ತಿರುವನಂತಪುರಂ:ಅಕ್ಟೋಬರ್​ 7 ರಂದು ಇಸ್ರೇಲ್​ ಮೇಲೆ ರಾಕೆಟ್​​ ದಾಳಿ ಮಾಡಿ ಯುದ್ಧಕ್ಕೆ ಮುನ್ನುಡಿ ಬರೆದ ಪ್ಯಾಲೆಸ್ತೀನ್​​ನ ಹಮಾಸ್​ ಉಗ್ರ ಸಂಘಟನೆಯ ನಾಯಕರೊಬ್ಬರು ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ “ಸಾಲಿಡಾರಿಟಿ ಯೂತ್​ ಮೂವ್ಮೆಂಟ್​” ಆಯೋಜಿಸಿದ್ದ ಸಮಾವೇಶದಲ್ಲಿ ವರ್ಚುವಲ್​ ಆಗಿ ಪಾಲ್ಗೊಂಡು ಮಾತನಾಡಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ.
ಈ ಸಾಲಿಡಾರಿಟಿ ಯೂತ್​ ಮೂವ್ಮೆಂಟ್​, ಜಮಾತ್​​ ಇ ಇಸ್ಲಾಮಿ ಸಂಘಟನೆಯ ಯುವ ಸಂಘಟನಾ ವಿಭಾಗವಾಗಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹಮಾಸ್​ ನಾಯಕ ಖಲೀದ್​ ಮಸ್ಹಾಲ್​, ಯುವಕರನ್ನು ಉದ್ದೇಶಿಸಿ ಮಾತನಾಡಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ.
ಖಲೀದ್​ ಮಸ್ಹಾಲ್ ವರ್ಚುವಲ್​ ಆಗಿ​ ಮಾತನಾಡಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್​ ಖಂಡಿಸಿದ್ದಾರೆ. ಅಲ್ಲದೆ, ಕೇರಳ ಪೊಲೀಸರಿಗೆ ಪ್ರಶ್ನೆ ಮಾಡಿರುವ ಸುರೇಂದ್ರನ್, ಕಾರ್ಯಕ್ರಮ ಆಯೋಜಕರ ವಿರುದ್ಧ​ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಮಲಪ್ಪುರಂನಲ್ಲಿ ನಡೆದ ಐಕ್ಯತೆ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಸ್ಹಾಲ್​ ಅವರ ವಾಸ್ತವ ಭಾಷಣವು ಆತಂಕಕಾರಿಯಾಗಿದೆ. ಪಿಣರಾಯಿ ವಿಜಯನ್​ ಅವರ ಕೇರಳ ಪೊಲೀಸರು ಎಲ್ಲಿದ್ದಾರೆ? ಪ್ಯಾಲೆಸ್ತೀನ್​ ಉಳಿಸಿ ಎಂಬ ಸೋಗಿನಲ್ಲಿ ಉಗ್ರ ಸಂಘಟನೆ ಹಮಾಸ್​ ಅನ್ನು ವೈಭವೀಕರಿಸುತ್ತಿದ್ದಾರೆ ಮತ್ತು ಅವರ ನಾಯಕನ್ನು ಯೋಧನೆಂದು ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಸ್ವೀಕಾರ್ವಲ್ಲ ಎಂದು ಸುರೇಂದ್ರನ್​ ಎಕ್ಸ್​ ಮೂಲಕ ಖಂಡನೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಲೋಕಸಭಾ ಸಂಸದ ಶಶಿ ತರೂರ್​ ಅವರನ್ನು ಕೇರಳ ಬಿಜೆಪಿ ಘಟಕ ಟೀಕಿಸಿದೆ. ಪ್ಯಾಲೆಸ್ತೀನ್​ ಬೆಂಬಲಿಸಿರುವ ಯೂನಿಯನ್​ ಮುಸ್ಲಿಂ ಲೀಗ್​ ಸಮಾವೇಶದಲ್ಲಿ ತರೂರ್​ ಭಾಗವಹಿಸಿದ್ದಕ್ಕೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.
ಇಸ್ರೇಲ್​ ಜತೆಗಿನ ಯುದ್ಧದಲ್ಲಿ ಹಾನಿಗೊಳಗಾದ ಪ್ಯಾಲೆಸ್ತೀನ್ ಜನರ ಪರ ಸಾವಿರಾರು ಐಯುಎಂಎಲ್ ಬೆಂಬಲಿಗರು ಕೋಯಿಕ್ಕೋಡ್‌ನ ಬೀದಿಗಿಳಿದು ಬೆಂಬಲ ಸೂಚಿಸಿದ ಒಂದು ದಿನದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಹಮಾಸ್​-ಇಸ್ರೇಲ್​ ಸಂಘರ್ಷವನ್ನು ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.(ಏಜೆನ್ಸೀಸ್​)
ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಬೇಡಿಕೆ; ಸಿಎಂ ಜತೆ ಚರ್ಚಿಸಲಾಗುವುದು: ಎಂ.ಬಿ. ಪಾಟೀಲ

ಭಾರತದ ಮಾವು ರಫ್ತು ಶೇ.19ಕ್ಕೆ ಏರಿಕೆ: ಅಮೆರಿಕಾಗೇ ಹೆಚ್ಚು ಉತ್ಪನ್ನ ಮಾರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eleven =
Remember me
