ಚಂಡಿಗರ್: ತನ್ನ ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಶೇ 75 ರಷ್ಟನ್ನು ತನ್ನ ರಾಜ್ಯದವರಿಗೇ ಮೀಸಲಿಡಬೇಕು ಎಂಬ ಮಸೂದೆಗೆ ಹರ್ಯಾಣ ರಾಜ್ಯಪಾಲರು ಇಂದು ಅಂಕಿತ ಹಾಕಿದ್ದಾರೆ.
ಈ ವಿಷಯವನ್ನು ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರು ತಿಳಿಸಿದ್ದಾರೆ. ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲು ನೀಡಬೇಕು ಎಂಬ ಮಸೂದೆ ಕಳೆದ ವರ್ಷ ಹರ್ಯಾಣ ವಿಧಾನಸಭೆಯಲ್ಲಿ ಪಾಸಾಗಿತ್ತು.ಈ ದಿನ ನಮ್ಮ ರಾಜ್ಯದ ಯುವಕರಿಗೆ ಸುವರ್ಣ ದಿನ. ಖಾಸಗಿ ಉದ್ಯೋಗಗಳಲ್ಲಿ ನಮ್ಮ ಯುವಕರು ಶೇ 75 ರಷ್ಟು ಮೀಸಲು ಪಡೆಯಲಿದ್ದಾರೆ. ಎಲ್ಲ ಖಾಸಗಿ ಕಂಪನಿ, ಸೊಸೈಟಿ ಹಾಗೂ ಟ್ರಸ್ಟ್​​ಗಳಲ್ಲಿ ನಮ್ಮ ಯುವಕರು ಉದ್ಯೋಗ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
50,000 ರೂಪಾಯಿ ಸಂಬಳದವರೆಗಿನ ಕೆಲಸಗಳಿಗೆ ಇದು ಅನ್ವಯಿಸುತ್ತದೆ. ಒಂದು ವೇಳೆ ಕಂಪನಿಗಳು ಸೂಚಿಸಿದ ಕೆಲಸಗಳಿಗೆ ಸ್ಥಳೀಯರು ಸಿಗದಿದ್ದರೇ ಹೊರಗಿನವರಿಗೆ ಮಾತ್ರ ಅವಕಾಶ ಕೊಡಬೇಕಾಗುತ್ತದೆ ಎಂದು ಈ ಕಾನೂನು ಹೇಳುತ್ತದೆ. ಹರ್ಯಾಣದಲ್ಲಿ ಪ್ರಸ್ತುತ ಬಿಜೆಪಿ ಹಾಗೂ ಜೆಜೆಪಿ ಪಕ್ಷಗಳ ಸರ್ಕಾರ ಅಸ್ತಿತ್ವದಲ್ಲಿದೆ. ದುಷ್ಯಂತ್ ಅವರು ಚುನಾವಣಾ ಪೂರ್ವ ಮಾತು ಕೊಟ್ಟಂತೆ ಇದೀಗ ನಡೆದುಕೊಂಡಿದ್ದಾರೆ.
ಸೆಕ್ಸ್ ಸಿಡಿ ಬಹಿರಂಗ: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 9 =
Remember me
