ರೋಹ್ಟಕ್‌:ಕುಂಬಳಕಾಯಿಯಿಂದ ತಯಾರಸಿದ ಖಾದ್ಯ ತಿಂದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ರೋಹ್ಟಕ್​ ಬಳಿಯ ಬಲಾಂದ್​ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದಿವ್ಯಾ(7) ಇಯಾಂಶು (2) ಮತ್ತು ಲಕ್ಷಿತಾ (8) ಎಂದು ಗುರುತಿಸಲಾಗಿದ್ದು, ಗಣಿಕಾ (10) ಸ್ಥಿತಿ ಚಿಂತಾಜನಕವಾಗಿದೆ. ಕುಟುಂಬದ ಇತರ ಸದಸ್ಯರಾದ ರಾಕೇಶ್ ಮತ್ತು ಆತನ ಪತ್ನಿ ಮೋನಿಕಾ, ರಾಜೇಶ್ ಮತ್ತು ಆತನ ಪತ್ನಿ ಸೀಮಾ, ಹಿರಿಯ ಮಗ ಜತಿನ್ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಮಲಗಿದ್ದ ನಾಯಿಯ ಮೇಲೆ ಆ್ಯಸಿಡ್​ ಸುರಿದ ಮಹಿಳೆ: ಕ್ಷುಲ್ಲಕ ಕಾರಣಕ್ಕೆ ಮೂಕ ಪ್ರಾಣಿಯ ಮೇಲೆ ದರ್ಪ..
ಆಗಸ್ಟ್ 15ರ ರಾತ್ರಿ ಮನೆಯಲ್ಲಿ ಪೇಠೆ ಕಿ ಸಬ್ಜಿ ಅಂದರೆ ಕುಂಬಳಕಾಯಿ ಖಾದ್ಯ ತಯಾರಿಸಿ, ತಿಂದು ಮಲಗಿದ್ದರು. ತಡರಾತ್ರಿ ಒಂದೇ ಕುಟುಂಬದ ಒಂಬತ್ತು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋಗಿದ್ದರು. ಈ ವೇಳೆ ವೈದ್ಯರು ಔಷಧಿ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ, ಮನೆಗೆ ಬಂದ ಮೇಲೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಾಗಿದ್ದಾರೆ. ಈ ವೇಳೆ ಚಿಕಿತ್ಸೆಗೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಬಗ್ಗೆ ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಕುಟುಂಬದ ಸದಸ್ಯರ ದೂರು, ಆಹಾರದ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಶಿವಾಜಿ ಕಾಲೋನಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
