ಪ್ರಯಾಗ​ರಾಜ್:ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡು ಜಾಗತಿಕವಾಗಿ ಭಾರಿ ಭೀತಿ ಸೃಷ್ಟಿಸಿ, ಇದೀಗ ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್​ ಮಹಾಮಾರಿ ದೇಶಾದ್ಯಂತ ಹರಡದಿರುವಂತೆ ತಡೆಗಟ್ಟಲು ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.
ಇದರ ನಡುವೆಯೇ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿರುವ ತೀರ್ಥ ಪುರೋಹಿತ್​ ಸಮುದಾಯವು ವೈರಸ್​ ಸೋಂಕು ಹರಡಿದಿರಲೆಂದು ಗುರುವಾರ ಹೋಮ ಹವನ ನೆರವೇರಿಸಿ, ಸುದ್ದಿಯಾಗಿದೆ.
ಭಾರತದಲ್ಲಿ ವೈರಸ್​ ಸ್ಫೋಟಗೊಳ್ಳದಂತೆ ತೀರ್ಥ ಪುರೋಹಿತ ಸಮಾಜವು ಹವನ ನೆರವೇರಿಸಿದೆ. ನಾನು ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತೇನೆ. ಹಾಗೆಯೇ ಎಲ್ಲ ಭಾರತೀಯರೂ ಚೀನಾ ವಸ್ತುಗಳನ್ನು ವಿರೋಧಸಲು ಮನವಿ ಮಾಡಿಕೊಳ್ಳುತ್ತೇನೆಂದು ಸತ್ಯೇಂದರ್​ ತಿವಾರಿ ಎಂಬುವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ತೀರ್ಥ ಪುರೋಹಿತ ಸಮಾಜದ ಯುವಕರು ಕೂಡ ಹವನವನ್ನು ನಡೆಸುತ್ತಿದ್ದಾರೆ. ಹವನ ಮಾಡುವುದರಿಂದ ಇಡೀ ಜಗತ್ತು ಕೂಡ ಶುಚಿಗೊಳ್ಳುತ್ತದೆ. ಆಮೇಲೆ ಯಾವುದೇ ವೈರಸ್​ನಿಂದ ತೊಂದರೆಯಾಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಕೂಡ ನಂಬಿದ್ದಾರೆ ಎಂದು ಅಂಕುಶ್​ ಶರ್ಮಾ ಎಂಬುವರು ಅಭಿಪ್ರಾಯಪಟ್ಟರು.
ಸದ್ಯ ಕೊರೊನಾ ವೈರಸ್​ ಭಾರತಕ್ಕೆ ಕಾಲಿಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
