ಹರಿಯಾಣ:ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್​ ರ್‍ಯಾಲಿ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಗಲಭೆಯ ಪ್ರಮುಖ ಆರೋಪಿ ಸ್ವಯಂಘೋಷಿತ ಗೋರಕ್ಷಕ, ಬಜರಂಗದಳ ಸದಸ್ಯ ರಾಜ್​ಕುಮಾರ್​ ಅಲಿಯಾಸ್​ ಬಿಟ್ಟು ಭಜರಂಗಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಹಿಂಸಾಚಾರ ನಡೆದ 20 ದಿನಗಳ ಬಳಿಕ ಪೊಲೀಸರು ಪ್ರಕರಣದ ಮಾಸ್ಟರ್​ಮೈಂಡ್​ನನ್ನು ಬಂಧಿಸಿದ್ದು, ಆರೋಪಿಯನ್ನು ಆತನ ಮನೆ ಬಳಿ ಪೊಲೀಸರು ವಶಕ್ಕೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೃತ್ತಿಯಲ್ಲಿ ಹಣ್ಣು-ತರಕಾರಿ ವ್ಯಾಪಾರಿಯಾಗಿರುವ ಬಿಟ್ಟು ಬಜರಂಗದಳದ ಸದಸ್ಯನಾಗಿದ್ದು, ಕಳೆದ ಮೂರು ವರ್ಷಗಳಿಂದ ಗೋರಕ್ಷಾ ಬಜರಂಗದಳ ಎಂಬ ಸಂಘಟನೆಯನ್ನು ಸಹ ನಡೆಸುತ್ತಿದ್ದಾನೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕಳೆದ ತಿಂಗಳು ಈತನ ವಿರುದ್ಧ ಹರಿಯಾಣದ ಫರಿದಾಬಾದ್​ನಲ್ಲಿ ಪ್ರಕರಣ ದಾಖಲಾಗಿತ್ತು.
#BajrangDalLeader#BittuBajrangi. has been arrested by the#HaryanaPolice#Haryana#HaryanaViolence#NuhViolence#Mewat@BajrangDalOrg@VHPDigitalpic.twitter.com/ZBsG7JI5Wx
ಇದನ್ನೂ ಓದಿ:ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಕುವೈತ್​ಗೆ ಹಾರಿದ ವಿವಾಹಿತೆ
ಈತನ ವಿರುದ್ಧ ಈಗಾಗಲೇ ಗಲಭೆ, ಹಿಂಸಾಚಾರ, ಬೆದರಿಕೆ, ಸರ್ಕಾರಿ ಅಧಿಕಾರಿಗಳ ಕತ್ಯವ್ಯಕ್ಕೆ ಅಡ್ಡಿಪಡಿಸುವುದು, ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ನುಹ್​ನಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮಾರಿಸಿಕೊಂಡಿದ್ದ.
ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸ್​ ಇಲಾಖೆ ಘಟನೆ ನಡೆದ 20 ದಿನಗಳ ಬಳಿಕ ಬಂಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪೊಲೀಸರನ್ನೂ ನೋಡುತ್ತಿದ್ದಂತೆ ಆರೋಪಿ ಓಡಿ ಹೋಗುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಅಧಿಕಾರಿಗಳ ತಂಡ ಆತನ ಬೆನ್ನಟ್ಟಿದ್ದು, ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
