ಹರಿದ್ವಾರ :ಉತ್ತರಾಖಂಡದ ಹರಿದ್ವಾರದಲ್ಲಿ ಜೂನ್ 20 ಮತ್ತು 21 ರಂದು ನಿಗದಿಪಡಿಸಲಾಗಿದ್ದ ಗಂಗಾ ಸ್ನಾನ ಕಾರ್ಯಕ್ರಮವನ್ನು ಕರೊನಾದಿಂದಾಗಿ ರದ್ದುಗೊಳಿಸಲಾಗಿದೆ. ಭಕ್ತಾದಿಗಳು ಆ ಎರಡು ದಿನಗಳಂದು ಸಲ್ಲುವ ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿಯ ಸಂದರ್ಭದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುವ ಪ್ರತೀತಿ ಇದೆ. ಆದರೆ ಈ ಬಾರಿ ಅದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹರಿದ್ವಾರ ಜಿಲ್ಲಾಡಳಿತ ಹೇಳಿದೆ.
ಕರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹರಿದ್ವಾರಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕರೊನಾ ನೆಗೆಟಿವ್ ವರದಿ ಇರುವ ಜನರಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಜೂನ್ 20 ಮತ್ತು 21 ರಂದು ಜಿಲ್ಲೆಯ ಗಡಿಗಳನ್ನು ಸೀಲ್​ ಮಾಡಲಾಗುವುದು. ಹೊರಗಿನಿಂದ ಬರುವ ಯಾತ್ರಿಗಳನ್ನು ವಾಪಸ್​ ಕಳುಹಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಕಮಲೇಶ್​ ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ:ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿನ ನಿರ್ಬಂಧ ಮತ್ತಷ್ಟು ಸಡಿಲಿಕೆ: ಬಸ್​ ಸಂಚಾರಕ್ಕೆ ಅವಕಾಶ
ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿಯನ್ನು ಹರಿದ್ವಾರದ ಹರ್​ ಕಿ ಪೌಡಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಕೇವಲ ತೀರ್ಥ ಪುರೋಹಿತರು ಮತ್ತು ಗಂಗಾ ಸಭಾದ ಅಧಿಕಾರಿಗಳಿಗೆ ಮಾತ್ರ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಅವಕಾಶವಿರುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)
ಈ ರಾಜ್ಯದಲ್ಲಿ ಸಂಪೂರ್ಣ ಅನ್​ಲಾಕ್​! ಜುಲೈ 1 ರಿಂದ ಶಾಲೆ, ಕಾಲೇಜು ಆರಂಭ

ಕುಂಭ ಮೇಳದ ವೇಳೆ ನಕಲಿ ಕರೊನಾ ಪರೀಕ್ಷಾ ವರದಿ : ತನಿಖೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + five =
Remember me
