| ರಾಘವ ಶರ್ಮ ನಿಡ್ಲೆ ವೀರಮ್​ಗಾಮ್​ (ಗುಜರಾತ್​)2017ರ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪಾಟಿದಾರ ಸಮುದಾಯದ ಮೀಸಲಾತಿ ಆಂದೋಲನದ ನಾಯಕತ್ವ ವಹಿಸಿದ್ದ ಹಾರ್ದಿಕ್​ ಪಟೇಲ್​ ಎಂಬ ಯುವಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ನಿದ್ದೆಗೆಡಿಸಿದ್ದರು. 5 ವರ್ಷಗಳ ಹಿಂದೆ ಮೋದಿ ವಿರೋಧಿಯಾಗಿದ್ದ ಇದೇ ಯುವಕ ಈಗ ಮೋದಿವಾದಿಯಾಗಿ ಬದಲಾಗಿರುವುದಲ್ಲದೆ, ತನ್ನ ಜನ್ಮನೆಲೆಯಾದ ವೀರಮ್​ಗಾಮ್​ ಕ್ಷೇತ್ರದಿಂದ ಕೇಸರಿ ಝಂಡಾ ಹಿಡಿದು ಸ್ಪರ್ಧೆಗಿಳಿದಿದ್ದಾರೆ!
ವೀರಮ್​ಗಾಮ್​ ಗುಜರಾತ್​ನಾದ್ಯಂತ ಚರ್ಚೆಗೀಡಾಗಿರುವ ವಿಧಾನಸಭಾ ಕ್ಷೇತ್ರ. ಹಾರ್ದಿಕ್​ ಪಟೇಲ್​ ಮೆಹಸಾನ ಜಿಲ್ಲೆಯ ನರ್ಶಿಪುರದ ತನ್ನ ಸೋದರ ಮಾವನ ಮನೆಯಲ್ಲಿ ಜನಿಸಿದ್ದರೂ, ಬೆಳೆದು ದೊಡ್ಡವನಾಗಿದ್ದು ಮೂಲ ಮನೆಯಿರುವ ಅಹ್ಮದಾಬಾದ್​ ಜಿಲ್ಲೆಯ ವೀರಮ್​ಗಾಮ್​ನ ಚಂದನ್​ ನಗರಿ ಹಳ್ಳಿಯಲ್ಲೆ. ಮೊದಲ ಬಾರಿಗೆ ತ್ರಿಕೋನ ಚುನಾವಣಾ ಕದನಕ್ಕೆ ಸಾಯಾಗುತ್ತಿರುವ ವೀರಮ್​ಗಾಮ್​, ಕಳೆದೆರಡು ಚುನಾವಣೆಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಾಖಾಭಾಯ್​ ಭರ್ವಾಡರನ್ನು ಆಯ್ಕೆ ಮಾಡಿದೆ. ಲಾಖಾಭಾಯ್​ ವ್ಯಕ್ತಿ ಒಳ್ಳೆಯವರಾಗಿದ್ದರೂ, ಜನಪ್ರತಿನಿಧಿಯಾಗಿ ಪ್ರಯೋಜನವಿಲ್ಲ ಎಂಬ ಮಾತುಗಳು ಈಗ ಅಲ್ಲಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್​ ಟಿಕೆಟ್​ ಆಕಾಂಯಾಗಿದ್ದ ಸ್ಥಳಿಯ ಕಾಂಗ್ರೆಸ್​ ಮುಖಂಡ ಅಮರ್​ ಸಿನ್ಹಾ ಠಾಕೂರ್​, ಟಿಕೆಟ್​ ತಪ್ಪಿದ್ದರಿಂದ ಕೊನೆಣದಲ್ಲಿ ಆಮ್​ ಆದ್ಮಿ ಪಾರ್ಟಿ ಸೇರಿದರು. ಮೊದಲಿಗೆ ಕುನ್ವರ್ಜಿ ಠಾಕೂರ್​ಗೆ ಟಿಕೆಟ್​ ೂಷಣೆ ಮಾಡಿದ್ದ ಆಪ್​, ಕಾಂಗ್ರೆಸ್​ ಮತಗಳನ್ನು ಒಡೆದು, ಹಾರ್ದಿಕ್​ ಪಟೇಲ್​ಗೆ ಫೈಟ್​ ನೀಡಲು ಅಮರ್​ ಸಿನ್ಹಾ ಸೂಕ್ತ ವ್ಯಕ್ತಿ ಎಂದು ಭಾವಿಸಿ, ಕುನ್ವರ್ಜಿ ಬದಲಿಗೆ ಅಮರ್​ ಸಿನ್ಹಾರನ್ನು ಕಣಕ್ಕಿಳಿಸಿದೆ. ಮೇಲ್ನೋಟಕ್ಕೆ ಇಲ್ಲಿ ತ್ರಿಕೋನ ಕದನ ಎಂದು ಕಂಡುಬಂದರೂ, ಫೈನಲ್​ ಫೈಟ್​ ಬಿಜೆಪಿ&ಆಮ್​ ಆದ್ಮಿ ನಡುವೆ ಎಂಬ ಅಭಿಪ್ರಾಯವಿದೆ.
