ನವದೆಹಲಿ:ಅಪಹೃತರ ಮೇಲೆ ಹಲ್ಲೆ ಮಾಡದೆ, ಬೆದರಿಸದೆ ಸರಿಯಾಗಿ ನೋಡಿಕೊಂಡರೆ ಅಪಹರಣಕಾರರಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್​ 364ಎ (ಒತ್ತೆ ಹಣಕ್ಕಾಗಿ ಅಪಹರಣ) ಪ್ರಕಾರ ಜೀವಾವಧಿ ಶಿಕ್ಷೆ ನೀಡಬಾರದು ಎಂದು ಸುಪ್ರೀಂ ಕೋರ್ಟ್​ ಗುರುವಾರ ಹೇಳಿದೆ. ತೆಲಂಗಾಣದ ಮಗುವೊಂದರ ಅಪಹರಣ ಪ್ರಕರಣದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​ ಮತ್ತು ಆರ್​. ಸುಭಾಷ್​ ರೆಡ್ಡಿ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಪ್ರಕರಣ ? :ರಿಕ್ಷಾ ಚಾಲಕ ಶೇಖ್​ ಅಹಮದ್​ ಎಂಬಾತ 2011ರಲ್ಲಿ ಆರನೇ ತರಗತಿ ಬಾಲಕನನ್ನು ಮನೆಗೆ ಡ್ರಾಪ್​ ಮಾಡುವ ಬದಲು ಅಪಹರಿಸಿದ್ದ. ಆ ಬಾಲಕನ ತಂದೆಯ ಬಳಿ 2 ಲಕ್ಷ ರೂಪಾಯಿ ಒತ್ತೆ ಹಣ ಕೇಳಿದ್ದ. ಪೊಲೀಸರು ಬಾಲಕನನ್ನು ರಸಿದ್ದರು. ಅಪಹರಣಕಾರ ಅಹಮದ್​ ಬಾಲಕನಿಗೆ ಯಾವುದೇ ಹಾನಿ ಮಾಡಿಲ್ಲ, ಬೆದರಿಕೆ ಒಡ್ಡಿಲ್ಲ ಎಂದು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಬಾಲಕನ ತಂದೆ ಹೇಳಿದ್ದರು. ಆದಾಗ್ಯೂ, ಅಹಮದ್​ಗೆ 364 ಎ ಪ್ರಕಾರ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತ್ತು. ಹೈಕೋರ್ಟ್​ ಕೂಡ ಇದನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಶೇಖ್​ ಅಹಮದ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ.
ಕೋರ್ಟ್​ ಹೇಳಿದ್ದೇನು?ಅಪರಾಧಿ ಅಹಮದ್​ ಈಗಾಗಲೇ ಏಳು ವರ್ಷ ಶಿಕ್ಷೆ ಅನುಭವಿಸಿದ್ದಾನೆ. 5,000 ರೂ. ದಂಡ ಪಾವತಿಸುವುದಕ್ಕೂ ಆತ ಬಾಧ್ಯಸ್ಥ. ಸೆಕ್ಷನ್​ 363 (ಅಪಹರಣಕ್ಕೆ ಶಿಕ್ಷೆ) ಪ್ರಕಾರ ಗರಿಷ್ಠ ಏಳು ವರ್ಷ ಸಜೆ ಮತ್ತು ದಂಡ ಪಾವತಿಸಬೇಕು. ಇದು ಈಗಾಗಲೇ ಆಗಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ಮೂರು ಅಂಶಗಳುಐಪಿಸಿ ಸೆಕ್ಷನ್​ 364 ಎ ಪ್ರಕಾರ ಅಪರಾಧವನ್ನು ಸಾಬೀತು ಮಾಡಲು ಪರಿಗಣಿಸಬೇಕಾದ ಮೂರು ಅಂಶಗಳನ್ನು ಕೋರ್ಟ್​ ಉಲ್ಲೇಖಿಸಿದೆ. ಅಪಹರಣ ಅಥವಾ ಯಾವುದೇ ವ್ಯಕ್ತಿಯ ಅಪಹರಣ ಅಥವಾ ಅಕ್ರಮ ಬಂಧನದಲ್ಲಿ ಇರಿಸುವಂಥದ್ದು, ಅಪಹರಣಕಾರನ ನಡವಳಿಕೆ ಹಾಗೂ ಸರ್ಕಾರ, ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಒತ್ತಡ ಹೇರಲು ಅಪಹೃತರಿಗೆ ಘಾಸಿ ಮಾಡುವಂಥದ್ದು. ಈ ಮೂರು ಕಾರಣಗಳ ಪೈಕಿ ಎರಡು ಅಥವಾ ಮೂರನೇ ಕಾರಣ ಸಾಬೀತಾದರೆ ಮಾತ್ರ ಸೆಕ್ಷನ್​ 364 ಎ ಪ್ರಕಾರದ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ.
