ಲಖನೌ:ಉತ್ತರಪ್ರದೇಶದ ಹಾಥರಸ್​ನಲ್ಲಿ ಜುಲೈ 02ರಂದು ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಆಳಕೆ ಇಳಿದಷ್ಟು ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. ಘಟನೆಯ ನಂತರ ನಾರಾಯಣ ಸಕರ್ ಹರಿ​ ಅಲಿಯಾಸ್​ ಭೋಲೆ ಬಾಬಾ ಎಂಬಾತ ತಲೆಮಾರಿಸಿಕೊಂಡಿದ್ದು, ಘಟನೆ ನಡೆದಾಗ ಈತ ಪ್ರತಿಯೊಂದ ಬಗ್ಗೆಯೂ ಮಾಹಿತಿ ಪಡೆದಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದಲ್ಲದೆ ಈತ ತನ್ನ ಸಹಚರರ ಜೊತೆ ಸಂಪರ್ದಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆಯೋಜಕ ಸೇರಿದಂತೆ ಐವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯ ನಂತರ ಬಂಧಿತರು ಭೋಲೆ ಬಾಬಾಗೆ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದು, ಕ್ಷಣಕ್ಷಣದ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನನ್ನಲ್ಲಿ ವಿಶ್ವಾಸವಿರಲಿಲ್ಲ ಆದರೂ…; ಪ್ರಧಾನಿ ಮೋದಿಯೊಂದಿಗೆ ವಿಶ್ವಕಪ್​ ಪ್ರಯಾಣ ಮೆಲುಕು ಹಾಕಿದ ಕೊಹ್ಲಿ
ಬಂಧಿತರು ಕರೆ ಮಾಡಿದ್ದಾರೆ ಎನ್ನಲಾದ ನಂಬರ್​ ಬಾಬಾರ ಹೆಸರಿನಲ್ಲಿದ್ದು, ಅವರು ತಲೆಮಾರಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಬಂಧನವಾಗುವ ದಿನದಂದು ಆರೋಪಿಗಳು ಬಾಬಾಗೆ ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ. ಇವರಿಂದ ಮಾಹಿತಿ ಪಡೆದ ನಂತರ ಭೋಲೆ ಬಾಬಾ ವಕೀಲರ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ ಆರೋಪಿಗಳು ಕಾಲ್ತುಳಿಯ ಉಂಟಾದಾಗ ಬಾಬಾರ ಹೆಸರನ್ನು ಜಪ ಮಾಡುವಂತೆ ಗಾಯಾಳುಗಳಿಗೆ ಮೈಕ್​ನಲ್ಲಿ ಸೂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ ಭೋಲೆ ಬಾಬಾ ತಲೆಮಾರಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಅವರ ವಕೀಲರು ಪ್ರಕಟಣೆ ಒಂದನ್ನು ಹಂಚಿಕೊಂಡಿದ್ದು, ಭೋಲೆ ಬಾಬಾ ತಲೆಮಾರಿಸಿಕೊಂಡಿಲ್ಲ. ಅವರು ಉತ್ತರಪ್ರದೇಶದಲ್ಲೇ ಇದ್ದಾರೆ. ಅಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗುತ್ತಾರೆ. ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ಭೋಲೆ ಬಾಬಾ ಪರ ವಕೀಲರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
