ನವದೆಹಲಿ:ಟೀಂ ಇಂಡಿಯಾ ಕ್ರಿಕೆಟ್​ ಆಟಗಾರ ಹಾರ್ದಿಕ್​ ಪಾಂಡ್ಯಾ ನಿಶ್ಚಿತಾರ್ಥ ಇಂದು ನಡೆದಿದೆ.
ಹಾರ್ದಿಕ್​ ಪಾಂಡ್ಯಾ ಅವರು ತಮ್ಮ ಪ್ರೇಯಸಿಯ ಜತೆ ಇಂದು ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯಾ ಅವರ ಕೈ ಹಿಡಿಯಲಿರುವವರು ಸರ್ಬಿಯಾದ ನಟಿ, ಮಾಡೆಲ್​ ನತಾಶಾ ಸ್ಟಾಂಕೋವಿಕ್​. ಇವರಿಬ್ಬರೂ ಹಲವು ದಿನಗಳಿಂದಲೂ ಪ್ರೀತಿಸುತ್ತಿದ್ದರು.
ಇಂದು ಬೆಳಗ್ಗೆ ತಾವು ನತಾಶಾ ಅವರೊಂದಿಗೆ ಇದ್ದ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದ ಹಾರ್ದಿಕ್​ ಪಾಂಡ್ಯಾ, ನಾನು ನನ್ನ ಹೊಸವರ್ಷವನ್ನು ನನ್ನ ಪಟಾಕಿಯೊಂದಿಗೆ ಪ್ರಾರಂಭಿಸುತ್ತಿದ್ದೇನೆ ಎಂದಿದ್ದರು. ಈ ಮೂಲಕ ನತಾಶಾ ಅವರನ್ನು ಸುಡುಮದ್ದಿಗೆ ಹೋಲಿಸಿದ್ದರು.
ಅದಾದ ಬಳಿಕ ಈ ಸ್ವಲ್ಪಹೊತ್ತಿಗೆ ಮೊದಲು ಮತ್ತೊಂದು ಪೋಸ್ಟ್ ಹಾಕಿ, ನಿಶ್ಚಿತಾರ್ಥ ಆಗಿದ್ದನ್ನು ದೃಢಪಡಿಸಿದ್ದಾರೆ.ಬೆನ್ನುನೋವಿನಿಂದ ಬಳಲುತ್ತಿದ್ದ ಹಾರ್ದಿಕ್​ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್​ನಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವೇ ಉಳಿದಿರುವ ಹಾರ್ದಿಕ್​ ಪಾಂಡ್ಯಾ ಮುಂದಿನ ತಿಂಗಳು ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
https://www.instagram.com/p/B6vsadJlcUX/
https://www.instagram.com/p/B6xrw7WlubB/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
