ಹರಿಯಾಣ:ಪಂಜಾಬ್​ನಲ್ಲಿ ಖಾಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ವಾರಿಸ್​ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್​​ ಪಾಲ್​ ಸಿಂಗ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಆರೋಪಿಯು ಹರಿಯಾಣದ ಕುರುಕ್ಷೇತ್ರದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಮುಂದಾದಾಗ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಅಮೃತ್​ಪಾಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಕುರುಕ್ಷೇತ್ರದ ಶಹಬಾದ್​ನಲ್ಲಿ ಮಹಿಳೆ ಹಾಗೂ ಲುಧಿಯಾನದಲ್ಲಿ ಓರ್ವ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಲ್ಜಿತ್​ ಕೌರ್​, ತೇಜೇಂದರ್​​​​ ಸಿಂಗ್​ ಗಿಲ್​​​ ಎಂದು ಗುರುತಿಸಲಾಗಿದೆ.
Woman nabbed for harbouring radical preacher Amritpal Singh in Haryana's Shahabad: Police

ಬಂಧಿತ ಮಹಿಳೆಯನ್ನ ಪಂಜಾಬ್​ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದ್ದು ಆರೋಪಿಯೂ ಅಮೃತ್​ಪಾಲ್​ ಸಿಂಗ್​ಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು ಎಂದು ಕುರುಕ್ಷೇತ್ರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುರಿಂದರ್​ ಸಿಂಗ್ ಬೋರಿಯಾ ತಿಳಿಸಿದ್ದಾರೆ.
ಅಮೃತ್​​ಪಾಲ್​ಗೆ ಭದ್ರತೆ ಒದಗಿಸುತ್ತಿದ್ದ ಆರೋಪದ ಮೇಲೆ ಲುಧಿಯಾನ ಮೂಲದ ತೇಜೇಂದರ್​ ಸಿಂಗ್​ ಗಿಲ್​ನನ್ನ ಬಂಧಿಸಿರುವುದಾಗಿ ಪಂಜಾಬ್​ ಪೊಲೀಸರು ಮಾಹಿತಿ ನೀಡಿದ್ದಾರೆ.
VIDEO | Amritsar court sends 11 aides of Amritpal Singh to judicial remand for 14 days.pic.twitter.com/Fmq1Wwer0X
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 5 =
Remember me
