ನವದೆಹಲಿ:ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ  ಪತ್ನಿ ನತಾಶಾ ಸ್ಟಾಂಕೋವಿಕ್ ಅವರು ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಮಾಡಿದಂತೆ ಪರಸ್ಪರ ಪ್ರತ್ಯೇಕಗೊಂಡಿರುವುದಾಗಿ ತಿಳಿಸಿದ್ದರು.   ಆದರೆ  ಈ ಜೋಡಿ ಬೇರಯಾಗಿರುವ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸುದ್ದಿ ಕೇಳಿ ಬಂದಿದೆ.
ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಅದ್ದೂರಿಯಾಗಿ  ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ  ವಿಚ್ಛೇಧನ ಪಡೆಯುತ್ತಿರುವುದಾಗಿ ಖಚಿತಪಡಿಸಿದ್ದಾರೆ.
🥹❤️pic.twitter.com/VTO7voSGBU
— Out Of Context Cricket (@GemsOfCricket)July 24, 2024

ಕಳೆದ 3-4 ತಿಂಗಳುಗಳಿಂದ ಹಾರ್ದಿಕ್ ಮತ್ತು ನತಾಶಾ ಪರಸ್ಪರರ ಪೋಸ್ಟ್‌ಗಳನ್ನು ನೋಡಿಲ್ಲ ಅಥವಾ ಇಷ್ಟಪಟ್ಟಿಲ್ಲ. ಆದರೆ ಇಬ್ಬರ ಅಗಲಿಕೆಯ ನಂತರ ಅದು ವಿಭಿನ್ನವಾಗಿ ಕಂಡಿತು. ಜುಲೈ 24 ರ ಬುಧವಾರದಂದು ನತಾಶಾ ಅವರ ಹೊಸ ಪೋಸ್ಟ್ ಕುರಿತು ಹಾರ್ದಿಕ್ ಕಾಮೆಂಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಹಾರ್ದಿಕ್ ಕಾಮೆಂಟ್‌ಗೆ ಸಾವಿರಾರು ಲೈಕ್‌ಗಳು ಬಂದಿವೆ.
ಹಾರ್ದಿಕ್ ಪಾಂಡ್ಯ ಸದ್ಯ ಟೀಂ ಇಂಡಿಯಾ ಜೊತೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಹಾರ್ದಿಕ್ ಟಿ20 ತಂಡದ ಸದಸ್ಯ ಎಂಬುದು ಗೊತ್ತೇ ಇದೆ. ಆದರೆ, ಅವರು ತಂಡದ ಪ್ರಮುಖ ಭಾಗವಾಗಿದ್ದಾರೆ.  ನತಾಶಾ ಭಾರತವನ್ನು ತೊರೆದು ಸೆರ್ಬಿಯಾಕ್ಕೆ ಹಿಂತಿರುಗಿದಾಗಿನಿಂದ, ಅವರ ಮಗ ಅಗಸ್ತ್ಯನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಗಸ್ತ್ಯ ಭಾರತದಿಂದ ಹೊರಡುವಾಗ ವಿಮಾನ ನಿಲ್ದಾಣದಲ್ಲಿ ದುಃಖದಿಂದ ಕಾಣುತ್ತಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ನತಾಶಾನಿರಂತರವಾಗಿ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮ್ಯೂಸಿಯಂಗೆ ಹೋಗಿದ್ದರು. ಅವರು ತಮ್ಮ ಮಗ ಅಗಸ್ತ್ಯ ಅವರೊಂದಿಗಿನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಹಾರ್ದಿಕ್ ಪಾಂಡ್ಯ ಎರಡು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಕಳೆದ 3-4 ತಿಂಗಳಲ್ಲಿ ಮೊದಲ ಬಾರಿಗೆ ನತಾಶಾ ಅವರ ಪೋಸ್ಟ್‌ಗೆ ಹಾರ್ದಿಕ್ ಪ್ರತಿಕ್ರಿಯಿಸಿದ್ದಾರೆ. ಹಾರ್ದಿಕ್ ಅವರು ತಮ್ಮ ಮಗನ ಈ ಫೋಟೋಗಳ ಕಾಮೆಂಟ್‌ಗಳಲ್ಲಿ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಎರಡನೇ ಕಾಮೆಂಟ್‌ನಲ್ಲಿ, ಹಾರ್ದಿಕ್ ಪ್ರೀತಿಯನ್ನು ವ್ಯಕ್ತಪಡಿಸುವ ಇನ್ನೂ ಮೂರು ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಅವರ ಎರಡು ಕಾಮೆಂಟ್‌ಗಳಿಗೆ ಸಾವಿರಾರು ಲೈಕ್‌ಗಳು ಬಂದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + three =
Remember me
