ಹಾಥರಸ್​: ಅತ್ಯಾಚಾರ ಪ್ರಕರಣದ ಸಂಬಂಧ ತೀವ್ರ ಬೆಳವಣಿಗೆ ನಡೆಯುತ್ತಿರುವ ನಡುವೆ ಭಾನುವಾರ ಮತ್ತಷ್ಟು ಆತಂಕ ಉಂಟಾಯಿತು. ಕಾರಣ, ವಿಶೇಷ ತನಿಖಾ ತಂಡ (ಎಸ್​ಐಟಿ) ಆಗಮಿಸಿದ್ದ ವೇಳೆಯೇ ಸಂತ್ರಸ್ತೆಯ ತಂದೆ ಕುಸಿದು ಬಿದ್ದಿದ್ದಾರೆ.
ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಗಾಗಿ ಸಂತ್ರಸ್ತೆಯ ಮನೆಗೆ ಆಗಮಿಸಿದ್ದ ಎಸ್​ಐಟಿ, ಆಕೆಯ ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಂತ್ರಸ್ತೆಯ ತಂದೆ ಕುಸಿದು ಬಿದ್ದ ಕಾರಣ, ಎಸ್​ಐಟಿ ವೈದ್ಯಕೀಯ ತಂಡದ ಮೊರೆ ಹೋಯಿತು.
ಸದ್ಯ ಅವರ ರಕ್ತದೊತ್ತಡ ಮತ್ತಿತರ ಪ್ರಾಥಮಿಕ ತಪಾಸಣೆಗಳನ್ನು ಮಾಡಿದ್ದು, ಕೋವಿಡ್​ ಟೆಸ್ಟ್ ಇನ್ನೂ ಮಾಡಿಲ್ಲ ಎಂಬುದಾಗಿ ವೈದ್ಯಕೀಯ ತಂಡ ಹೇಳಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
