ಭೋಪಾಲ್​:ಇಡೀ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಗೆ ಮಧ್ಯಪ್ರದೇಶ ಸಾಕ್ಷಿಯಾಗಿದೆ. 12 ವರ್ಷದ ಬಾಲಕಿಯೊಬ್ಬಳು ಅರೆಬೆತ್ತಲಾಗಿ, ರಕ್ತಸ್ರಾವದೊಂದಿಗೆ ಬೀದಿ ಬೀದಿಯಲ್ಲಿ ಸಹಾಯಕ್ಕಾಗಿ ಅಂಗಲಾಚಿದ ಮನಕಲಕುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಗರದ ದಂಡಿ ಆಶ್ರಮದ ಬಳಿ ಎಸೆದು ಹೋಗಿದ್ದರು ಎಂದು ಹೇಳಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ ಬಾಲಕಿ ವಸತಿ ಏರಿಯಾದಲ್ಲಿ ನಡೆದಾಡುತ್ತಿರುವ ದೃಶ್ಯವಿದೆ. ಒಂದು ಚಿಂದಿ ಬಟ್ಟೆಯನ್ನು ಬಾಲಕಿ ಸುತ್ತಿಕೊಂಡಿದ್ದಾಳೆ. ಸಹಾಯ ಕೋರಿ ಓರ್ವ ವ್ಯಕ್ತಿಯ ಬಳಿಗೆ ಬಾಲಕಿ ಹೋದಾಗ ಆತ ಕರಣೆ ತೋರದೆ ಆಕೆಯನ್ನು ಬೈದು ಕಳುಹಿಸುತ್ತಾನೆ.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿ ತದನಂತರ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಇಂದೋರ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ, ಬಂಧಿಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ವಿಜಯ್​ ಸೇತುಪತಿ ‘800’ ಚಿತ್ರದಿಂದ ಹೊರನಡೆಯಲು ಇದೇ ಕಾರಣವೆಂದ ಮುತ್ತಯ್ಯ ಮುರಳೀಧರನ್​!
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಎಲ್ಲಿಂದ ಬಂದಿದ್ದಾಳೆಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆದರೆ, ಆಕೆಯ ಉಚ್ಚಾರಣೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವಳು ಎಂದು ಸೂಚಿಸುತ್ತದೆ ಎಂದು ಸಚಿನ್ ಶರ್ಮಾ ಹೇಳಿದರು.
ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸಮಿತಿಯು ಪೊಲೀಸರಿಂದ ಪ್ರಾಥಮಿಕ ತನಿಖಾ ವರದಿಯ ವಿವರಗಳನ್ನು ಕೇಳಿದೆ ಮತ್ತು ಪೊಕ್ಸೋ ಕಾಯಿದೆಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲು ಕೇಳಿದೆ.
ಈ ಘಟನೆಯ ಅತ್ಯಂತ ದುರದೃಷ್ಟಕರ ಸಂಗತಿ ಏನೆಂದರೆ, ಈವರೆಗೂ ಬಾಲಕಿಗೆ ಸಹಾಯ ಮಾಡಲು ಯಾರೊಬ್ಬರು ಮುಂದಾಗಿಲ್ಲ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ. ಇದು ಸಮಾಜದ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷರು ಹೇಳಿದರು.(ಏಜೆನ್ಸೀಸ್​)
ರಾಜಮೌಳಿಯು ಅಲ್ಲ ಅಟ್ಲಿಯು ಅಲ್ಲ… ಸ್ಕ್ರಿಪ್ಟ್​ ಇಲ್ಲದೇ ಮುಂದಿನ ಚಿತ್ರಕ್ಕೆ 55 ಕೋಟಿ ರೂ. ಪಡೆದ ನಿರ್ದೇಶಕ!

ಕೇವಲ 1 ಕಿ.ಮೀ. ತಲುಪಲು 2 ಗಂಟೆ! ಸಾಲು ಸಾಲು ರಜೆ, ಬೆಂಗ್ಳೂರು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಪರದಾಡಿದ ಜನರು

ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್​ಗೆ ಆನ್​ಲೈನ್ ನೋಂದಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eleven =
Remember me
