ನವದೆಹಲಿ:ಕೆಲವು ಕೈಗಾರಿಕೋದ್ಯಮಿಗಳಿಗೆ ಒಲವು ತೋರುತ್ತಿದ್ದಾರೆ ಎಂದು ತಮ್ಮ ವಿರುದ್ಧ ಇದುವರೆಗೂ ಆರೋಪಿಸುತ್ತ ಬಂದಿರುವ ಕಾಂಗ್ರೆಸ್​ ವಿರುದ್ಧವೇ ಅದೇ ಅಸ್ತ್ರವನ್ನು ತಿರುಮಂತ್ರವಾಗಿ ಪ್ರಧಾನಿ ನರೇಂದ್ರ ಮೋದಿ ಬಳಸಿದ್ದಾರೆ. ಕಾಂಗ್ರೆಸ್ ಪಕ್ಷವು ಅಂಬಾನಿ-ಅದಾನಿ ಜೊತೆ ಒಪ್ಪಂದ ಮಾಡಿಕೊಂಡಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರಶ್ನಿಸಿದ್ದಾರೆ.
ತೆಲಂಗಾಣದ ವೇಮುಲವಾಡದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಚುನಾವಣೆ ಘೋಷಣೆಯಾದಾಗಿನಿಂದ ಈ ಜನರು (ಕಾಂಗ್ರೆಸ್ ಪಕ್ಷದವರು) ಅಂಬಾನಿ-ಅದಾನಿಯನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ, ನಾನು ತೆಲಂಗಾಣ ನೆಲದಿಂದ ಕೇಳಲು ಬಯಸುತ್ತೇನೆ, ಶೆಹಜಾದಾ (ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ) ಘೋಷಿಸಲಿ. ಅಂಬಾನಿ-ಅದಾನಿಯಿಂದ ಎಷ್ಟು ಟೆಂಪೋ ಲೋಡ್‌ಗಳು (ಕರೆನ್ಸಿ) ಕಾಂಗ್ರೆಸ್‌ಗೆ ತಲುಪಿದೆ. ರಾತ್ರೋರಾತ್ರಿ ಅಂಬಾನಿ-ಅದಾನಿ ನಿಂದಿಸುವುದನ್ನು ನಿಲ್ಲಿಸಲು ಯಾವ ಒಪ್ಪಂದವಾಗಿದೆ?” ಎಂದು ಪ್ರಶ್ನಿಸಿದರು.
“ನಿಸ್ಸಂಶಯವಾಗಿ ಏನೋ ಸಂಶಯ ಮೂಡುವಂತಹುದು ಆಗಿದೆ. ಐದು ವರ್ಷಗಳ ಕಾಲ, (ಅವರು) ಅದಾನಿ-ಅಂಬಾನಿಯನ್ನು ನಿಂದಿಸಿದ್ದು. ಈಗ ಇದು ರಾತ್ರೋರಾತ್ರಿ ನಿಂತುಹೋಗಿದೆ. ಇದರರ್ಥ ನೀವು ಕೆಲವು ಟೆಂಪೋ ಲೋಡ್ ‘ಚೋರಿ ಕಾ ಮಾಲ್’ (ಲೂಟಿ) ಪಡೆದಿದ್ದೀರಿ ಎಂದರ್ಥ. ನೀವು ರಾಷ್ಟ್ರಕ್ಕೆ ಉತ್ತರಿಸಬೇಕು,” ಎಂದು ಪ್ರಧಾನಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಅವರು ತಮ್ಮ ಸ್ನೇಹಿತರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
“ಕಾಲ ಬದಲಾಗುತ್ತಿದೆ. ಸ್ನೇಹಿತರು ಇನ್ನು ಸ್ನೇಹಿತರಲ್ಲ…! ಮೂರು ಹಂತದ ಚುನಾವಣೆ ಮುಗಿದ ಬಳಿಕ ಈಗ ಪ್ರಧಾನಿ ತಮ್ಮ ಸ್ನೇಹಿತರ ಮೇಲೆಯೇ ವಾಗ್ದಾಳಿ ನಡೆಸಿದ್ದಾರೆ. ಇದು ಮೋದಿ ಜಿ ಕುರ್ಚಿ ಅಲುಗಾಡುತ್ತಿದೆ ಎಂಬುದನ್ನು ತೋರಿಸುತ್ತದೆ. ಇದು ಫಲಿತಾಂಶದ ನಿಜವಾದ ಟ್ರೆಂಡ್” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ತಮ್ಮ ಸಹೋದರ ರಾಹುಲ್ ಗಾಂಧಿ ಪ್ರತಿದಿನ ಅದಾನಿ-ಅಂಬಾನಿ ವಿಷಯದ ಬಗೆಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
“ಅವರು (ರಾಹುಲ್ ಗಾಂಧಿ) ತಮ್ಮ ಬಗ್ಗೆ ಸತ್ಯವನ್ನು ಸಾರ್ವಜನಿಕರ ಮುಂದೆ ಇಡುತ್ತಾರೆ. ಅವರು (ಬಿಜೆಪಿ) ದೊಡ್ಡ ಕೈಗಾರಿಕೋದ್ಯಮಿಗಳೊಂದಿಗೆ ನಂಟು ಹೊಂದಿದ್ದಾರೆಂದು ನಾವು ನಿಮಗೆ ಪ್ರತಿದಿನ ಹೇಳುತ್ತೇವೆ. ಅವರು ತಮ್ಮ ಸ್ನೇಹಿತರ 16 ಲಕ್ಷ ಕೋಟಿ ರೂಪಾಯಿಗಳನ್ನು ಮನ್ನಾ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ಸಾಲವನ್ನು ಮನ್ನಾ ಮಾಡಿಲ್ಲ….” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.


ರೂ 5000 ಕೋಟಿಯ ಹೊಸ ಆರ್ಡರ್: ಮೂಲಸೌಕರ್ಯ ಕಂಪನಿ ಷೇರಿಗೆ ಬೇಡಿಕೆ
ಎಸ್​ಸಿ/ಎಸ್​ಟಿ ಕುರಿತ ಸೋಷಿಯಲ್​ ಮೀಡಿಯಾ ಪೋಸ್ಟ್​: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಮಾಳವಿಯಾಗೆ ಕರ್ನಾಟಕ ಪೊಲೀಸರಿಂದ ಸಮನ್ಸ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 3 =
Remember me
