ನವದೆಹಲಿ: ಹಾರ್ಲೆ ಡೇವಿಡ್​​ಸನ್​’ಸ್ ಬೈಕ್​ ಎಂದರೆ ಸಾಕು ಯುವಜನ ಬಿಡಿ ಎಂಥವರ ಕಿವಿಯೂ ನೆಟ್ಟಗಾಗುತ್ತವೆ, ಕಿವಿಯೂ ಚುರುಕಾಗುತ್ತದೆ. ಒಮ್ಮೆ ರೈಡ್ ಮಾಡಿಬಿಡೋಣ ಎನ್ನುತ್ತದೆ ಮನಸ್ಸು. ಇಂಥ ಬೈಕ್​ನ ಹೊಸ ಫ್ಯಾನ್ ಯಾರು ನೋಡಿ..
ಲಾಕ್​ಡೌನ್​ ಶುರುವಾದ ನಂತರದಲ್ಲಿ ವೀಕ್​ಎಂಡ್​ ಅಂದ್ರೆ ಬಾಕಿ ಅಸೈನ್​ಮೆಂಟ್ ಮುಗಿಸುವುದು, ಮನೆ ಸ್ವಚ್ಛಗೊಳಿಸುವುದು, ಸ್ವಲ್ಪ ವಿಶ್ರಾಂತಿ ಪಡೆಯುವುದು ಮತ್ತು ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದವುಗಳಲ್ಲಿ ಸಿನಿಮಾ, ಸೀರಿಯಲ್, ವೆಬ್​ಸೀರೀಸ್​ ಗಳ ವೀಕ್ಷಣೆ ಅಷ್ಟೇ. ಅದಕ್ಕೂ ಹೆಚ್ಚಿನದು ಏನುಮಾಡಬಹುದು? ಸೆಲೆಬ್ರಿಟಿಗಳು ಇನ್ನೂ ಹೆಚ್ಚಿನದನ್ನು ಮಾಡಬಹುದು. ಆದರೆ ಭಾರತದ ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿಯವರು ಏನು ಮಾಡಬಹುದೆಂಬ ನಿರೀಕ್ಷೆಯೂ, ಕಲ್ಪನೆಯೂ ಯಾರಿಗೂ ಇಲ್ಲ.
ಇದನ್ನೂ ಓದಿ:ನಮ್ಮ ಬೇರುಗಳೇ ಶಾಶ್ವತ…
ಸಾಮಾನ್ಯರಂತೆ ಟಿ-ಶರ್ಟ್​ ಮತ್ತು ಸ್ನೀಕರ್ಸ್​ ಧರಿಸಿದ ಸಿಜೆಐ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರು ಭಾನುವಾರ ಹಾರ್ಲೆ ಡೇವಿಡ್​​ಸನ್’ಸ್​ ಬೈಕ್ ಏರಿ ಕುಳಿತ ದೃಶ್ಯ ಅನೇಕರ ಅಚ್ಚರಿಗೆ ಕಾರಣವಾಯಿತು. ಹಾರ್ಲೆ ಡೇವಿಡ್​ಸನ್​ ಸಿವಿಒ 2020 ಲಿಮಿಟೆಡ್ ಎಡಿಷನ್ ಬೈಕ್ ಅದು!. ಇದರ ಎಕ್ಸ್​ ಷೋರೂಂ ಬೆಲೆ 51 ಲಕ್ಷ ರೂಪಾಯಿ. 2000 ಸಿಸಿ ಎಂಜಿನ್​, ವಿ-ಟ್ವಿನ್​ ಎಂಜಿನ್​ ಹೊಂದಿರುವ ಬೈಕ್​ ಇದಾಗಿದ್ದು, 166 ಎನ್​ಎಂ ಟೋರ್ಕ್​ ಇದೆ. ನ್ಯಾಯಮೂರ್ತಿ ಎಸ್​.ಎ.ಬೊಬ್ಡೆಯವರು ಈ ರೀತಿ ಕಾಣಿಸಿಕೊಂಡದ್ದು ನಾಗಪುರದಲ್ಲಿ. ಅವರಿಗೆ ಬೈಕ್​ಗಳೆಂದರೆ ಅದೇನೋ ಕ್ರೇಜ್​ ಅಂತ ಪದೇಪದೆ ಹೇಳುತ್ತಿರುತ್ತಾರೆ. ಕಳೆದ ವರ್ಷವೂ ಅವರು ಹಾರ್ಲೆ ಡೇವಿಡ್​ಸನ್ ಬೈಕ್​ ಟೆಸ್ಟ್ ಡ್ರೈವ್ ಮಾಡಿದ್ದರು.
ಇದನ್ನೂ ಓದಿ:ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !
ಜೂನ್​ 22ರಂದು ಅವರು ನಾಗಪುರದಿಂದಲೇ ವಿಡಿಯೋ ಕಾನ್ಫರೆನ್ಸ್ ಮಾಡಿ ಜಗನ್ನಾಥ ರಥ ಯಾತ್ರೆ ಕೇಶ್​ನ ವಿಚಾರಣೆ ನಡೆಸಿ ತೀರ್ಪು ನೀಡಿ ದಾಖಲೆ ನಿರ್ಮಿಸಿದ್ದರು. (ಏಜೆನ್ಸೀಸ್)
ಅನಂತನಾಗ್​ನಲ್ಲಿ ಎನ್​ಕೌಂಟರ್​: ಮೂವರು ಉಗ್ರರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
