ಚಂಡೀಗಢ:ಕೋವಾಕ್ಸಿನ್​​ ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್ ಅವರಿಗೆ ಕೋವಿಡ್​-19 ಪಾಸಿಟಿವ್​ ವರದಿಯಾಗಿದೆ.​​ ನವೆಂಬರ್​ 20ರಂದು ವಿಜ್​ ಅವರು ಕರೊನಾ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು.
ಶನಿವಾರ ಟ್ವೀಟ್​ ಮೂಲಕ ಕೋವಿಡ್​ ಪಾಸಿಟಿವ್​ ಆಗಿರುವುದನ್ನು ವಿಜ್​ ಅವರು ಖಚಿತಪಡಿಸಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಸಚಿವರು ಅಂಬಾಲದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
I have been tested Corona positive. I am admitted in Civil Hospital Ambala Cantt. All those who have come in close contact to me are advised to get themselves tested for corona.
— ANIL VIJ MINISTER HARYANA (@anilvijminister)December 5, 2020

ಇದನ್ನೂ ಓದಿ:ಯಾರು ಬೇಕಾದ್ರೂ ಪಕ್ಷ ಬಿಟ್ಟು ತೊಲಗಿ- ಹೋಗುವಾಗ ನನ್ನ ಸಾವಿಗೆ ಪ್ರಾರ್ಥಿಸಿ ಎಂದ ಮಮತಾ!
ಇದೇ ಆಸ್ಪತ್ರೆಯಲ್ಲಿ ವಿಜ್​ ಅವರು ನವೆಂಬರ್​ 20ರಂದು ಕೋವಾಕ್ಸಿನ್​ ಹೆಸರಿನ ಕೋವಿಡ್​ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ವಿಜ್​ ಅವರು ಸಂಭವನೀಯ ಕರೊನಾ ಲಸಿಕೆ ಕೋವಾಕ್ಸಿನ್​ನ ಮೂರನೇ ಹಂತದ ಪ್ರಯೋಗದ ಮೊದಲ ಸ್ವಯಂಸೇವಕರಾಗಲು ಮುಂದಾಗಿದ್ದರು.
#WATCHHaryana Health Minister Anil Vij being administered a trial dose of#Covaxin, at a hospital in Ambala.
He had offered to be the first volunteer for the third phase trial of Covaxin, which started in the state today.pic.twitter.com/xKuXWLeFAB
— ANI (@ANI)November 20, 2020

​ಕರೊನಾ ವಿರುದ್ಧ ಕೋವಾಕ್ಸಿನ್​ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ ಎಂದು ಹೇಳಲಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್​ ಬಯೋಟೆಕ್​ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ.
ಕೋವಾಕ್ಸಿನ್​ ಲಸಿಕೆಯ ಮೊದಲೆರಡು ಹಂತದ ಮಧ್ಯಂತರ ವಿಶ್ಲೇಷಣೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಮೂರನೇ ಹಂತದ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಲಸಿಕಾ ತಯಾರಕರು ಈ ಮುಂಚೆಯೇ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eighteen =
Remember me
