ನವದೆಹಲಿ:ಒಂದೇ ದಿನ ಈವರೆಗಿನ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮತ್ತೆ ಲಾಕ್​​ಡೌನ್​ ಮೋಡ್​ಗೆ ಮರಳಿದೆ ಈ ರಾಜ್ಯ. ಶನಿವಾರ ಹಾಗೂ ಭಾನುವಾರಗಳಂದು ಎಲ್ಲ ಕಚೇರಿ ಹಾಗೂ ಅಂಗಡಿಗಳ ಬಂದ್​ಗೆ ಆದೇಶಿಸಿದೆ. ಅಗತ್ಯ ವಸ್ತು ಮಾರಾಟ ಹಾಗೂ ಸೇವೆಗಳಿಗೆ ಇದರಿಮದ ವಿನಾಯ್ತಿ ನೀಡಲಾಗಿದೆ.
ಈ ಆದೇಶ ಜಾರಿಗೊಳಿಸಿರುವುದು ಹರಿಯಾಣಾ ರಾಜ್ಯ. ಶುಕ್ರವಾರ ಒಂದೇ ದಿನ 996 ಕೋವಿಡ್​ ಪ್ರಕರಣಗಳು ಇಲ್ಲಿ ವರದಿಯಾಗಿವೆ. ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಇದಾಗಿದೆ. ಕೋವಿಡ್​ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಅನಿಲ್​ ವಿಜ್​ ತಿಳಿಸಿದ್ದಾರೆ.
ಇದನ್ನೂ ಓದಿ;ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!
ಹರಿಯಾಣದಲ್ಲಿ ಒಟ್ಟಾರೆ ಕೋವಿಡ್​ ರೋಗಿಗಳ ಸಂಖ್ಯೆ 50,926ಕ್ಕೆ ತಲುಪಿದೆ. 578 ಜನರು ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಬುಧವಾರ 994, ಮಂಗಳವಾರ-896 ಹಾಗೂ ಸೋಮವಾರ 887 ಪ್ರಕರಣಗಳು ಪತ್ತೆಯಾಗಿದ್ದವು.
ಒಟ್ಟಾರೆ ರೋಗಿಗಳಲ್ಲಿ 42,793 ಜನರು ಕೋವಿಡ್​ನಿಮದ ಚೇತರಿಕೆ ಕಂಡಿದ್ದು, ಸದ್ಯ ರಾಜ್ಯದಲ್ಲಿ 7,555 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಇಲ್ಲಿ ಚೇತರಿಕೆಯ ಪ್ರಮಾಣ ಶೇ.84 ಆಗಿದ್ದರೆ, ಕೋವಿಡ್​ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಸಮಯ 33 ದಿನಗಳಾಗಿವೆ.
ಇದನ್ನೂ ಓದಿ;ಕೋವಿಡ್​ನಿಂದ ಮೃತಪಟ್ಟ ಪೌರ ಕಾರ್ಮಿಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ…!
ಪಂಜಾಬ್​ನಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಹರಿಯಾಣದಲ್ಲೂ ಈ ಕ್ರಮಕೈಗೊಳ್ಳಲಾಗುತ್ತಿದೆ. ಪಂಜಾಬ್​ನಲ್ಲಿ ರಾತ್ರಿ ಕರ್ಫ್ಯೂ, ವಿಕೇಂಡ್​ ಲಾಕ್​ಡೌನ್​ ಜಾರಿಯಲ್ಲಿದೆ. ಮದುವೆ ಹಾಗೂ ಅಂತ್ರಕ್ರಿಯೆ ಹೊರತುಪಡಿಸಿ ಬೇರೆಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
https://www.vijayavani.net/ec-issues-guidelines-for-conduct-of-elections-during-covid-19/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
