ಲಂಡನ್:ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ, ಸೂರತ್​ನ 1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟೈಗರ್ ಹನೀಫ್​ನನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಬಹುತೇಕ ಸಿದ್ಧವಿತ್ತು. ಆದರೆ ಬ್ರಿಟನ್​ನ ಅಂದಿನ ಗೃಹ ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ಭಾರತದ ಮನವಿಗೆ ತಡೆ ನೀಡಿದ್ದರು ಎಂದು ಬ್ರಿಟನ್ ಗೃಹ ಸಚಿವಾಲಯ ತಿಳಿಸಿದೆ.ಟೈಗರ್ ಹನೀಫ್ ಅಲಿಯಾಸ್ ಮೊಹಮ್ಮದ್ ಹನೀಫ್ ಉಮರ್ಜಿ ಪಟೇಲ್​ನನ್ನು 2010ರ ಫೆಬ್ರವರಿಯಲ್ಲಿ ಬ್ರಿಟನ್ ಪೊಲೀಸರು ಬಂಧಿಸಿದ್ದರು. ಆ ಬಳಿಕ 2012ರ ಜೂನ್​ನಲ್ಲಿ ಅಂದಿನ ಗೃಹ ಸಚಿವೆ ಥೆರೆಸಾ ಮೇ ಆತನ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು.
ನಂತರ ಹನೀಫ್ ಮಾಡಿದ್ದ ಎಲ್ಲ ಮನವಿಗಳೂ ತಿರಸ್ಕೃತವಾಗಿ ಕಳೆದ ವರ್ಷ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಅಂತಿಮಘಟ್ಟ ತಲುಪಿತ್ತು. ಆದರೆ ಆಗ ಗೃಹ ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ಈ ಕಡತಕ್ಕೆ ಸಹಿ ಹಾಕಲಿಲ್ಲ ಎಂದು ತಿಳಿದುಬಂದಿದೆ. ತನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅಲ್ಲಿ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಹನೀಫ್ ಹೇಳಿಕೊಂಡಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