ಆಂದೋಲನದ ಸದ್ದಿಲ್ಲ:ಪಟೇಲ್​ ಮೀಸಲಾತಿಗಾಗಿ ಹಾರ್ದಿಕ್​ ನಡೆಸಿದ ಆಂದೋಲನದ ಕಾರಣಕ್ಕಾಗಿಯೇ ಚಂದನ್​ ನಗರಿ ಹಳ್ಳಿ ರಾಜ್ಯಾದ್ಯಂತ ಗಮನಸೆಳೆದಿತ್ತು. ಈಗ ಆಂದೋಲನದ ಸದ್ದಡಗಿದೆ. ಪಾಟಿದಾರರು ಮೌನಕ್ಕೆ ಶರಣಾಗಿದ್ದಾರೆ. ಹೋರಾಟಗಾರ ಹಾರ್ದಿಕ್​ ಬಿಜೆಪಿ ತೆಕ್ಕೆಯಲ್ಲಿದ್ದಾರೆ. 750 ಜನಸಂಖ್ಯೆ ಇರುವ ಚಂದನ್​ ನಗರಿಯಲ್ಲಿ 450ಕ್ಕೂ ಹೆಚ್ಚು ಮಂದಿ ಪಾಟಿದಾರ್​ (ಪಟೇಲ್​) ಸಮುದಾಯದವರು. ಮೀಸಲಾತಿ ಆಂದೋಲನದಲ್ಲಿ ಹಾರ್ದಿಕ್​ಗೆ ಬೆನ್ನೆಲುಬಾಗಿ ನಿಂತಿದ್ದ ಹಳ್ಳಿಗರು, ಅಂದು ಬಿಜೆಪಿ ಮೇಲಿನ ಸಿಟ್ಟಿನಿಂದಲೇ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಿದ್ದರು. ಒಂದರ್ಥದಲ್ಲಿ, ಹಾರ್ದಿಕ್​ ಕಾಂಗ್ರೆಸ್​ಗೆ ಬಹಿರಂಗ ಬೆಂಬಲ ೂಷಿಸಿದ್ದರಿಂದಲೇ ವೀರಮ್​ಗಾಮ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲುವಿನ ಹಾದಿ ಸುಲಭಗೊಂಡಿತ್ತು. ಮೊದಲಿನಿಂದಲೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹಾರ್ದಿಕ್​ ತಂದೆ ಭರತ್​ ಭಾಯ್​ ಪಟೇಲ್​, ಮಾಜಿ ಸಿಎಂ ಆನಂದಿಬೆನ್​ ಪಟೇಲ್​ ಸೇರಿ ಅನೇಕರೊಂದಿಗೆ ಕೆಲಸ ಮಾಡಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇವರೆಲ್ಲರೂ ತಿರುಗಿಬಿದ್ದರು. ಈ ಬಾರಿ ಚಿತ್ರಣ ಬದಲಾಗಿದೆ. ಲಾಖಾಭಾಯ್​ ಜನಪ್ರಿಯತೆ ಬದಿಗೆ ಸರಿದು, ಬಿಜೆಪಿ&ಆಮ್​ ಆದ್ಮಿ ಪಾರ್ಟಿ ಹವಾ ಜೋರಾಗಿದೆ.
“ನಿಮ್ಮ ಅಂದಿನ ಹೋರಾಟಕ್ಕೆ ಗೆಲುವು ಸಿಕ್ಕಿತೆ’ ಎಂಬ ವಿಜಯವಾಣಿ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್​ ತಂಗಿ ಸೃಷ್ಟಿ ಪಟೇಲ್​, ಆರ್ಥಿಕವಾಗಿ ದುರ್ಬಲವಿರುವ ಮೇಲ್ವರ್ಗದ ಮಂದಿಗೆ ಕನಿಷ್ಠ ಶೇ. 10 ಮೀಸಲಾತಿ ಸಿಗುತ್ತಿದೆ. ಶೂನ್ಯದ ಬದಲು ಶೇ. 10 ಮೀಸಲಾತಿಯನ್ನು ಮೋದಿ ಸರ್ಕಾರ ನೀಡಿರುವುದು ಸಮಾಧಾನ ತಂದಿದೆ ಎಂದು ಸಮರ್ಥಿಸಿಕೊಂಡರು.
