ನವದೆಹಲಿ:ವರ್ಣಭೇದ ನೀತಿಯು ಕೆಲವು ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ವಿಶೇಷವಾಗಿ ಯುನೈಟೆಡ್​ ಕಿಂಗ್​ಡಮ್​ ಮತ್ತು ಅಮೆರಿಕದಂತಹ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿ ಬಿಳಿಯರು, ಕಪ್ಪು ಜನರ ಮೇಲೆ ದಾಳಿ ಮಾಡುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದಕ್ಕೆ ಭಾರತೀಯರು ಕೂಡ ಹೊರತಾಗಿಲ್ಲ. ವಿದೇಶಗಳಲ್ಲಿ ಇತ್ತೀಚೆಗಂತೂ ಬೇರೆ ಬೇರೆ ಕಾರಣಗಳಿಗೆ ಭಾರತೀಯರ ಮೇಲೆ ದಾಳಿ ಮಾಡುವ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿದೆ.
ಕೆಲವರಿಗೆ ನಮ್ಮ ದೇಶವನ್ನು ಕಂಡರೆ ಅಸೂಯೆ. ಹೀಗಾಗಿ ಮನಬಂದಂತೆ ನಾಲಿಗೆ ಹರಿಬಿಡುತ್ತಿರುತ್ತಾರೆ. ಅದೇ ರೀತಿ ಇತ್ತೀಚೆಗೆ, ಬ್ರಿಟನ್‌ನ ಯೂಟ್ಯೂಬರ್ ಒಬ್ಬ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾನೆ. ಭಾರತದ ಮೇಲೆ ಅಣುಬಾಂಬ್ ಸಿಡಿಸುವ ಸಾಧ್ಯತೆ ಇದೆ ಎಂದಿದ್ದಾನೆ. ಸದ್ಯ ಆತನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ.
ಹೆಸರು ಮೈಲ್ಸ್ ರೂಟ್ಲೆಡ್ಜ್. ಈತ ಯುಕೆ ಮೂಲದ ಯೂಟ್ಯೂಬರ್. ಯಾವಾಗಲೂ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾನೆ. ಇದೀಗ ಭಾರತೀಯರ ವಿರುದ್ಧ ಜನಾಂಗೀಯ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೇ ರೂಟ್ಲೆಡ್ಜ್, 2021ರಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಆಫ್ಘಾನ್​ನಲ್ಲಿ ಸಿಕ್ಕಿಬಿದ್ದಿದ್ದ. ಈ ವೇಳೆ ಅನುಭವಿಸಿದ ನೋವಿನ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ.
ಇತ್ತೀಚೆಗೆ ರೂಟ್ಲೆಡ್ಜ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪರಮಾಣು ಕ್ಷಿಪಣಿಗಳನ್ನು ಉಡಾಯಿಸುತ್ತಿರುವ ಮೀಮ್ ವಿಡಿಯೋವನ್ನು ಹಂಚಿಕೊಂಡಿದ್ದ. ಇದು ವೈರಲ್​ ಆಗುತ್ತಿದ್ದಂತೆ ವಿವಾದವು ಪ್ರಾರಂಭವಾಯಿತು. ಆ ಮೀಮ್​ ವಿಡಿಯೋಗೆ ರೂಟ್ಲೆಡ್ಜ್​ ಬರೆದುಕೊಂಡಿರುವ ಪ್ರಚೋದನಕಾರಿ ಶೀರ್ಷಿಕೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ಶೀರ್ಷಿಕೆಯಲ್ಲಿ ಏನಿದೆ ಎಂದು ನೋಡುವುದಾದರೆ, ಆತ ಯುಕೆ ಪ್ರಧಾನಿಯಾದರೆ, ಬೇರೆ ದೇಶಗಳ ಸಣ್ಣ ಪ್ರಚೋದನೆಗಳಿಗೆ ಪ್ರತಿಯಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಥವಾ ಅಣು ಬಾಂಬ್​ ಬಳಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾನೆ.
When I become prime minister of England, I’ll open the nuclear silos as an explicit warning to any foreign power that interferes with British interests and affairs.
