ನವದೆಹಲಿ:ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಶಿಕ್ಷೆಗೆ ತಯಾರಿ ಆರಂಭವಾಗಿದ್ದು, ತಿಹಾರ್​ ಜೈಲಿನಲ್ಲಿ ಸಕಲವೂ ಸಿದ್ಧವಾಗಿದೆ.
ಮೇರಟ್​ನಿಂದ ನೇಣಿಗೇರಿಸುವವರನ್ನು ಕರೆತರಲಾಗುತ್ತಿದೆ. ನಾಲ್ವರನ್ನು ನೇಣಿಗೇರಿಸಲು ತಿಹಾರ್​ ಜೈಲಿನಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.
ನೇಣಿನ ಕುಣಿಕೆಗಳನ್ನು ಬಿಹಾರದ ಬಕ್ಸಾರ್​ ಕಾರಾಗೃಹದಿಂದ ತರಿಸಿಕೊಳ್ಳಲಾಗಿದೆ. ಪಾರ್ಲಿಮೆಂಟ್​ನ ಮೇಲೆ ದಾಳಿ ನಡೆಸಿದ್ದ ಅಫ್ಜಲ್​ ಗುರುನನ್ನು ನೇಣಿಗೇರಿಸಲು ಇದೇ ಬಕ್ಸಾರ್​ ಕಾರಾಗೃಹದ ಕುಣಿಕೆಗಳನ್ನು ಬಳಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಏಷ್ಯಾದ ಅತಿ ದೊಡ್ಡ ಜೈಲು ಎಂದೇ ಖ್ಯಾತಿ ಗಳಿಸಿರುವ ತಿಹಾರ್​ ಜೈಲಿನಲ್ಲಿ ನೇಣಿಗೇರಿಸುವ ನಕಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.
ನಾಲ್ವರು ಅಪರಾಧಿಗಳನ್ನು ಬೇರೆ ಬೇರೆ ಸೆಲ್​ಗಳಲ್ಲಿ ಇಡಲಾಗುತ್ತದೆ. ಅವರ ಮೇಲೇ ಸಿಸಿ ಕ್ಯಾಮರಾದ ಮೂಲಕ ನಿಗಾ ವಹಿಸಲಾಗುತ್ತದೆ. ನೇಣಿಗೇರಿಸಲಾಗುವ ಜೈಲ್​ 3ನೇ ನಂಬರಿನ ಬ್ಯಾರಕ್​ನಲ್ಲಿ ಎಲ್ಲವೂ ಸಿದ್ಧಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೇನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
