ಬೆಂಗಳೂರು:ಎಲ್ಲ ನಿರೀಕ್ಷೆ, ಲೆಕ್ಕಾಚಾರಗಳನ್ನು ಮೀರಿ ಜನಸಮುದಾಯದಲ್ಲಿ ವ್ಯಾಪಿಸುವ ಮೂಲಕ ಕರ್ನಾಟಕವನ್ನು ಸಂಕಷ್ಟಕ್ಕೆ ದೂಡಿರುವ ಕರೊನಾ ವೈರಸ್ ಕಟ್ಟಿಹಾಕಲು ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾದ ತುರ್ತು ಎದುರಾಗಿದೆ. ಹೀಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಘೋಷಿಸಲಾಗಿರುವ ವಾರಾವಧಿ ಲಾಕ್​ಡೌನ್ ನಿರ್ಬಂಧವನ್ನು ಅಪಾಯದ ಅಂಚಿನಲ್ಲಿರುವ ಇನ್ನಷ್ಟು ಜಿಲ್ಲೆಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಸೋಮವಾರ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮತ್ತೆ ಲಾಕ್​ಡೌನ್ ಜಾರಿಗೆ ಜನಪ್ರತಿನಿಧಿಗಳು ಒತ್ತಡ ಹೇರಿದ್ದಾರೆ. ಇದಕ್ಕೆ ಸರ್ಕಾರ ಸಮ್ಮತಿಸಿದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಅರ್ಧ ರಾಜ್ಯ ಮತ್ತೆ ಲಾಕ್​ಡೌನ್​ಗೆ ಒಳಪಡಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಜಲ್ಲಾ ಪಂಚಾಯಿತಿ ಸಿಇಒ, ಎಸ್ಪಿಗಳ ಅಭಿಪ್ರಾಯ ಪಡೆದು, ಮುಖ್ಯ ಕಾರ್ಯದರ್ಶಿ ಜತೆ ವಿಚಾರ ವಿನಿಮಯ ಮಾಡಿ ಮುಂದುವರಿಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಚಿಸಿದ್ದಾರೆ. ಇದೇ ಕಾರ್ಯಸೂಚಿಯನ್ನು ಇಟ್ಟುಕೊಂಡು ಡಿಸಿ, ಸಿಇಒ, ಎಸ್ಪಿಗಳೊಂದಿಗೆ ಬಿಎಸ್​ವೈ ಸೋಮವಾರ 2 ಹಂತದಲ್ಲಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11ಕ್ಕೆ ಹೆಚ್ಚು ಸೋಂಕುಬಾಧಿತ ಜಿಲ್ಲೆಗಳು, ಸಂಜೆ 4ಕ್ಕೆ ಉಳಿದ ಜಿಲ್ಲೆಗಳೊಂದಿಗೆ ವಿಡಿಯೋ ಸಂವಾದ ಗೊತ್ತುಪಡಿಸಲಾಗಿದೆ.
ಮಾರ್ಗಸೂಚಿ ಫೈನಲ್:ಸಿಎಂ ತಮ್ಮ ಕಾವೇರಿ ನಿವಾಸದಲ್ಲಿ ಭಾನುವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಕರೊನಾ ಕಟ್ಟಿಹಾಕುವುದಕ್ಕೆ 2 ವಿಭಿನ್ನ ಕಾರ್ಯತಂತ್ರಗಳು ಹಾಗೂ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ. ವಿಡಿಯೋ ಸಂವಾದದಲ್ಲಿ ಸಂಗ್ರಹಿಸಿದ ಅಭಿಪ್ರಾಯ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ಸ್ಪರ್ಶ ನೀಡಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.
ಯಾವೆಲ್ಲ ಜಿಲ್ಲೆ ದಿಗ್ಬಂಧನ?:ಲಾಕ್​ಡೌನ್ ಪರ ಒಲವು ವ್ಯಕ್ತವಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಲಾಕ್ ಡೌನ್ ವಿಸ್ತರಣೆಗೊಳ್ಳಲಿದೆ. ಕಡಿಮೆ ಪ್ರಕರಣಗಳಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಗಳಿವೆ.
ಸಂಭಾವ್ಯ ಮಾರ್ಗಸೂಚಿ
ಲಾಕ್ ಆಗದ ಕಡೆ ಏನು?:
ರಾಜ್ಯದಲ್ಲಿ ಈಗ ದಿನವೊಂದಕ್ಕೆ 2000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ 15 ರಿಂದ 30 ದಿನಗಳಲ್ಲಿ ಇದು ದ್ವಿಗುಣವಾಗಬಹುದು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಮಗೆ ಅತಿ ದೊಡ್ಡ ಸವಾಲು ಎದುರಾಗಲಿದೆ.
| ಶ್ರೀರಾಮುಲುಆರೋಗ್ಯ ಸಚಿವ
https://www.vijayavani.net/clinical-trial-of-covaxin-starts-from-monday-no-covid-19-vaccine-possible-before-2021/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