ಠಾಕೂರರ ಪ್ರಾಬಲ್ಯ:ವೀರಮ್​ಗಾಮ್​ ಕ್ಷೇತ್ರದಲ್ಲಿ 65 ಸಾವಿರ ಒಬಿಸಿಯ ಠಾಕೂರರು, 50 ಸಾವಿರ ಪಟೇಲರು, 35 ಸಾವಿರ ದಲಿತರಿದ್ದಾರೆ. ಆಮ್​ ಆದ್ಮಿ ಪಾರ್ಟಿಯ ಅಭ್ಯರ್ಥಿ ಠಾಕೂರ್​ ಸಮುದಾಯ ಪ್ರತಿನಿಧಿಸುತ್ತಿರುವುದರಿಂದ ಬಿಜೆಪಿಯಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಯಾಗಿದೆ. ಬಿಜೆಪಿ ವಿರೋಧಿ ಮತಗಳು ಆಪ್​&ಕಾಂಗ್ರೆಸ್​ ಮಧ್ಯೆ ವಿಭಜನೆಗೊಳ್ಳುವುದರಿಂದ ಬಿಜೆಪಿಗೇ ಲಾಭ. ಕಳೆದ ಬಾರಿ ಬಿಜೆಪಿಯಿಂದ ದೂರವಿದ್ದ ಪಟೇಲ್​ ಮತಗಳು ಈ ಬಾರಿ ಹಾರ್ದಿಕ್​ರನ್ನು ಬೆಂಬಲಿಸಲಿವೆ. ಹೀಗಾಗಿ, ನಮಗೆ ಗೆಲುವು ನಿಶ್ಚಿತ ಎಂದು ಬಿಜೆಪಿ ಕಚೇರಿಯಲ್ಲಿ ಸಿಕ್ಕ ಅಹ್ಮದಾಬಾದ್​ ಜಿಲ್ಲಾ ಮಹಿಳಾ ಮೋರ್ಚಾ ಮಹಾಮಂತ್ರಿ ಆನಂದಿಬೆನ್​ ಪಟೇಲ್​ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಹಾರ್ದಿಕ್​ ಪಟೇಲ್​ ಪರ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಪ್ರಚಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರಕ್ಕೆ ಜನಪ್ರಿಯ ನಾಯಕರ ಅನುಪಸ್ಥಿತಿ ಎದ್ದುಕಾಣುತ್ತಿದೆ.
ಕೈ ಸುಟ್ಟುಕೊಳ್ಳುವುದೇ?:ಅಮರ್​ ಸಿನ್ಹಾ ಠಾಕೂರ್​ಗೆ ಕಾಂಗ್ರೆಸ್​ ಟಿಕೆಟ್​ ನೀಡಿದ್ದರೆ, ಇಲ್ಲಿ ಆಮ್​ ಆದ್ಮಿ ಪಾರ್ಟಿ ಚಿತ್ರಣದಲ್ಲೆ ಇರುತ್ತಿರಲಿಲ್ಲ ಎಂಬ ವಾದವನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಹಾಲಿ ಶಾಸಕರ ಬಗ್ಗೆ ವಿರೋಧಿ ಅಲೆಯಿದ್ದರೂ, ಅವರಿಗೆ ಟಿಕೆಟ್​ ನೀಡುವ ನಿರ್ಧಾರದಿಂದ ಸ್ಥಳಿಯ ಕಾರ್ಯಕರ್ತರಲ್ಲಿ ಬೇಸರ ಕಾಣುತ್ತಿದೆ. ಟಿಕೆಟ್​ ತಪ್ಪಿದ್ದರಿಂದ ಅಮರ್​ ಸಿನ್ಹಾ ಅವರಿಗೆ ಬಿಜೆಪಿಗಿಂತ ಕಾಂಗ್ರೆಸ್​ ಸೋಲಿಸಬೇಕೆಂಬ ಸಿಟ್ಟು ಹೆಚ್ಚಾಗಿದೆ ಎಂದು ಸ್ಥಳಿಯರು ವಿಶ್ಲೇಷಿಸುತ್ತಾರೆ.
