ಹರಿಯಾಣ:ಒಲಿಂಪಿಯನ್ ಮಹಿಳಾ ಕುಸ್ತಿಪಟುವಿನ ಫೋಟೋ ಮಾರ್ಫ್ ಮಾಡಿದ ವ್ಯಕ್ತಿಯೊಬ್ಬ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಇದೀಗ ಹರಿಯಾಣ ಪೊಲೀಸರು ಆತನನ್ನು ಸೋಮವಾರ ಬಂಧಿಸಿದ್ದಾರೆ.
ಇದನ್ನೂ ಓದಿ:ಗಣೇಶ ಹಬ್ಬದಂದು ದುಬಾರಿಯಾದ ಚಿನ್ನಾಭರಣ ಬೆಲೆ; ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ…
ಆರೋಪಿ ಪ್ರಸಾರ ಮಾಡಿದ್ದ 30 ಸೆಕೆಂಡ್‌ಗಳ ತುಣುಕಿಗೂ ಮಹಿಳಾ ಕುಸ್ತಿಪಟುವಿಗೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕುಸ್ತಿಪಟುವಿನ ತಂದೆ ಜಿಂದ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಹರಿಯಾಣ ಪೊಲೀಸರು ಹಿಸಾರ್ ಜಿಲ್ಲೆಯ ಆರೋಪಿ ಅಮಿತ್​ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
30 ಸೆಕೆಂಡ್‌ಗಳ ವಿಡಿಯೋದಲ್ಲಿ ಆರೋಪಿಯು ಕುಸ್ತಿಪಟುವಿನ ಮಾರ್ಫ್ ಮಾಡಿದ ಫೋಟೋವನ್ನು ಬಳಸಿದ್ದಾನೆ. ವಿಡಿಯೋ ಕ್ಲಿಪ್ ಓರ್ವ ಪುರುಷ ಮತ್ತು ಮಹಿಳೆಯದ್ದಾಗಿದೆ. ಆ ವಿಡಿಯೋದಲ್ಲಿನ ವ್ಯಕ್ತಿ ತಾನು ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಇರುವುದನ್ನು ಖಚಿತಪಡಿಸಿದ್ದಾನೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬದುಕು ಬದಲಿಸಿದ ಪಂಚಾಕ್ಷರ ಗವಾಯಿ ಸಿನಿಮಾ -ನಾದಬ್ರಹ್ಮ ಡಾ.ಹಂಸಲೇಖ ಹೇಳಿಕೆ – ಪುಟ್ಟರಾಜ ಪುರಸ್ಕಾರ ಪ್ರಶಸ್ತಿ ಪ್ರದಾನ
ಆರೋಪಿಯ ಉದ್ದೇಶವೇನು ಎಂಬುದನ್ನು ತಿಳಿಯಲು ಮಂಗಳವಾರ ನ್ಯಾಯಾಲಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ,(ಏಜೆನ್ಸೀಸ್).
26 ಬೆರಳುಗಳಿಂದ ಜನಿಸಿದ ಮಗು! ದೇವರ ಅವತಾರವೆಂದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
