ನವದೆಹಲಿ:ಆಟೋ ಚಾಲಕರಿಗೆ ತಮ್ಮ ರಿಕ್ಷಾವನ್ನು ವಿಭಿನ್ನವಾಗಿ ಶೃಂಗರಿಸಬೇಕು ಎಂಬ ಆಸೆ ಇರುವುದು ಸಹಜ. ಹೀಗಾಗಿ ತಮ್ಮ ನೆಚ್ಚಿನ ನಟ-ನಟಿಯ ಫೋಟೋ ಅಂಟಿಸಿಕೊಳ್ಳುವುದು, ನುಡಿಮುತ್ತು, ಸಿನಿಮಾ ಡೈಲಾಗ್​ಗಳನ್ನು ಬರೆಯುವುದು ಇತ್ಯಾದಿ, ಮಾಡುತ್ತಿರುತ್ತಾರೆ. ಜತೆಗೆ ತಮ್ಮ ಆಟೋ ಸ್ಟೈಲಿಶ್ ಲುಕ್​ನಲ್ಲಿ ಕಂಗೊಳಿಸಬೇಕೆಂದು ತಮ್ಮ ಕಲ್ಪನೆಯಂತೆ ವಿಭಿನ್ನವಾಗಿ ಮಾರ್ಪಾಡು ಮಾಡುತ್ತಾರೆ. ಇದೀಗ ಇಲ್ಲೊಬ್ಬ ಆಟೋ ಚಾಲಕ, ತನ್ನ ರಿಕ್ಷಾವನ್ನು ಐಷಾರಾಮಿ ಕಾರಿನಂತೆ ಮಾರ್ಪಾಡು ಮಾಡಿ ಸುದ್ದಿಯಾಗಿದ್ದಾನೆ.
ಸದ್ಯ ಐಷಾರಾಮಿ ಕಾರಿನಂತೆ ಮಾರ್ಪಾಡಾಗಿರುವ ರಿಕ್ಷಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಖ್ಯಾತ ಉದ್ದಿಮೆದಾರ ಹರ್ಷಾ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ವಿಜಯ್ ಮಲ್ಯ ಅವರು ಕಡಿಮೆ ಬೆಲೆಯ ತ್ರಿಚಕ್ರ ಮಾದರಿಯ ಟ್ಯಾಕ್ಸಿ ವಿನ್ಯಾಸ ಮಾಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
If Vijay Mallya had to design a low cost 3 wheeler taxi@NaikAvishkarpic.twitter.com/q3pTGEV6xL— Harsh Goenka (@hvgoenka)February 4, 2023
If Vijay Mallya had to design a low cost 3 wheeler taxi@NaikAvishkarpic.twitter.com/q3pTGEV6xL
ವೈರಲ್ ಆಗಿರುವ ವಿಡಿಯೋವನ್ನು ಆವಿಷ್ಕರ್ ನಾಯಕ್ ಎಂಬಾತ ಮೊದಲು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಟೋ ರಿಕ್ಷಾವನ್ನು ವಿಭಿನ್ನವಾಗಿ ಮಾರ್ಪಾಡು ಮಾಡಿರುವುದನ್ನು ಕಾಣಬಹುದು. 80ರ ದಶಕದ ಬೂಟ್ ವಿಂಟೇಜ್ ಐಷಾರಾಮಿ ಕಾರಿನಂತೆ ಬದಲಾವಣೆ ಮಾಡಲಾಗಿದ್ದು, ಸವಾರರು ಕುಳಿತುಕೊಳ್ಳಲು ಬೆಲೆಬಾಳುವ ಸೀಟುಗಳನ್ನು ಅಳವಡಿಸಿದ್ದಾರೆ. ಮುಂಭಾಗವು ಸಾಮಾನ್ಯ ಆಟೋ ರಿಕ್ಷಾದಂತೆ ಕಾಣುತ್ತದೆ.
ಟ್ವಿಟರ್​ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಈಗಾಗಲೇ 33 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಜತೆಗೆ ಆಟೋ ಚಾಲಕ ಕ್ರಿಯಾಶೀಲ ದೃಷ್ಟಿಕೋನವನ್ನು ಪ್ರಶಂಸಿಸುತ್ತಿದ್ದಾರೆ. ದಿನೇಶ್ ಜೋಶಿ ಎಂಬುವವರು ಈ ಆಟೋದಲ್ಲಿ ಸಂಚರಿಸಿದ ಗ್ರಾಹಕ 100% ತೃಪ್ತಿ ಹೊಂದುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + four =
Remember me
