ಮುಂಬೈ:ವಿವಾಹಿತ ಪುರುಷನ ಗೆಳತಿಯ ವಿರುದ್ಧ ಆತನ ಪತ್ನಿ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಕೌಟುಂಬಿಕ ಹಿಂಸಾಚಾರ ಕಾನೂನುಗಳ ಅಡಿಯಲ್ಲಿ ಗಂಡನ ಗೆಳತಿಯನ್ನು ಸಂಬಂಧಿ ಎಂದು ವರ್ಗೀಕರಿಸಲು ಆಗುವುದಿಲ್ಲ ಎಂದು ನ್ಯಾಯಾಲಯದ ನಾಗ್ಪುರ ಪೀಠ ಹೇಳಿದೆ. ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಮಾಡಿರುವ ಈ ಆರೋಪಗಳು ಸಮರ್ಪಕವಾಗಿಲ್ಲ ಎಂದಿದೆ.
ಕಾನೂನು ಪ್ರಕಾರ ವಿವಾಹಿತ ಮಹಿಳೆಗೆ ಪತಿ ಅಥವಾ ಆತನ ಸಂಬಂಧಿಕರು ಕಿರುಕುಳ ನೀಡಿದರೆ, ಕ್ರೌರ್ಯದಿಂದ ವರ್ತನೆ ಮಾಡಿದರೆ ಅದು ಅಪರಾಧವಾಗುತ್ತದೆ. ಇದಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ಇದೆ. ಆದರೆ ಕುಟುಂಬಕ್ಕೆ ಸೇರದ ವ್ಯಕ್ತಿಗಳು ಕಿರುಕುಳ ನೀಡಿದರೆ ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ವೃಶಾಲಿ ಜೋಶಿ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟನೆ ನೀಡಿದೆ. ಅರ್ಜಿದಾರ ಮಹಿಳೆ ಪತಿಯ ಸಂಬಂಧಿ ಅಲ್ಲದ ಕಾರಣ ಆಕೆಯ ಮೇಲೆ ಸೆಕ್ಷನ್ 498 ಎ ಅನ್ವಯಿಸುವುದಿಲ್ಲ. ಚಾರ್ಜ್ ಶೀಟ್ ಕೂಡ ಕಾನೂನುಬಾಹಿರವಾಗಿದೆ. ಈ ಪ್ರಕರಣ ವಿವಾಹೇತರ ಸಂಬಂಧದ ಆರೋಪದ ಕುರಿತಾಗಿದೆ ಎಂದು ಕೋರ್ಟ್ ಹೇಳಿದೆ.
ಮಹಾರಾಷ್ಟ್ರದ ಚಂದ್ರಾಪುರದ ಶಿಕ್ಷಣ ಸಂಸ್ಥೆಯ ಉದ್ಯೋಗಿಯೊಬ್ಬರು ಈ ಪ್ರಕರಣ ದಾಖಲಿಸಿದ್ದರು. ಈ ತೀರ್ಪು ಭವಿಷ್ಯದಲ್ಲಿ ಇದೇ ರೀತಿಯ ಪ್ರಕರಣಗಳ ನಿರ್ವಹಣೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಯಿದೆ. ಈ ಹಿಂದೆ, ಸುಪ್ರೀಂ ಕೋರ್ಟ್ ಕೂಡ ಸೆಕ್ಷನ್ 498ಎ ಅನ್ನು ವಿವೇಚನಾ ರಹಿತವಾಗಿ ಅನ್ವಯಿಸಬಾರದು ಎಂದು ಹೇಳಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
