ನುಹ್:ಹುಡುಗಿಯ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಖಾತೆಯನ್ನು ರಚಿಸಿ, ವಿಡಿಯೋ ಕಾಲ್‌ ಮೂಲಕ ಸೆಕ್ಸ್ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಆ ಬಳಿಕ ಜನರನ್ನು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೋಲಿಸರು ಬಂಧಿಸಿರುವ ಘಟನೆ ​ ಹರ್ಯಾಣದ ನುಹ್​ ಜಿಲ್ಲೆಯ ಬಿಚೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಸಾಹಿದ್ ಎಂದು ಗುರುತಿಸಲಾಗಿದ್ದು, ಈತನಿಂದ ಎರಡು ಮೊಬೈಲ್ ಫೋನ್‌ಗಳು, ಮೂರು ನಕಲಿ ಸಿಮ್ ಕಾರ್ಡ್‌ಗಳು, ಅಶ್ಲೀಲ ವೀಡಿಯೊ​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಂಗಾರ್ ಬಸ್ ನಿಲ್ದಾಣದಲ್ಲಿ ಪೊಲೀಸ್ ತಂಡ ಗಸ್ತಿನಲ್ಲಿದ್ದ ವೇಳೆ ಆರೋಪಿಯು ಯಾರಿಗೋ ವಂಚಿಸುವ ಉದ್ದೇಶದಿಂದ ತಿರವಾಡದಿಂದ ಸಿಂಗಾರ ಗ್ರಾಮಕ್ಕೆ ಬರುತ್ತಿದ್ದ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಡ್ರಂಕ್ ಅಂಡ್ ಡ್ರೈವ್: ಪೊಲೀಸರ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ವ್ಯಕ್ತಿ..!
ಇಡೀ ಜಾಲವನ್ನು ಬಯಲಿಗೆಳೆಯಲು ಪೊಲೀಸರು ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆಡಿಯೋ ಕರೆಗಳ ಮೂಲಕ ಜನರಿಗೆ ಹುಡುಗಿಯರ ಅಶ್ಲೀಲ ವೀಡಿಯೋಗಳನ್ನು ತೋರಿಸಿ, ನಕಲಿ ನಗ್ನ ವೀಡಿಯೋ ಮಾಡಿ ತನ್ನ ಸ್ನೇಹಿತ ಅಬಿದ್​ ಎಂಬಾತನಿಗೆ ಕಳುಹಿಸುತ್ತಿದ್ದ. ನಂತರ ಅಬಿದ್ ಡಿಎಸ್ಪಿ ಕ್ರೈಮ್ ಎಂದು ನಕಲಿ ಅಧಿಕಾರಿ ವೇಷದಲ್ಲಿ ಸಂತ್ರಸ್ತರ ಮೂಲಕ ತನ್ನ ನಕಲಿ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವಂತೆ ಒತ್ತಾಯಿಸುತ್ತಿದ್ದ. ಆ ಬಳಿಕ ಇಬ್ಬರೂ ಹಣವನ್ನು ಹಂಚಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಆರೋಪಿಗೆ ನಕಲಿ ಸಿಮ್‌ ಕಾರ್ಡ್‌, ಬ್ಯಾಂಕ್‌ ಖಾತೆ ನೀಡಿದವರು ಯಾರು ಎಂಬ ಬಗ್ಗೆಯೂ ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ಆರೋಪಿ ಗ್ಯಾಂಗ್‌ನ ಇತರ ಸದಸ್ಯರ ಬಗ್ಗೆಯೂ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.(ಏಜೆನ್ಸೀಸ್)
ಪತ್ನಿ, ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ 2ನೇ ಅಂತಸ್ತಿನಿಂದ ಜಿಗಿದ ಭೂಪ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + six =
Remember me
