ಲಖನೌ:ಹರ ಹರ ಶಂಭು ಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಉತ್ತರ ಪ್ರದೇಶದ ಖ್ಯಾತ ಯೂಟ್ಯೂಬ್​ ಗಾಯಕಿ ಫರ್ಮಾನಿ ನಾಜ್​ ಅವರ ಸೋದರಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಖುರ್ಷಿದ್​ (18) ಕೊಲೆಯಾದ ನಾಜ್​ ಸೋದರ. ಮುಜಾಫರ್​ನಗರದ ಮೊಹಮ್ಮದ್​ಪುರ ಮಾಫಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುರ್ಷಿದ್​, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ:ಸಿಬಿಐನಂತೆ ಸಿಐಡಿ ತನಿಖೆ: ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್ ಸ್ಥಾಪನೆ; ಗಂಭೀರ ಅಪರಾಧಗಳ ಗುಪ್ತ ಮಾಹಿತಿ ಸಂಗ್ರಹ
ಪೊಲೀಸ್ ವರದಿ ಪ್ರಕಾರ, ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ಅವರನ್ನು ಸುತ್ತುವರಿದು ಚಾಕು ತೋರಿಸಿದರು. ಖುರ್ಷಿದ್​ ವಿರುದ್ಧ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಆತನಿಗೆ ಚಾಕುವಿನಿಂದ ಇರಿದ ಬಳಿಕ ಆ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಖುರ್ಷಿದ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ.
ಇನ್ನು ಫರ್ಮಾನಿ ನಾಜ್​ ವಿಚಾರಕ್ಕೆ ಬರುವುದಾದರೆ, 2022ರಲ್ಲಿ ಅವರು ಹಾಡಿದ ಹರ ಹರ ಶಂಭು ಹಾಡಿನಿಂದ ರಾತ್ರೋರಾತ್ರಿ ನಾಜ್​ ಪ್ರಖ್ಯಾತಿ ಗಳಿಸಿದರು. ನಾಜ್​ ಹಾಡಿದ ಹಾಡು ಭಕ್ತರ ಬಳಗದ ಅಚ್ಚುಮೆಚ್ಚಿನ ಹಾಡಾಯಿತು. ಎಲ್ಲಿ ನೋಡಿದರೂ ನಾಜ್​ ಅವರ ಧ್ವನಿಯೇ ಕೇಳುವಷ್ಟು ಈ ಹಾಡು ಭಾರೀ ವೀಕ್ಷಣೆಗಳನ್ನು ಕಂಡು ಸಿಕ್ಕಾಪಟ್ಟೆ ವೈರಲ್​ ಆಯಿತು.
ಆದಾಗ್ಯೂ, ನಾಜ್ ಅವರು ಹಾಡಿದ ಈ ಹಾಡು ಕಾಪಿರೈಟ್​ ವಿವಾದಕ್ಕೆ ಸಿಲುಕಿತು. ಇನ್ನೊಬ್ಬ ಗಾಯಕ ಜೀತು ಶರ್ಮ ಈ ಹಾಡು ತನ್ನದು ಎಂದು ಹೇಳಿಕೊಂಡರು ಮತ್ತು ನಾಜ್ ಹಾಡನ್ನು ಕದ್ದಿದ್ದಾರೆ ಎಂದು ಆರೋಪಿಸಿದ ಬಳಿಕ ನಾಜ್​ ಅವರು ತಮ್ಮ ಯೂಟ್ಯೂಬ್​ನಿಂದ ಹಾಡನ್ನು ಡಿಲೀಟ್​ ಮಾಡಿದರು.
ಇದಿಷ್ಟೇ ಅಲ್ಲದೆ, ದಿಯೋಬಂದ್​ನ ಧರ್ಮಗುರು ಅವರು ನಾಜ್​ ವಿರುದ್ಧ ಕಿಡಿಕಾರಿದರು. ಅದಕ್ಕೆ ಕಾರಣ ನಾಜ್​ ಅವರು ತಮ್ಮ ಹಾಡುಗಳಲ್ಲಿ ಹಿಂದು ದೇವರುಗಳನ್ನು ಸ್ತುತಿಸುವುದು ಧರ್ಮಗುರುವಿಗೆ ಇಷ್ಟವಾಗಲಿಲ್ಲ. ಮುಸ್ಲಿಂ ಆಗಿದ್ದುಕೊಂಡು ಹಿಂದು ಹಾಡುಗಳನ್ನು ಹಾಡುವುದನ್ನು ಧರ್ಮಗುರು ವಿರೋಧಿಸಿ, ಎಲ್ಲ ಸಾಮಾಜಿಕ ಮಾಧ್ಯಮ ಪುಟದಿಂದ ಹಾಡನ್ನು ತೆಗೆದುಹಾಕಲು ಒತ್ತಾಯ ಮಾಡಿದಾಗ ನಾಜ್ ಅವರನ್ನು ವಿವಾದ ಮತ್ತೆ ಆವರಿಸಿತು.
ಇದನ್ನೂ ಓದಿ:ಶಾಸಕರ ಬೇಡಿಕೆಗೆ ಸಿಎಂ ಕಿವಿ: ಸಮನ್ವಯತೆ ಸಾಧಿಸಲು ಪ್ರಯತ್ನ; ಬೇಡಿಕೆಗಳ ಈಡೇರಿಸುವ ವಾಗ್ದಾನ
ಪೊಲೀಸ್ ವರದಿಗಳ ಪ್ರಕಾರ, ನಾಜ್ ಅವರ ಕುಟುಂಬದ ಸದಸ್ಯರು ಕಬ್ಬಿಣ ಕಳ್ಳತನದ ಸಿಂಡಿಕೇಟ್‌ನ ಭಾಗವಾಗಿದ್ದಾರೆ ಮತ್ತು ಹವ್ಯಾಸಿ ಅಪರಾಧಿಗಳು ಎನ್ನಲಾಗಿದೆ. ಪ್ರಸ್ತುತ ಖುರ್ಷಿದ್ ಮೇಲಿನ ದಾಳಿಯನ್ನು ಕುಟುಂಬದ ಹಿಂದಿನ ಕೃತ್ಯಗಳಿಗೆ ಪ್ರತೀಕಾರವಾಗಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.(ಏಜೆನ್ಸೀಸ್​)
ಇ-ವಿ ತೆರಿಗೆ ಪ್ರಸ್ತಾವನೆಗೆ ಸರ್ಕಾರ ತಿರಸ್ಕಾರ: ರಸ್ತೆ ತೆರಿಗೆ ನಿರ್ಧಾರಕ್ಕೆ ರೆಡ್​ಸಿಗ್ನಲ್; 10 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ ಅನ್ವಯಿಸಲು ಮನವಿ

ಸಮಷ್ಠಿ ಹಿತ ಮುಖ್ಯ: ಮನೋಲ್ಲಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
