ಚಂಡೀಗಢ:ಕಳೆದ ಆಗಸ್ಟ್​ನಲ್ಲಿ ಹರಿಯಾಣದ ನುಹ್​ ಪಟ್ಟಣದಲ್ಲಿ ಭುಗಿಲೆದ್ದಿದ್ದ ಕೋಮುಗಲಭೆಯ ಹಿಂದೆ ಅಲ್ಲಿನ ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ ಕೈವಾಡ ಇರುವುದು ಬಹಿರಂಗವಾದ ಬೆನ್ನಲ್ಲೇ ಅವರನ್ನು ಗುರುವಾರ (ಸೆ.14) ಬಂಧಿಸಲಾಗಿದೆ.
ಗಲಭೆಯಲ್ಲಿ ಮಾಮ್ಮನ್​ ಖಾನ್​ ಕೈವಾಡ ಇರುವ ಸಂಬಂಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ಹರಿಯಾಣ ಪೊಲೀಸರ ಹೇಳಿದ್ದಾರೆ. ಫಿರೋಜ್‌ಪುರ್​ ಜಿರ್ಕಾ ಕ್ಷೇತ್ರದ ಶಾಸಕರಾಗಿರುವ ಮಾಮ್ಮನ್​ ಖಾನ್​, ಮಂಗಳವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಬಂಧನದಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು ಮತ್ತು ಅದರ ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ನಿಗದಿಪಡಿಸಲಾಗಿತ್ತು.
ಹಿಂಸಾಚಾರ ನಡೆದ ದಿನ ನಾನು ನುಹ್​ವಿನಲ್ಲಿ ಇರಲಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗುತ್ತಿದೆ ಎಂದು ಮಾಮ್ಮನ್​ ವಾದಿಸಿದ್ದಾರೆ. ಆದಾಗ್ಯೂ, ಸಾಕ್ಷ್ಯಾಧಾರಗಳ ಸರಿಯಾದ ಮೌಲ್ಯಮಾಪನದ ಬಳಿಕ ಕಾಂಗ್ರೆಸ್ ನಾಯಕನನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಹರಿಯಾಣ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಬೇಕಾದಂತಹ ಫೋನ್ ಕರೆ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ಹೊಂದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಲೋಡ್​ಶೆಡ್ಡಿಂಗ್​, ಅವೈಜ್ಞಾನಿಕ ಪರಿಹಾರ ಅಧಿಕಾರಿಗಳನ್ನು ನಯವಾಗಿ ಬೆಂಡೆತ್ತಿದ ರೈತರು
ಬಂಧಿತ ಮಾಮ್ಮನ್​ ಅವರನ್ನು ಶುಕ್ರವಾರ (ಸೆ.15) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ತನಿಖಾ ತಂಡದ ಮುಂದೆ ಹಾಜರಾಗುವಂತೆ ಹೇಳಿ ಈ ಹಿಂದೆ ಮಾಮ್ಮನ್​ಗೆ ನುಹ್​ ಪೊಲೀಸರು ಎರಡು ಬಾರಿ ಸಮನ್ಸ್​ ನೀಡಿದ್ದರು. ಆದರೆ, ಪೊಲೀಸರ ಸಮನ್ಸ್‌ಗೆ ಕ್ಯಾರೆ ಎನ್ನದ ಮಾಮ್ಮನ್​, ವೈರಲ್ ಫೀವರ್ ಕಾರಣ ನೀಡಿ ವಿಚಾರಣೆ ತಪ್ಪಿಸಿಕೊಂಡಿದ್ದರು.
ಎಫ್‌ಐಆರ್‌ನಲ್ಲಿ ಮಾಮ್ಮನ್​ ಹೆಸರನ್ನು ಆರೋಪಿಯನ್ನಾಗಿ ಸೇರಿಸಿರುವ ಬಗ್ಗೆ ಅವರಿಗೆ ಗುರುವಾರವಷ್ಟೇ ತಿಳಿಯಿತು ಎಂದು ಶಾಸಕರ ಪರ ವಕೀಲರು ತಿಳಿಸಿದ್ದಾರೆ. ಮಾಮ್ಮನ್​ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಹರಿಯಾಣ ಸರ್ಕಾರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ನಿರ್ದೇಶನ ನೀಡುವಂತೆ ಕೋರಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಿ, ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ಮಾಡುವಂತೆ ಮನವಿ ಮಾಡಿದ್ದರು. ಕೋರ್ಟ್​ನಲ್ಲಿ ವಿಚಾರಣೆಗೂ ಮುನ್ನವೇ ಅವರನ್ನು ಬಂಧಿಸಲಾಗಿದೆ.
ಹರಿಯಾಣದ ನುಹ್‌ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಕೆಲ ಗುಂಪಿನ ಜನರು ವಿಶ್ವ ಹಿಂದು ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಹಿಂಸಾಚಾರ ಮೊದಲು ಭುಗಿಲೆದ್ದಿತು. ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದರಿಂದ ಕಲ್ಲು ತೂರಾಟ ನಡೆಸಿಕಾರುಗಳಿಗೆಬೆಂಕಿ ಹಚ್ಚಲಾಯಿತು. ಈ ಗಲಭೆ ಹಲವು ದಿನಗಳವರೆಗೆ ಮುಂದುವರಿಯಿತು. ಸಾವು-ನೋವು ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಯಿತು.(ಏಜೆನ್ಸೀಸ್​)
ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವ ಯೋಜನೆ ಪ್ರಾರಂಭಿಸಿದ ತಮಿಳುನಾಡು ಸರ್ಕಾರ

‘ಬೇಬಿ’ಗೆ ಸಂಕಷ್ಟ!; ನಿರ್ಮಾಪಕರಿಗೆ ನೋಟಿಸ್ ಜಾರಿಗೊಳಿಸಿದ ಹೈದರಾಬಾದ್ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
