ಬೆಂಗಳೂರು:ಬೆಲ್ಜಿಯಂ ಬೆಡಗಿಯೊಬ್ಬಳು ಕರ್ನಾಟಕದ ಹಂಪಿಯ ಆಟೋಚಾಲಕನೊಬ್ಬನನ್ನು ಇಂದು ವರಿಸಲಿದ್ದು, ಈ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ. ಹಂಪಿಯ ಗೈಡ್ ಹಾಗೂ ಆಟೋಚಾಲಕನೂ ಆಗಿರುವ ವಿ. ಅನಂತರಾಜು ಮತ್ತು ಬೆಲ್ಜಿಯಂ ದೇಶದ ಪ್ರಜೆ ಕೆಮಿಲ್​ ವಧು-ವರರು. ಇವರು ಇಂದು (ನ..25) ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ.
ಅನಂತರಾಜು ಗೈಡ್​ ಆಗಿ ಹಂಪಿಯ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಿದ್ದು, ಮೂರು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಬಂದಿದ್ದ ಮರಿಯನ್ನೇ ಜಿಮ್​ ಫಿಲಿಪ್ಪೆ ಅವರ ಪರಿವಾರಕ್ಕೂ ಮಾರ್ಗದರ್ಶನ ಮಾಡಿದ್ದರು. ಈ ಸಂದರ್ಭ ಜಿಮ್ ಅವರ ಮೂರನೇ ಪುತ್ರಿ ಕೆಮಿಲ್ ಜತೆ ಪ್ರೇಮಾಂಕುರವಾಗಿತ್ತು.
ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದಾನೆ. ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ ಪ್ರೇಮ ಅರಳಿತು.
ಮೂರು ವರ್ಷದ ಹಿಂದೆಯೇ ಪ್ರೇಮದ ವಿವಾಹವಾಗಬೇಕಿದ್ದ ಜೋಡಿಗೆ ಕರೋನ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾವಹನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಗುರುವಾರ ಸಂಜೆ ಕುಟುಂಬ ಪರಿವಾರದೊಂದಿಗೆ ನಿಶ್ಚಿತಾರ್ಥ ನೆರವೇರಿಸಿದರು.
ನ.25ರ ಶುಕ್ರವಾರ ಬೆಳಗ್ಗೆ 8.30ರಿಂದ 9.30ರವರೆಗೆ ಸಲ್ಲುವ ಕುಂಭ ಲಗ್ನದ ಶುಭಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆಯಲಿದೆ. ಬೆಲ್ಜಿಯಂ ಬೆಡಗಿಯನ್ನು ವರಿಸಲಿರುವ ಅನಂತರಾಜು ಹಂಪಿ ಜನತಾ ಪ್ಲಾಟಿನ ನಿವಾಸಿ ರೇಣುಕಮ್ಮ-ಅಂಜಿನಪ್ಪನವರ ಪುತ್ರ.

ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
