ನವದೆಹಲಿ:ತನ್ನೊಂದಿಗೆ ಬೈಕ್​ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಬೈಕ್​ ಸವಾರನೊಬ್ಬ ಹೆಲ್ಮೆಟ್​ನಿಂದ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಕಮಲ್​ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆ ಮತ್ತು ಆರೋಪಿ ಇಬ್ಬರು ಅಕ್ಕಪಕ್ಕದ ಮನೆಯ ನಿವಾಸಿಗಳು. ಬೈಕ್​ನಲ್ಲಿ ತನ್ನೊಂದಿಗೆ ಬರಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಗುರುಗ್ರಾಮದ ಎಸಿಪಿ ಮನೋಜ್​ ಕೆ. ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ ಮುಂದೆ ಬೈಕ್​ ನಿಲ್ಲಿಸಿಕೊಂಡಿರುವ ಆರೋಪಿ, ಮಹಿಳೆಯ ಜತೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಳ್ಮೆ ಕಳೆದುಕೊಳ್ಳುವ ಆರೋಪಿ ಕಮಲ್​, ಮಹಿಳೆಯ ಮೇಲೆ ಹೆಲ್ಮೆಟ್​ನಿಂದ ದಾಳಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಟೋ ಚಾಲಕ ಮಧ್ಯಪ್ರವೇಶಿಸಿದಾಗ ತನ್ನ ಹ್ಯಾಂಡ್​ ಬ್ಯಾಗ್​ನಿಂದ ಮಹಿಳೆ ಆರೋಪಿ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದ್ದಾಳೆ. ಬಳಿಕ ಅಲ್ಲಿಯೇ ಇದ್ದ ಮಹಿಳೆಯರು ಮಧ್ಯಪ್ರವೇಶಿಸಿ ಜಗಳನ್ನು ಬಿಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಿ ಕಮಲ್​ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸಿಪಿ ಮನೋಜ್‌ ಕೆ. ಮಾಹಿತಿ ನೀಡಿದರು.(ಏಜೆನ್ಸೀಸ್​)
#WATCH| Haryana: CCTV footage of a man named Kamal hitting a woman with his helmet after she refused to ride on his bike.pic.twitter.com/Az3MWRKKWo
— ANI (@ANI)January 6, 2023

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಹಿಂದುಪರ ಸಂಘಟನೆಗಳು ಪಟ್ಟು

ಇದು ವಿಶ್ವದ ಶ್ರೀಮಂತ ಬೆಕ್ಕು! ಇದರ ಒಟ್ಟು ಆಸ್ತಿಯ ಮೌಲ್ಯ ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ

ಆಟೋಗೆ ಡಿಕ್ಕಿ ಹೊಡೆದು ಕಾರು ಚಾಲಕ ಎಸ್ಕೇಪ್: ಮಹಿಳೆಯರಿಬ್ಬರ ದುರ್ಮರಣ, ಕೆ.ಆರ್​.ಪುರಂನಲ್ಲಿ ದುರ್ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − six =
Remember me
