ಲಖನೌ:ಹತ್ರಾಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಘಟನೆಗೆ ಸಂಬಂಧಿಸಿದಂತೆ ಹತ್ರಾಸ್‌ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಏಕೈಕ ಆರೋಪಿ ಮಧುಕರ್ ಆಗಿದ್ದಾನೆ.
ಇದನ್ನು ಓದಿ:ಮಾರ್ಕ್​ ಜುಕರ್​ಬರ್ಗ್​​​​ ಸೆಲೆಬ್ರೇಷನ್​ ವೀಡಿಯೊ ನೋಡಿ ಛೇಡಿಸಿದ ಎಲಾನ್​​ ಮಸ್ಕ್​!
ಕಳೆದ ಮಂಗಳವಾರ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟಿದ್ದರು. ಬೋಧಕ ಬಾಬಾ ಸೂರಜ್‌ಪಾಲ್ ಅವರ ಸೇವಕರು ಮತ್ತು ಸತ್ಸಂಗದ ಸಂಘಟಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದರು. ಇದಕ್ಕೂ ಮುನ್ನ 6 ಮಂದಿ ಸಿಕ್ಕಿಬಿದ್ದಿದ್ದರು. ಇಲ್ಲಿಯವರೆಗೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್​ನನ್ನು ಶುಕ್ರವಾರ ಬಂಧಿಸಲಾಯಿತು. ಬಾಬಾ ಅವರೊಂದಿಗಿನ ಅವರ ಸಂಪರ್ಕಗಳ ಬಗ್ಗೆ ಆತನನ್ನು ವಿವರವಾಗಿ ಪ್ರಶ್ನಿಸಲಾಗುವುದು ಮತ್ತು ಸಂಘಟನಾ ಸಮಿತಿಯ ಇತರ ಪ್ರಮುಖ ಸದಸ್ಯರ ಬಗ್ಗೆ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧುಕರ್​​​ನನ್ನು ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ಸಂಪರ್ಕಿಸಿವೆ. ಅವರ ಹಣಕಾಸಿನ ವಹಿವಾಟು ಮತ್ತು ಅವರಿಗೆ ಹಣ ಬರುತ್ತಿರುವ ಮೂಲವನ್ನು ಜತೆಗೆ ಅವರ ಫೋನ್​ ಕರೆಗಳ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾರಾಯಣ ಸರ್ಕಾರ್ ಹರಿ ಅಥವಾ ಸೂರಜ್ ಪಾಲ್ ಸಿಂಗ್ ಎಂದೂ ಕರೆಯಲ್ಪಡುವ ಭೋಲೆ ಬಾಬಾನ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಮಧುಕರ್ ಮತ್ತು ಇತರ ನಿಕಟ ಸಹಾಯಕರು ಹತ್ರಾಸ್‌ನಲ್ಲಿ ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. (ಏಜೆನ್ಸೀಸ್​​)
ಬಿಟೌನ್​ ಕಿಲಾಡಿ ಅಕ್ಷಯ 25 ಲಕ್ಷ ರೂ. ಕೊಟ್ಟಿದ್ದು ಯಾರಿಗೆ; ಸಹಾಯವಲ್ಲ.. ಕರ್ತವ್ಯ ಎಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
