ಆಂಧ್ರಪ್ರದೇಶ:ಭಾರತ ಪರ 16 ಟೆಸ್ಟ್ ಪಂದ್ಯಗಳನ್ನಾಡಿರುವ ಹನುಮ ವಿಹಾರಿ ಸೋಮವಾರ (ಫೆ.26) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇನ್ನು ಮುಂದೆ ಆಂಧ್ರಪ್ರದೇಶ ತಂಡದ ಪರ ಆಡುವುದಿಲ್ಲ ಎಂದು ಸುದೀರ್ಘ ಬರಹದ ಮೂಲಕ ತಿಳಿಸಿದರು.
ಇದನ್ನೂ ಓದಿ:ಹನುಮ ವಿಹಾರಿ ಆಂಧ್ರ ಕ್ರಿಕೆಟ್ ಟೀಮ್ ತೊರೆಯಲು ಸಿಎಂ ಜಗನ್​ ಕಾರಣ: ತೆಲುಗು ದೇಶಂ ಪಕ್ಷ ನೇರ ಆರೋಪ
ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಪೊರೇಟರ್ ಕ್ರಿಕೆಟಿಗ ಹನುಮ ವಿಹಾರಿ ಆಂಧ್ರಪ್ರದೇಶ ರಣಜಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಇದೀಗ ವ್ಯಾಪಕವಾಗಿ ಕೇಳಿಬಂದಿದೆ. ಆದರೆ, ಕಾರ್ಪೊರೇಟರ್ ಪುತ್ರ ಮಾತ್ರ ಈ ಆರೋಪವನ್ನು ಸುತರಾಮ್ ತಳ್ಳಿ ಹಾಕಿದ್ದಾರೆ.
ಪಶ್ಚಿಮ ಬಂಗಾಳ ವಿರುದ್ಧದ ಪಂದ್ಯದಲ್ಲಿ ಆಡವಾಗ ಕಾರ್ಪೋರೆಟರ್ ಪುತ್ರನಿಗೆ ವಿಹಾರಿ ಗದರಿದರು. ಇದನ್ನೇ ಕಾರಣವನ್ನಾಗಿ ಮಾಡಿಕೊಂಡ ಆತ ತನ್ನ ತಂದೆಗೆ ದೂರು ನೀಡಿದ್ದಾನೆ. ಘಟನೆಯಿಂದ ಕುಪಿತಗೊಂಡ ಕಾರ್ಪೋರೆಟರ್ ತನ್ನ ಮೇಲೆ ಕೂಗಾಡಿದ್ದರು ಎಂದು ವಿಹಾರಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಜಗಳದ ಬೆನ್ನಲ್ಲೇ ವಿಹಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್​ಗೆ ಆತನ ತಂದೆ (ಎಸಿಎ) ಹೇಳಿದ್ದು, ಯಾವುದೇ ತಪ್ಪಿಲ್ಲದೆ ತನ್ನ ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಳ್ಳಲಾಯಿತು ಎಂದು ವಿಹಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಬರೋಬ್ಬರಿ 39 ನಾಣ್ಯ, 37 ಮ್ಯಾಗ್ನೆಟ್ ನುಂಗಿದ ಯುವಕ! ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಾ
“ವಿಹಾರಿ ಅವರ ಸಹ ಆಟಗಾರ ಕುಂಟ್ರಪಾಕಂ ಪೃಧ್ವಿರಾಜ್ ಅವರೊಂದಿಗೆ ವಾಗ್ವಾದದ ಬೆನ್ನಲ್ಲೇ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತು. ಪೃಧ್ವಿರಾಜ್ ತಮ್ಮ ತಂದೆ ಕುಂಟ್ರಪಾಕಂ ನರಸಿಂಹ ಅವರಿಗೆ ದೂರು ನೀಡಿದ ಕಾರಣ ತಿರುಪತಿಯ 25ನೇ ವಾರ್ಡ್‌ನ ವೈಎಸ್‌ಆರ್‌ಸಿಪಿ ಮುನ್ಸಿಪಲ್ ಕಾರ್ಪೊರೇಟರ್ ಹನುಮ ವಿಹಾರಿ ರಾಜೀನಾಮೆ ನೀಡುವಂತೆ ಮತ್ತು ತಂಡಕ್ಕೆ ಕ್ರಿಕೆಟ್ ಆಡುವುದನ್ನು ಸಂಪೂರ್ಣವಾಗಿ ತೊರೆಯುವಂತೆ ಒತ್ತಾಯಿಸಿದರು” ಎಂದು ಟಿಡಿಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಕೊಮ್ಮರೆಡ್ಡಿ ಪಟ್ಟಾಭಿ ರಾಮ್ ಆರೋಪಿಸಿದ್ದಾರೆ.
“ಪೃಧ್ವಿರಾಜ್ ಅವರ ತಂದೆಯಿಂದ ಭಾರೀ ಒತ್ತಡ ಬಂದಾಗ, ವಿಹಾರಿ ನಿರಂತರ ಮೌಖಿಕ ನಿಂದನೆ ಮತ್ತು ಅವಮಾನಕ್ಕೆ ಒಳಗಾದರು. ಇದು ಅವರನ್ನು ಅಂತಿಮವಾಗಿ ಆಂಧ್ರದ ಪರವಾಗಿ ಆಡದಿರಲು ನಿರ್ಧರಿಸುವಂತೆ ಮಾಡಿತು” ಎಂದು ಪಟ್ಟಾಭಿ ರಾಮ್ ಹೇಳಿದ್ದಾರೆ,(ಏಜೆನ್ಸೀಸ್).
ಬರೋಬ್ಬರಿ 39 ನಾಣ್ಯ, 37 ಮ್ಯಾಗ್ನೆಟ್ ನುಂಗಿದ ಯುವಕ! ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
