ವಕ್ತಾರ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 74 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆಕೋರರನ್ನು ಬೆಂಬಲಿಸುವವರ ವಿರುದ್ಧ ಉತ್ತರಾಖಂಡ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಕಲ್ಲು ತೂರಾಟದ ಘಟನೆಗಳು, ವಾಹನಗಳಿಗೆ ಬೆಂಕಿ ಹಚ್ಚುವುದು ಮತ್ತು ಸ್ಥಳೀಯ ಪೊಲೀಸ್ ಠಾಣೆಯನ್ನು ಸುತ್ತುವರೆದಿರುವ ಗುಂಪು ಸಾಕ್ಷಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು, ಆಡಳಿತವು ಪ್ರದೇಶದಲ್ಲಿ ಶೂಟ್-ಆಟ್-ಸೈಟ್ ಆದೇಶವನ್ನು ನೀಡಬೇಕಾಯಿತು.
ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಹಲ್ದ್ವಾನಿ ಹಿಂಸಾಚಾರದ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ ವಿರುದ್ಧ 2.44 ಕೋಟಿ ರೂಪಾಯಿ ವಸೂಲಿ ನೋಟಿಸ್ ಜಾರಿ ಮಾಡಿದ್ದು, ಘರ್ಷಣೆಯ ಸಂದರ್ಭದಲ್ಲಿ ಸರ್ಕಾರಿ ಆಸ್ತಿಗೆ ಉಂಟಾದ ಹಾನಿಯನ್ನು ಭರಿಸಲು ಹಣವನ್ನು ಠೇವಣಿ ಮಾಡುವಂತೆ ಕೇಳಿದೆ.
ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250 ಪೊಲೀಸರು ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಗುಂಪು ಬಂಭುಲ್ಪುರ ಪೊಲೀಸ್ ಠಾಣೆಯನ್ನು ಸುಟ್ಟುಹಾಕಿತ್ತು. ಎರಡು ದಿನಗಳ ಕಾಲ ಇಡೀ ಊರಿನಲ್ಲಿ ಕರ್ಫ್ಯೂ ಹೇರಲಾಗಿತ್ತು.
‘ಗೇಮ್ ಚೇಂಜರ್’ ಸ್ಟೋರಿ ಲೀಕ್..ಪವನ್ ಕಲ್ಯಾಣ್ ನಿಜವಾದ ಪಾತ್ರದಲ್ಲಿ ರಾಮ್ ಚರಣ್!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − five =
Remember me