ಅನರ್ಹತೆ ಇತ್ಯರ್ಥಕ್ಕೆ ಕಾಯ್ದೆ ರೂಪಿಸಿಸಂವಿಧಾನದ 10ನೇ ಷೆಡ್ಯೂಲ್​ ಪ್ರಕಾರ, ಜನಪ್ರತಿನಿಧಿಗಳ ಅನರ್ಹತೆ ದೂರುಗಳನ್ನು ಸ್ಪೀಕರ್​ ಅಥವಾ ಸದನದ ಅಧ್ಯಕ್ಷರು ಇತ್ಯರ್ಥಗೊಳಿಸುವುದಕ್ಕೆ ಸಂಬಂಧಿಸಿದ ಸಮಯ ಮಿತಿಯ ಚೌಕಟ್ಟನ್ನು ಹಾಕಲು ಕಾನೂನು ರೂಪಿಸುವ ಕೆಲಸ ಸಂಸತ್​ ಮಾತ್ರವೇ ಮಾಡಲು ಸಾಧ್ಯ ಎಂದು ಮುಖ್ಯ ನ್ಯಾಯ ಮೂರ್ತಿ ಎನ್​.ವಿ. ರಮಣ, ನ್ಯಾಯ ಮೂರ್ತಿಗಳಾದ ಎ.ಎಸ್​. ಬೋಪಣ್ಣ, ಹೃಷಿಕೇಶ್​ ರಾಯ್​ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್​ ನ್ಯಾಯ ಪೀಠ ಗುರುವಾರ ಹೇಳಿದೆ. ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್​ ಸಮಿತಿ ಸದಸ್ಯ ರಣಜಿತ್​ ಮುಖರ್ಜಿ ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆ ನ್ಯಾಯಪೀಠ ಈ ಮಾತು ಹೇಳಿದೆ. ಹಾಲಿ ಸಂಸದರ ಅನರ್ಹತೆ ಪಿಟಿಷನ್​ಗಳ ಬಗ್ಗೆ ತೀರ್ಮಾನ ಮಾಡುವುದಕ್ಕೆ ಸ್ಪೀಕರ್​ಗಳಿಗೆ ಸಮಯ ಮಿತಿ ನಿಗದಿ ಮಾಡಬೇಕು. ಸಂವಿಧಾನದ 10ನೇ ಷೆಡ್ಯೂಲ್​ ಪ್ರಕಾರ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳ ಲಾಗುತ್ತಿಲ್ಲ. ಕರ್ನಾಟಕದ ಶಾಸಕರ ಕೇಸ್​ ಗಮನಿಸಿ ಈಗಾಗಲೇ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಹಿರಿಯ ನ್ಯಾಯ ವಾದಿ ಕಪಿಲ್​ ಸಿಬಲ್​ ಇದೇ ದಾರಿಯಲ್ಲಿ ವಾದ ಮುಂದುವರಿಸಿದ್ದಾರೆ. ಇದರ ತೀರ್ಮಾನ ಏನಿದ್ದರೂ ಸಂಸತ್​ ಮಾಡಬೇಕಾಗಿದೆ ಎಂದು ಸಿಜೆಐ ರಮಣ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
