ಹಾಥರಸ್:ದೇಶದ ಗಮನಸೆಳೆದಿರುವ ಹಾಥರಸ್​ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮೃತಪಟ್ಟ 19 ವರ್ಷದ ದಲಿತ ಯುವತಿಯ ಕುಟುಂಬದ ಸದಸ್ಯರು ಬಿಗಿಬಂದೋಬಸ್ತ್​ನೊಂದಿಗೆ ಸೋಮವಾರ ಅಲಹಾಬಾದ್ ಹೈಕೋರ್ಟ್​ನ ಲಖನೌ ನ್ಯಾಯಪೀಠದ ವಿಚಾರಣೆಗೆ ಹಾಜರಾಗಬೇಕಾಗಿದೆ.
ಅವರನ್ನು ಹೈಕೋರ್ಟ್​​ಗೆ ಕರೆತರುವುದಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ನೋಡೆಲ್ ಅಧಿಕಾರಿಯಾಗಿ ಹೈಕೋರ್ಟ್​ ನೇಮಕ ಮಾಡಿದೆ. ಅವರನ್ನು ಕೋರ್ಟ್​ಗೆ ಕರೆದೊಯ್ಯುವ ಮತ್ತು ಅವರ ಸಂಪೂರ್ಣ ಸುರಕ್ಷೆಯ ಹೊಣೆಗಾರಿಕೆ ಪೊಲೀಸರದ್ದು. ಆದರೆ, ಎಲ್ಲ ವಿವರವನ್ನೂ ಬಹಿರಂಗಗೊಳಿಸುವುದು ಸಾಧ್ಯವಿಲ್ಲ ಎಂದು ಹಾಥರಸ್​ ಎಸ್​ಪಿ ವಿನೀತ್ ಜೈಸ್ವಾಲ್​ ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ಆ ಏರಿಯಾ ಪೂರ್ತಿ ಆಕೆಯದ್ದೇ ದರ್ಬಾರ್! ಯಾರಾದ್ರು ಹೋದ್ರೆ ಏನ್​ ಮಾಡ್ತಾಳೆ ಗೊತ್ತಾ?
ಸಂತ್ರಸ್ತೆಯ ಮನೆ ಇರುವ ಬುಲ್​ಗಢಿಪ್ರದೇಶದಲ್ಲಿ 8 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭದ್ರತೆಗಾಗಿ 60 ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಸಂತ್ರಸ್ತೆಯ ಕುಟುಂಬದ ಸದಸ್ಯರ ರಕ್ಷಣೆಯ ಹೊಣೆಗಾರಿಕೆ ಪೊಲೀಸ್ ಇಲಾಖೆಯದ್ದಾದ ಕಾರಣ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಿನದ 24 ಗಂಟೆಯೂ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
1,200 ಕಿ.ಮೀ. ಚೇಸ್ ಮಾಡಿ ಕರ್ನಾಟಕದಲ್ಲಿ ಅರೆಸ್ಟ್​ ಮಾಡಿದ್ರು ಮುಂಬಯಿ ಪೊಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
