ಕೊಚ್ಚಿ:ಸಾಕ್ಷಿ ಕಲೆ ಹಾಕುವ ಸಂದರ್ಭದಲ್ಲಿ ಪೊಕ್ಸೊ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಟಿಜಿ ಬಾಬು ನಿರೀಕ್ಷಣಾ ಜಾಮೀನು ನೀಡಲು ಕೇರಳದ ಕಲ್ಪೆಟಾದಲ್ಲಿರುವ ಪೊಕ್ಸೊ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಎಎಸ್​ಐ ಬಾಬು ಪರಾರಿಯಾಗಿದ್ದು, ಈವರೆಗೂ ಪೊಲೀಸರು ಆತನ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿಲ್ಲ.
ಈ ಘಟನೆ ಕಳೆದ ಅಕ್ಟೋಬರ್​​ 26ರಂದು ನಡೆದಿದೆ. ಅಂಬಾಲವಯಾಲ್​ ಪೊಲೀಸರು ಸಂತ್ರಸ್ತ ಬಾಲಕಿಯನ್ನು ಸಾಕ್ಷಿ ಕಲೆ ಹಾಕಲೆಂದು ಊಟಿಗೆ ಕರೆದೊಯ್ಯಲಾಗಿತ್ತು. ಸಾಕ್ಷಿ ಕಲೆಹಾಕಿದ ಬಳಿಕ ಆಕೆಯನ್ನು ವಾಪಸ್​ ಕರೆತರುವಾಗ ಎಎಸ್​ಐ ಬಾಬು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ದೂರು ನೀಡಿರುವ ಬಾಲಕಿ, ಎಎಸ್​ಐ ಬಾಬು ಅವರು ನನ್ನನ್ನು ಪಕ್ಕಕ್ಕೆ ಎಳೆದುಕೊಂಡು ದೌರ್ಜನ್ಯ ಎಸಗಿದರು. ಅಲ್ಲದೆ, ತಮ್ಮ ಮೊಬೈಲ್​ನಲ್ಲಿ ಫೋಟೋವನ್ನು ತೆಗೆದುಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೊಕ್ಸೊ ಮಾತ್ರವಲ್ಲದೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ (ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆಯ ದೂರು ಬಂದಾಗಿನಿಂದ ಎಎಸ್‌ಐ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದರು. ವಿಶೇಷ ಸಂಚಾರಿ ದಳದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ನಕಲಿ ಮತದಾರರಿಂದ ಗೆಲ್ಲುವ ತಂತ್ರ ಬುಡಮೇಲು, ಕಾಂಗ್ರೆಸ್​ಗೆ ಆತಂಕ: ಸಿಎಂ ಬಸವರಾಜ ಬೊಮ್ಮಾಯಿ‌ ಚಾಟಿ

ಮಂಗಳೂರು ಆಟೋ ಸ್ಫೋಟ ಪ್ರಕರಣ: ಭಯೋತ್ಪಾದಕ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ ಪ್ರವೀಣ್ ಸೂದ್

ಬಳ್ಳಾರಿಯಲ್ಲಿಂದು ಬಿಜೆಪಿ ನವಶಕ್ತಿ ದರ್ಶನ: ಎಸ್​ಟಿ ಮೋರ್ಚಾ ಸಮಾವೇಶ; ನಡ್ಡಾ ಸೇರಿ ಹಲವರು ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