ಹಾರ್ದಿಕ್​ಗೆ ವಿಶ್ವಾಸಾರ್ಹತೆ ಪ್ರಶ್ನೆ:2015ರಿಂದ 2 ವರ್ಷ ಆಕ್ರಮಣಕಾರಿ ಆಂದೋಲನ ನಡೆಸಿ, ಆನಂದಿಬೆನ್​ ಪಟೇಲ್​ ರಾಜೀನಾಮೆಗೆ ಕಾರಣಕರ್ತರಾಗಿದ್ದ ಹಾರ್ದಿಕ್​ ಪಟೇಲ್​, 2017ರ ಚುನಾವಣೆ ಬಳಿಕ ಕಾಂಗ್ರೆಸ್ಸನ್ನು ಅಧಿಕೃತವಾಗಿ ಸೇರಿಕೊಂಡಿದ್ದರು. ರಾಜ್ಯ ಕಾಂಗ್ರೆಸ್​ ಅಧ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಾರ್ದಿಕ್​ ಕಾರ್ಯಾಧ್ಯ ಸ್ಥಾನಕ್ಕೆ ತೃಪ್ತರಾಗಿರಲಿಲ್ಲ. ಹಾರ್ದಿಕ್​ಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡದ ಸ್ಥಳಿಯ ಕಾಂಗ್ರೆಸ್​ ನಾಯಕರು, ಅನಿವಾರ್ಯವಾಗಿ ಪದಿಂದ ಹೊರಹೋಗುವಂತೆ ನೋಡಿಕೊಂಡರು. ಅತ್ತ ರಾಹುಲ್​ ಗಾಂಧಿಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್​ನಲ್ಲಿದ್ದು ಪ್ರಯೋಜನವಿಲ್ಲ ಎಂದುಕೊಂಡ ಹಾರ್ದಿಕ್​ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಎದುರು ನೋಡುತ್ತಿದ್ದಾರೆ. ಒಂದೆಡೆ, ಸಿಎಂ ಸ್ಥಾನದಿಂದ ವಿಜಯ್​ ರೂಪಾಣಿ ಅವರನ್ನು ಕೆಳಗಿಳಿಸಿ ಪಟೇಲ್​ ಸಮುದಾಯದ ಭೂಪೇಂದ್ರ ಪಟೇಲ್​ರನ್ನು ಮುಖ್ಯಮಂತ್ರಿ ಮಾಡಿ, ಮತ್ತೊಂದೆಡೆ ಹಾರ್ದಿಕ್​ರನ್ನು ಪಕ್ಕೆ ಸೇರಿಸಿಕೊಂಡ ದಿಲ್ಲಿ ವರಿಷ್ಠರು, ಇಡೀ ಪಾಟಿದಾರ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ, ಹಾರ್ದಿಕ್​ ಪಟೇಲ್​ ಅವಕಾಶವಾದಿ ಎಂದು ಪಟೇಲ್​ ಸಮುದಾಯದ ಒಂದು ವರ್ಗ ಭಾವಿಸಿದೆ. ಈ ಚರ್ಚೆಗೆ ಇನ್ನೊಂದು ಆಯಾಮ ನೀಡಿದ ತೌರಿ ಮುಬಾರಕ್​ ಗ್ರಾಮದ ಯುವಕ ಲಲಿತ್​ ಭಾಯ್​, 5 ವರ್ಷದ ಹಿಂದೆ ತಮ್ಮ ವಿರುದ್ಧ ಹಾರ್ದಿಕ್​ ಏನೇನು ಮಾತನಾಡಿದ್ದ ಎನ್ನುವುದನ್ನು ಮೋದಿ&ಶಾ ಮರೆಯಲು ಸಾಧ್ಯವೇ? ಅಷ್ಟು ಸುಲಭದಲ್ಲಿ ಅವರು ಹಾರ್ದಿಕ್​ರನ್ನು ಅಪ್ಪಿಕೊಳ್ಳುತ್ತಾರಾ? ಒಂದು ವೇಳೆ ಹಾರ್ದಿಕ್​ ಸೋತರೆ ಆತನ ರಾಜಕೀಯ ಭವಿಷ್ಯ ಅಲ್ಲಿಗೆ ಮುಕ್ತಾಯ. ಬಹುಶ@ ಬಿಜೆಪಿ ನಾಯಕರು ಅದನ್ನೇ ಬಯಸುತ್ತಿರಬಹುದು. ರಾಜಕಾರಣದಲ್ಲಿ ಯಾರನ್ನೂ ನಂಬಬೇಡಿ ಎಂದು ಎಚ್ಚರಿಕೆ ನೀಡಿದ!
