ಪಾಣಿಪತ್​:ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯೊಂದಿಗೇ ಓಡಿ ಹೋಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಕರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿರುವ ಈ ಸಮಯದಲ್ಲಿ ಅವರಿಬ್ಬರು ಒಟ್ಟಿಗೆ ನಾಲ್ಕು ಗಂಟೆಗಳ ಕಾಲ ಒಂದೇ ಮನೆಯಲ್ಲಿರುತ್ತಿದ್ದರು ಎನ್ನಲಾಗಿದೆ.
ಆಕೆ ಖಾಸಗಿ ಕಾಲೇಜೊಂದರ ಶಿಕ್ಷಕಿ. ಕಳೆದ ಎರಡು ವರ್ಷದಿಂದ ಆ ಬಾಲಕನಿಗೆ ಟ್ಯೂಷನ್​ ಹೇಳಿಕೊಡುತ್ತಿದ್ದಳು. ಮೊದಲೆಲ್ಲ ಒಂದೆರೆಡು ಗಂಟೆ ನಡೆಯುತ್ತಿದ್ದ ಟ್ಯೂಷನ್​, ಕರೊನಾ ಬಂದ ನಂತರ ನಾಲ್ಕು ತಾಸುಗಳಾಗಿ ಬದಲಾಗಿದೆ. ಇದೀಗ 11ನೇ ತರಗತಿಯಲ್ಲಿದ್ದ 17 ವರ್ಷದ ಬಾಲಕ ಹಾಗೂ ಟ್ಯೂಷನ್​ ಹೇಳಿಕೊಡುತ್ತಿದ್ದ ಟೀಚರ್​ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಇದೀಗ ಕಾಣೆಯಾಗಿದ್ದಾರೆ.
ಮೇ 29ರಂದು ಮಧ್ಯಾಹ್ನ 2 ಗಂಟೆಗೆ ಟೀಚರ್​ ಮನೆಗೆ ಹೋದ ಮಗ ನಂತರ ಮನೆಗೆ ವಾಪಸು ಬಂದಿಲ್ಲ ಎಂದು ಕಾಣೆಯಾಗಿರುವ ಬಾಲಕನ ತಂದೆ ದೂರು ನೀಡಿದ್ದಾರೆ. ಈ ಕುರಿತಾಗಿ ಮೊದಲಿಗೆ ಟೀಚರ್​ ಮನೆಯವರು ಏನೂ ಸ್ಪಂದಿಸಿಲ್ಲವಾದರೂ ಕೆಲ ಗಂಟೆಗಳ ನಂತರ ತಮ್ಮ ಮಗಳೂ ಮನೆಯಲ್ಲಿ ಕಾಣುತ್ತಿಲ್ಲ ಎಂದು ನಿಜ ಬಾಯಿಬಿಟ್ಟಿದ್ದಾರೆ. ಆ ಟೀಚರ್​ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವೂ ಆಗಿದ್ದಾರೆ ಹೇಳಲಾಗಿದೆ. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)
ಶಾಲೆಗೆ ಸ್ಕರ್ಟ್ ಧರಿಸಿ ಬರಲಾರಂಭಿಸಿದ ಪುರುಷ ಶಿಕ್ಷಕರು! ಅಷ್ಟಕ್ಕೂ ಕಾರಣವೇನು ಗೊತ್ತಾ?

ಪ್ರೇಯಸಿ ಭೇಟಿಯ ಯತ್ನದಲ್ಲಿ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಹೈದರಾಬಾದ್​ ಯುವಕನ ಬಿಡುಗಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