I’m not talking huge incidents, I’m itching to launch and atomize entire nations over the smallest infraction.pic.twitter.com/UGBKYB3pku
— Lord Miles (@real_lord_miles)August 20, 2024

ಈ ಮೀಮ್​ ವಿಡಿಯೋವನ್ನು ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ, ರೂಟ್ಲೆಡ್ಜ್ ಭಾರತಕ್ಕೆ ಬೆದರಿಕೆ ಹಾಕುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದನು. ನಾನು ಅದರ ಸಲುವಾಗಿ ಭಾರತದಲ್ಲೇ ಪ್ರಾರಂಭಿಸಬಹುದು ಎಂದು ರೂಟ್ಲೆಡ್ಜ್​ ಬರೆದುಕೊಂಡಿದ್ದು, ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಈ ರೂಟ್ಲೆಜ್ ಕುಚೇಷ್ಠೆ ಅಲ್ಲಿಗೆ ನಿಲ್ಲುವುದಿಲ್ಲ. ಆತ ಅನಾಮಧೇಯ ಎಕ್ಸ್​ ಬಳಕೆದಾರರ ಟ್ವೀಟ್ ಅನ್ನು ಹಂಚಿಕೊಳ್ಳಲು ಮುಂದಾದನು. ಅಲ್ಲದೆ, ತನ್ನ ವಿರುದ್ಧ ಮಾತನಾಡಿದ ಭಾರತೀಯರ ವಿರುದ್ಧ ಅವಹೇಳನಕಾರಿ ಭಾಷೆ ಮತ್ತು ಕೆಟ್ಟ ಬೈಗುಳಗಳಿಂದ ಅಪಹಾಸ್ಯ ಮಾಡಿದನು. ಜನಾಂಗೀಯ ನಿಂದನೆ ಮತ್ತು ಆಕ್ಷೇಪಾರ್ಹ ಭಾಷೆಯಿಂದ ಕೂಡಿದ ರೂಟ್ಲೆಜ್​ ಕಾಮೆಂಟ್‌ಗಳು ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಹೀಗಾಗಿ ಭಾರತೀಯ ರೂಟ್ಲೆಡ್ಜ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
SAAR SĄAR I WILL FIGHT U AFTER MY UBER EATS SHIFT SAAR DO NOT REDEEM A FLIGHT OUT OF HERE 🇮🇳💩pic.twitter.com/5wQ6PEQE29
— Lord Miles (@real_lord_miles)August 21, 2024
ತನ್ನ ವಿರುದ್ಧ ಟೀಕೆಗಳು ಹೆಚ್ಚಾದಂತೆ, ಭಾರತದ ವಿರುದ್ಧ ತನ್ನ ನಿಲುವನ್ನು ಮತ್ತಷ್ಟು ಹೆಚ್ಚಿಸಿದನು. ಭಾರತದ ಮೇಲಿರುವ ನನ್ನ ಅಸಹ್ಯವು ನಿಜವಾಗಿದೆ. ನಂಬಿ ಅಥವಾ ಬಿಡಿ, ನಾನು ಭಾರತವನ್ನು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ರೂಟ್ಲೆಜ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ. ಇದೀಗ ರೂಟ್ಲೆಜ್​ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿವೆ. ಅನೇಕ ಬಳಕೆದಾರರು ದ್ವೇಷದ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಯುಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.​ ಇಷ್ಟೆಲ್ಲ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಯೂಟ್ಯೂಬರ್ ರೂಟ್ಲೆಜ್​ ಮಾತ್ರ ಇನ್ನೂ ಕ್ಷಮೆ ಕೋರಿಲ್ಲ ಮತ್ತು ತನ್ನ ಹೇಳಿಕೆಗಳನ್ನು ಆತ ಹಿಂತೆಗೆದುಕೊಳ್ಳಬೇಕಾಗಿದೆ.(ಏಜೆನ್ಸೀಸ್​)
ವಿರಾಟ್​​ ಕೊಹ್ಲಿ SSLC ಮಾರ್ಕ್ಸ್​ ಕಾರ್ಡ್ ವೈರಲ್​!​ ರನ್​ ಮೆಷಿನ್​ ಪಡೆದ ಅಂಕ ಎಷ್ಟು? ಗಣಿತದ ಮೇಲೆ ಎಲ್ಲರ ಕಣ್ಣು

ಕೊಹ್ಲಿ, ಬುಮ್ರಾ, ಪಾಂಡ್ಯ ಅಲ್ಲವೇ ಅಲ್ಲ! ರೋಹಿತ್​ ಪ್ರಕಾರ ಟಿ20 ವಿಶ್ವಕಪ್​ ಗೆಲ್ಲಲು ಈ ಮೂವರು ಕಾರಣವಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