ಅಂದು ಮೂವರು, ಈಗ ಒಬ್ಬನೇ!:2017ರಲ್ಲಿ ಪಾಟಿದಾರ್​ ಅನಾಮತ್​ ಆಂದೋಲನ ಸಮಿತಿ ನಾಯಕ ಹಾರ್ದಿಕ್​ ಪಟೇಲ್​, ಒಬಿಸಿ ಏಕತಾ ಮಂಚ್​ ಅಧ್ಯಕ್ಷ ಅಲ್ಪೇಶ್​ ಠಾಕೂರ್​, ರಾಷ್ಟ್ರೀಯ ದಲಿತ ಅಧಿಕಾರ್​ ಮಂಚ್​ ನಾಯಕ ಜಿಗ್ನೇಶ್​ ಮೆವಾನಿ ಸೇರಿ ಮೂವರೂ ಬಿಜೆಪಿ ವಿರುದ್ಧ ವ್ಯವಸ್ಥಿತ ಅಭಿಯಾನ ನಡೆಸಿದ ಪರಿಣಾಮ ಬಿಜೆಪಿ 99 ಸೀಟುಗಳಿಗೆ ತಗ್ಗಿ, ಕಾಂಗ್ರೆಸ್​ 77 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಈ ಬಾರಿ ಜಿಗ್ನೇಶ್​ ಮೆವಾನಿ ಮಾತ್ರ ಕಾಂಗ್ರೆಸ್​ ಅಖಾಡದಲ್ಲಿದ್ದಾರೆ. ಅಲ್ಪೇಶ್​ ಠಾಕೂರ್​ ಕೂಡ ಬಿಜೆಪಿ ಸೇರಿ ಗಾಂಧಿನಗರ ದಣದಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಪೇಶ್​ 2017ರಲ್ಲಿ ಕಾಂಗ್ರೆಸ್​ ಪರ ರಾಧಾನ್​ಪುರ ೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, 2 ವರ್ಷಗಳ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ನಂತರ ಅದೇ ೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಿದ ಅಲ್ಪೇಶ್​ ಠಾಕೂರ್​ರನ್ನು ಮತದಾರರು 4000 ಮತಗಳಿಂದ ಸೋಲಿಸಿದರು. ಹಾಗಾದರೆ, ಅಂದು ಕಾಂಗ್ರೆಸ್​ ಜತೆಗಿದ್ದು, ಈಗ ಬಿಜೆಪಿ ಸೇರಿರುವ ಹಾರ್ದಿಕ್​ಗೂ ಈ ಆತಂಕ ಇರಬಹುದೇ? ಡಿ. 8ಕ್ಕೆ ಉತ್ತರ ಸಿಗಲಿದೆ.
ನೀರಿಲ್ಲ, ಊಟವಿಲ್ಲ…ವೀರಮ್​ಗಾಮ್​ನ ಹಲವು ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ತೌರಿ ಮುಬಾರಕ್​ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ನೀರಿನ ವ್ಯವಸ್ಥೆ ಒದಗಿಸಲು ಟ್ಯಾಂಕ್​ ಕೂಡ ಇರಲಿಲ್ಲ. ಮಧ್ಯಾಹ್ನದ ಬಿಸಿಯೂಟವೂ ನೀಡಲಾಗುತ್ತಿಲ್ಲ. ಬಿಸಿಯೂಟಕ್ಕೆ ದುಡ್ಡು ಬಂದರೂ ಮಕ್ಕಳು ಮನೆಯಿಂದ ಟಿಫನ್​ ಬಾಕ್ಸ್​ ಮತ್ತು ಬಾಟಲಿಯಲ್ಲಿ ನೀರು ತರಬೇಕು. 8ನೇ ತರಗತಿವರೆಗೆ ವಿದ್ಯಾರ್ಥಿಗಳು ಇಲ್ಲಿ ಓದುತ್ತಾರೆ. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದೆಯೇ ಎಂದು ಸ್ಥಳಿಯ ಯುವಕ ಕಲ್ಪೇಶ್​ ಪ್ರವಿಣ್​ ಭಾಯ್​ ಪ್ರಶ್ನಿಸಿದರು. ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದೆ ಎಲ್ಲಾ ವ್ಯವಸ್ಥೆ ಬರಲಿದೆ ಎಂದು ಶಾಲೆ ಸಿಬ್ಬಂದಿ ಸಮರ್ಥಿಸಿಕೊಂಡರೂ, ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆಯಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
