ಹೈದರಾಬಾದ್​:ರವಿತೇಜ ನಾಯಕನಟನಾಗಿ ಅಭಿನಯಿಸಿರುವ ಮಿಸ್ಟರ್ ಬಚ್ಚನ್ ಈಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಗುರುವಾರ ಸಂಜೆ ಪ್ರೀಮಿಯರ್‌ ಶೋ ಕಂಡಿದೆ. ಆದರೆ ಚಿತ್ರದಲ್ಲಿನ ಸಿತಾರ್​ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ರೀತಿಗೆ ನಿರ್ದೇಶಕ ಹರೀಶ್​ ಶಂಕರ್​ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತಾ ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: 19 ಮಂದಿ ಬಂಧನ
ರವಿತೇಜ ಮತ್ತು ಭಾಗ್ಯಶ್ರೀ ಬೋರ್ಸೆ ಅವರನ್ನು ಸಿತಾರ್ ಹಾಡಿನಲ್ಲಿ ಅಸಹ್ಯಬರುವಂತೆ ನಡೆಸಿಕೊಳ್ಳಲಾಗಿದೆ. ಈ ಹಾಡಿಗೆ ಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ನೃತ್ಯ ಸಂಯೋಜನೆ ನೆಟ್ಟಿಗರ ಮನಗೆದ್ದಿಲ್ಲ. ತಂಡವು ಗುರುವಾರ ಸಂಜೆ ಸಕ್ಸಸ್​ ಮೀಟ್​ನಡೆಸಿತು. ಈ ಸಂದರ್ಭದಲ್ಲಿ ಹರೀಶ್ ಶಂಕರ್ ಅವರನ್ನು ಅಸಭ್ಯ ನೃತ್ಯದ ಬಗ್ಗೆ ಕೇಳಲಾಯಿತು.
“ಸಿತಾರ್” ಹಾಡಿನಲ್ಲಿ 56 ವರ್ಷದ ನಟ ರವಿತೇಜ ಮತ್ತು 25 ವರ್ಷದ ಭಾಗ್ಯಶ್ರೀ ಬೋರ್ಸೆ ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳನ್ನು ಕೆಲವರು ಪ್ರಶಂಸಿಸಿದ್ದಾರೆ. ಆದರೆ ಇದರಲ್ಲಿ ಕೆಲವು ಅಶ್ಲೀಲ ದೃಶ್ಯಗಳು ಟೀಕೆಗೆ ಕಾರಣವಾಗಿವೆ. ರವಿ ತೇಜ ಬೋರ್ಸೆಯ ಲೆಹೆಂಗಾದ ಒಳಗೆ ತನ್ನ ಕೈ ಇಡುತ್ತಾನೆ, ಇದು ಅನೇಕರು ಅನುಚಿತವೆಂದು ಕಾಮೆಂಟ್​ ಮಾಡಿದ್ದಾರೆ ಇದರ ಬಗ್ಗೆ ಏನು ಹೇಳ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದರು.
ನಿರ್ದೇಶಕ ಹರೀಶ್ ಇದಕ್ಕೆ ಉತ್ತರಿಸಿ, ಚಿತ್ರೀಕರಣದ ಮೊದಲ ದಿನವೇ ಆ ಸ್ಟೆಪ್ಸ್​ ಅನ್ನು ಚಿತ್ರೀಕರಿಸಲಾಗಿದೆ. ಸಿನಿಮಾ ನೋಡುವಾಗ ಅಸಭ್ಯ ಅಥವಾ ಸಮಸ್ಯಾತ್ಮಕವಾಗಿ ಕಾಣುವುದಿಲ್ಲ. ಆದರೆ ನೀವು ಅದನ್ನು ಸೆರೆಹಿಡಿದು ಪೋಸ್ಟರ್ ಆಗಿ ಬಿಡುಗಡೆ ಮಾಡಿದಾಗ ಅದು ಕೆಟ್ಟದಾಗಿ ಕಾಣುತ್ತದೆ. ಯಾವುದೇ ಹಾಡಿನ ಯಾವುದೇ ನೃತ್ಯ ಚಲನೆಯನ್ನು ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಮೂಲಕ ಕೆಟ್ಟ ರೀತಿಯಲ್ಲಿ ತೋರಿಸಬಹುದು ಎಂದು ಪ್ರತಿಕ್ರಿಯಿಸಿದರು.
ಮಿಸ್ಟರ್ ಬಚ್ಚನ್ ಸಿನಿಮಾಗೆ ಬರುತ್ತಿರುವ ನೆಗೆಟಿವಿಟಿ ಬಗ್ಗೆ ಪ್ರತಿಕ್ರಿಯಿಸಿ, ಸಿನಿಮಾ ಉತ್ತಮ ಪ್ರದರ್ಶನ ಕಂಡು ಇದೆಲ್ಲ ದೂರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೆಲ್ಲಲಿಲ್ಲ ಪದಕ..ಸ್ಟೆಪ್ಸ್ ಹಾಕಿ ಟ್ರೋಲ್​ ಆದ ಬ್ರೇಕ್ ಡ್ಯಾನ್ಸರ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + 15 =
Remember me
